ಜಲೌನ್(ಉತ್ತರ ಪ್ರದೇಶ): 'ದೇಶದಲ್ಲಿ ಉಚಿತ ರೇವಡಿ ಹಂಚುವ ಸಂಸ್ಕೃತಿ ಹುಟ್ಟಿಕೊಂಡಿದ್ದು, ಇದು ದೇಶದ ಅಭಿವೃದ್ಧಿಗೆ ಅಪಾಯಕಾರಿ' ಎಂದು ಪ್ರಧಾನಿ ನರೇಂದ್ರ ಮೋದಿ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಉತ್ತರ ಪ್ರದೇಶದ ಬುಂದೇಲ್ಖಂಡ್ ಎಕ್ಸ್ಪ್ರೇಸ್ವೇ ಲೋಕಾರ್ಪಣೆಗೊಳಿಸಿ ಮಾತನಾಡಿದ ಪ್ರಧಾನಿ, ನಾವೆಲ್ಲರೂ ಒಗ್ಗಟ್ಟಿನಿಂದ ದೇಶದ ರಾಜಕೀಯದಲ್ಲಿರುವ ರೇವಡಿ ಸಂಸ್ಕೃತಿ ತೊಡೆದು ಹಾಕಬೇಕಾಗಿದೆ ಎಂದರು.
ರೇವಡಿ ಸಂಸ್ಕೃತಿ ಹೊಂದಿರುವವರು ನಿಮಗೋಸ್ಕರ ಹೊಸ ಎಕ್ಸ್‌ಪ್ರೆಸ್‌ವೇ, ಹೊಸ ವಿಮಾನ ನಿಲ್ದಾಣ ಅಥವಾ ರಕ್ಷಣಾ ಕಾರಿಡಾರ್ ನಿರ್ಮಾಣ ಮಾಡಲ್ಲ. ಉಚಿತ ರೇವಡಿ ಹಂಚುವ ಮೂಲಕ ಮತ ಸಂಗ್ರಹಿಸುವ ಕೆಲಸ ಮಾಡ್ತಿದ್ದಾರೆ. ಇದು ದೇಶಕ್ಕೆ ಅಪಾಯಕಾರಿಯಾಗಿದೆ ಎಂದು ಕಿಡಿಕಾರಿದರು.
-
#WATCH | Prime Minister Narendra Modi plants a sapling at the site of the inauguration of Bundelkhand Expressway, in Jalaun, Uttar Pradesh.
— ANI (@ANI) July 16, 2022 " class="align-text-top noRightClick twitterSection" data="
(Source: DD News) pic.twitter.com/9ldGAsXMRK
">#WATCH | Prime Minister Narendra Modi plants a sapling at the site of the inauguration of Bundelkhand Expressway, in Jalaun, Uttar Pradesh.
— ANI (@ANI) July 16, 2022
(Source: DD News) pic.twitter.com/9ldGAsXMRK#WATCH | Prime Minister Narendra Modi plants a sapling at the site of the inauguration of Bundelkhand Expressway, in Jalaun, Uttar Pradesh.
— ANI (@ANI) July 16, 2022
(Source: DD News) pic.twitter.com/9ldGAsXMRK
ಬುಂದೇಲ್ಖಂಡ್ ಎಕ್ಸ್ಪ್ರೇಸ್ವೇ ಲೋಕಾರ್ಪಣೆ: ಉತ್ತರ ಪ್ರದೇಶದ ಬುಂದೇಲ್ಖಂಡ್ದಲ್ಲಿ ನಿರ್ಮಾಣಗೊಂಡಿರುವ ಬರೋಬ್ಬರಿ 14,850 ಕೋಟಿ ರೂಪಾಯಿ ವೆಚ್ಚದ ಎಕ್ಸ್‌ಪ್ರೆಸ್‌ವೇ ಲೋಕಾರ್ಪಣೆಗೊಳಿಸಿದ ನರೇಂದ್ರ ಮೋದಿ, ಉತ್ತರ ಪ್ರದೇಶದಲ್ಲಿ ಮೂಲಭೂತ ಸೌಕರ್ಯ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗ್ತಿದೆ. ಈ ಮೂಲಕ ಅನೇಕ ಉತ್ತಮ ಸಾಧನೆ ಮಾಡಿರುವ ರಾಜ್ಯಗಳ ಸಾಲಿನಲ್ಲೂ ಉತ್ತರ ಪ್ರದೇಶ ಸಹ ನಿಲ್ಲುತ್ತದೆ ಎಂದು ತಿಳಿಸಿದರು.
ದೇಶಕ್ಕೆ ಹಾನಿ ಉಂಟು ಮಾಡುವ, ದೇಶದ ಅಭಿವೃದ್ಧಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಎಲ್ಲರನ್ನೂ ನಾವು ದೂರವಿಡಬೇಕು. ಉತ್ತರ ಪ್ರದೇಶ ಅಸಂಖ್ಯಾತ ಯೋಧರನ್ನ ಹುಟ್ಟುಹಾಕಿರುವ ಭೂಮಿ. ಈ ಮಣ್ಣಿನಲ್ಲಿ ನಿಂತುಕೊಂಡು ಎಕ್ಸ್ಪ್ರೆಸ್ ವೇ ಲೋಕಾರ್ಪಣೆಗೊಳಿಸಲು ಹೆಮ್ಮೆಯಾಗುತ್ತದೆ ಎಂದರು.
ಇದನ್ನೂ ಓದಿರಿ: ಹಜ್ ಯಾತ್ರಿಕರಿಗೆ ಆರತಿ ಬೆಳಗಿ ಸ್ವಾಗತಿಸಿದ ಕಾಶ್ಮೀರಿ ಹಿಂದೂಗಳು... ವಿಡಿಯೋ
ಏನಿದು ರೇವಡಿ: ರೇವಡಿ ಎಂಬುವುದು ಒಂದು ಸಿಹಿ ಪದಾರ್ಥ. ಹರಿಯಾಣದ ರೇವರಿಯಲ್ಲಿ ಈ ಸಿಹಿತಿಂಡಿ ಹುಟ್ಟಿದ್ದರಿಂದ ಇದಕ್ಕೆ ರೇವಡಿ ಎಂದು ಕರೆಯಲಾಗ್ತದೆ. ಆದರೆ, ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಬೇರೆ ಅರ್ಥದೊಂದಿಗೆ ಈ ಹೆಸರು ಉಲ್ಲೇಖ ಮಾಡಿದ್ದು, ಸಿಹಿ ಮಾತಾಡುವ ಜನರು ದೇಶದ ಹಾದಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ ಎಂಬ ರೀತಿಯಲ್ಲಿ ಬಳಸಿದ್ದಾರೆ.
-
Free education, healthcare not freebies, waiving loans of friends is "free ki revadi": Delhi CM Kejriwal on PM's "revadi culture" remark
— Press Trust of India (@PTI_News) July 16, 2022 " class="align-text-top noRightClick twitterSection" data="
">Free education, healthcare not freebies, waiving loans of friends is "free ki revadi": Delhi CM Kejriwal on PM's "revadi culture" remark
— Press Trust of India (@PTI_News) July 16, 2022Free education, healthcare not freebies, waiving loans of friends is "free ki revadi": Delhi CM Kejriwal on PM's "revadi culture" remark
— Press Trust of India (@PTI_News) July 16, 2022
ಫೆಬ್ರವರಿ 29, 2020 ರಂದು ಪ್ರಧಾನಿ ಮೋದಿ ಅವರು ಈ ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದರು. ಈ ಯೋಜನೆಯನ್ನು 28 ತಿಂಗಳೊಳಗೆ ಪೂರ್ಣಗೊಳಿಸಲಾಗಿದೆ. ಉತ್ತರ ಪ್ರದೇಶ ಎಕ್ಸ್‌ಪ್ರೆಸ್‌ವೇಸ್ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಅಥಾರಿಟಿ (ಯುಪಿಇಐಡಿಎ) ಅಡಿ ಸುಮಾರು 14,850 ಕೋಟಿ ರೂಪಾಯಿ ವೆಚ್ಚದಲ್ಲಿ 296 ಕಿಮೀ ಉದ್ದದಲ್ಲಿ ನಿರ್ಮಿಸಲಾಗಿದೆ. ಇದನ್ನು ಮುಂದೆ ಆರು ಪಥಗಳಾಗಿ ವಿಸ್ತರಿಸಬಹುದಾಗಿದೆ.
ಕೇಜ್ರಿವಾಲ್ ವಾಗ್ದಾಳಿ: ಇದೇ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ. ಉಚಿತ ರೇವಡಿ ಎಂದರೇನು ಎಂಬುದನ್ನ ನಾನು ನಿಮಗೆ ಹೇಳುತ್ತೇನೆ ಎಂದು ತಿಳಿಸಿದ್ದಾರೆ.