ಅಹಮದಾಬಾದ್(ಗುಜರಾತ್): ಕೊರೊನಾ ಸೋಂಕು ಎಲ್ಲರನ್ನೂ ಕಾಡುತ್ತಿದ್ದು, ಈಗ ಪ್ರಧಾನಿ ಮೋದಿ ಅವರ ಚಿಕ್ಕಮ್ಮ ನರ್ಮದಾಬೆನ್ ಮೋದಿ (80) ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಅಹಮದಾಬಾದ್ನ ಸಿವಿಲ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ನರ್ಮದಾಬೆನ್ ಮೋದಿ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮೃತಪಟ್ಟಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಸೋಲಾರ್ ಹಗರಣದ ಆರೋಪಿ ಸರಿತಾ ನಾಯರ್ಗೆ 6 ವರ್ಷ ಜೈಲು
ನರ್ಮದಾಬೆನ್ ತನ್ನ ಮಕ್ಕಳೊಂದಿಗೆ ಅಹಮದಾಬಾದ್ ನಗರದ ನ್ಯೂ ರೇನಿಪ್ ಪ್ರದೇಶದಲ್ಲಿ ವಾಸವಾಗಿದ್ದರು. ಕೊರೊನಾ ವೈರಸ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು 10 ದಿನಗಳ ಹಿಂದೆ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈಗ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಪ್ರಧಾನಿ ಮೋದಿ ಅವರ ಕಿರಿಯ ಸಹೋದರ ಪ್ರಹ್ಲಾದ್ ಮೋದಿ ಹೇಳಿದ್ದಾರೆ. ನರ್ಮದಾ ಬೆನ್ ಅವರ ಪತಿ ಸುಮಾರು ವರ್ಷಗಳ ಹಿಂದೆಯೇ ತೀರಿಕೊಂಡಿದ್ದರೆಂದು ಪ್ರಹ್ಲಾದ್ ಮೋದಿ ಮಾಹಿತಿ ನೀಡಿದ್ದಾರೆ.