ETV Bharat / bharat

ಮುಂದಿನ ಹಂತದಲ್ಲಿ ಪ್ರಧಾನಿ, ಸಚಿವರಿಗೆ ಕೋವ್ಯಾಕ್ಸಿನ್​ ಲಸಿಕೆ - ಕೊರೊನಾ ಸಂಬಂಧಿತ ಸುದ್ದಿ

50 ವರ್ಷಕ್ಕಿಂತ ಮೇಲ್ಪಟ್ಟ ರಾಜಕಾರಣಿಗಳು ವ್ಯಾಕ್ಸಿನೇಷನ್​ ಮಾಡಿಸಿಕೊಳ್ಳುವ ಸರದಿ ಮುಂದಿನ ಹಂತದಲ್ಲಿ ಬರಲಿದೆ ಎಂದು ಸಿಎಂಗಳ ಸಭೆಯಲ್ಲಿ ಪ್ರಧಾನಿ ಹೇಳಿದ್ದಾರೆ.

COVID-19
ಕೋವ್ಯಾಕ್ಸಿನ್​
author img

By

Published : Jan 21, 2021, 2:07 PM IST

Updated : Jan 21, 2021, 2:26 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯಗಳ ಮುಖ್ಯಮಂತ್ರಿಗಳು ಎರಡನೇ ಸುತ್ತಿನಲ್ಲಿ ಕೋವಿಡ್ -19 ವ್ಯಾಕ್ಸಿನ್​ ಹಾಕಿಸಿಕೊಳ್ಳುವ ಸಾಧ್ಯತೆಯಿದೆ.

50 ವರ್ಷಕ್ಕಿಂತ ಮೇಲ್ಪಟ್ಟ ರಾಜಕಾರಣಿಗಳು ವ್ಯಾಕ್ಸಿನೇಷನ್​ ಮಾಡಿಸಿಕೊಳ್ಳುವ ಸರದಿ ಮುಂದಿನ ಹಂತದಲ್ಲಿ ಬರಲಿದೆ ಎಂದು ಸಿಎಂಗಳ ಸಭೆಯಲ್ಲಿ ಪ್ರಧಾನಿ ಹೇಳಿದರು.

ಕೋವಿಡ್​ ಲಸಿಕೆಗಳ ಸುರಕ್ಷತೆಯ ಬಗ್ಗೆ ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ಎತ್ತಿದ ವಿವಿಧ ಪ್ರಶ್ನೆಗಳ ಮಧ್ಯೆ ಈ ಹೇಳಿಕೆಯನ್ನು ಪಿಎಂ ನೀಡಿದ್ದಾರೆ. ಅಷ್ಟೇ ಅಲ್ಲದೆ, ಎಲ್ಲಾ ವದಂತಿಗಳಿಗೆ ಅಂತ್ಯ ಹಾಡುವಂತೆ ಆಡಳಿತಾರೂಢ ಬಿಜೆಪಿಯ ಸಚಿವರು ವ್ಯಾಕ್ಸಿನ್​ ಮೊದಲು ತೆಗೆದುಕೊಳ್ಳಬೇಕು ಎಂಬ ಬೇಡಿಕೆಗಳ ನಡುವೆ ಪ್ರಧಾನಿ ಈ ನಿರ್ಧಾರ ಕೈಗೊಂಡಿದ್ದಾರೆ.

ಇಲ್ಲಿಯವರೆಗೆ ಒಟ್ಟು 7.86 ಲಕ್ಷ ಆರೋಗ್ಯ ಕಾರ್ಯಕರ್ತರು ಕೊರೊನಾ ಲಸಿಕೆಯನ್ನು ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ತಾತ್ಕಾಲಿಕ ವರದಿಯಲ್ಲಿ ತಿಳಿಸಲಾಗಿದೆ.

Last Updated : Jan 21, 2021, 2:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.