ETV Bharat / bharat

ಕೈಲಾಶ್​ ವಿಜಯವರ್ಗಿಯ ತಮ್ಮನ ಮಗನ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ..ಕುತೂಹಲ ಕೆರಳಿಸಿದ ಭೇಟಿ! - ರಾಜಕೀಯ ವಲಯದಲ್ಲಿ ಮತ್ತೊಂದು ಚರ್ಚೆ

ಕೈಲಾಶ್​ ವಿಜಯವರ್ಗಿಯ ತಮ್ಮನ ಮಗನ ಆರತಕ್ಷತೆಯಲ್ಲಿ ಪಾಲ್ಗೊಳ್ಳಲು ಇಂದೋರ್​ಗೆ ಆಗಮಿಸಿ, ನವದಂಪತಿಗೆ ಆಶೀರ್ವದಿಸಿದ್ದಾರೆ. ಈ ಭೇಟಿ ರಾಜಕೀಯ ವಲಯದಲ್ಲಿ ಮತ್ತೊಂದು ಚರ್ಚೆಯನ್ನು ಹುಟ್ಟುಹಾಕಿದೆ.

pm modi attends kailash vijayvargiya nephew wedding
ಕೈಲಾಶ್​ ವಿಜಯವರ್ಗಿಯ ಸೋದರಳಿಯನ ಮದುವೆ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
author img

By

Published : Dec 23, 2022, 1:41 PM IST

ಇಂದೋರ್(ಮಧ್ಯಪ್ರದೇಶ): ಕೇಂದ್ರದಲ್ಲಿ ಅಧಿಕಾರ ಹಿಡಿದು 8 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಅವರ ಸಹೋದರನ ಮಗನ ವಿವೇಕ್ ವಿಜಯವರ್ಗಿಯ ಅವರ ವಿವಾಹ ಆರತಕ್ಷತೆಯಲ್ಲಿ ಪಾಲ್ಗೊಳ್ಳಲು ಗುರುವಾರ ರಾತ್ರಿ ಪ್ರಧಾನಿ ಮೋದಿ ಇಂದೋರ್​ಗೆ ಆಗಮಿಸಿದ್ದರು. ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಇದೀಗ ಹಲವು ಅರ್ಥಗಳನ್ನು ಪಡೆಯುತ್ತಿದೆ.

ವಿಜಯವರ್ಗಿಯ ಅವರು ಹಲವು ವರ್ಷಗಳಿಂದ ಬಿಜೆಪಿ ಜೊತೆ ಸಂಬಂಧ ಹೊಂದಿದ್ದು, ಪಕ್ಷದ ಸಕ್ರಿಯ ನಾಯಕರಾಗಿದ್ದಾರೆ. ಅದಲ್ಲದೇ ಪ್ರಧಾನಿ ಮೋದಿಯವರ ಮೆಚ್ಚಿನ ವ್ಯಕ್ತಿಗಳಲ್ಲಿ ಅವರೂ ಒಬ್ಬರು. ಹಾಗಾಗಿ ಕೈಲಾಶ್​ ವಿಜಯವರ್ಗಿಯ ತಮ್ಮನ ಮಗನ ಮದುವೆ ಆರತಕ್ಷತೆಯಲ್ಲಿ ಪಾಲ್ಗೊಳ್ಳಲು ಇಂದೋರ್​ಗೆ ಆಗಮಿಸಿ, ನವದಂಪತಿಯನ್ನು ಆಶೀರ್ವದಿಸಿದ್ದಾರೆ. ಈ ಭೇಟಿ ರಾಜಕೀಯ ವಲಯದಲ್ಲಿ ಮತ್ತೊಂದು ಚರ್ಚೆಯನ್ನು ಹುಟ್ಟುಹಾಕಿದೆ. ಇದೇ ವೇಳೆ, ಹಲವು ಕೇಂದ್ರ ಸಚಿವರು, ಸಂಸದರು ಹಾಗೂ ದೇಶದ ಹೇಸರಾಂತ ಕೈಗಾರಿಕೋದ್ಯಮಿಗಳೂ ಸಮಾರಂಭದಲ್ಲಿ ಭಾಗವಹಿಸಿದ್ದರು.

ವಿಜಯವರ್ಗಿಯ ವರ್ಚಸ್ಸು ಹೆಚ್ಚುತ್ತಿದೆಯೇ: ಮೋದಿ ಮದುವೆ ಸಮಾರಂಭದಲ್ಲಿ ಭಾಗವಹಿಸಿದ ನಂತರ ಕೈಲಾಶ್​ ವಿಜಯವರ್ಗಿಯ ಅವರ ಹೆಸರುಗಳು ಮುನ್ನೆಲೆಗೆ ಬಂದಿದ್ದು, ಇದೀಗ ರಾಜಕೀಯ ವಲಯದಲ್ಲಿ ವಿಜಯವರ್ಗಿಯ ಅವರ ರಾಜಕೀಯ ಸ್ಥಾನಮಾನಕ್ಕೆ ಇದು ಲಿಂಕ್ ಮಾಡುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆಯಾಗದಿದ್ದರೂ ಉಸ್ತುವಾರಿಯಾಗಿ ವಿಜಯವರ್ಗಿಯ ಅವರು ಅಲ್ಲಿ ಸಂಘಟನೆಯನ್ನು ಬಲಪಡಿಸಿದ್ದು, ಇದರಿಂದ ಅವರ ರಾಜಕೀಯ ಹಿರಿಮೆ ಹೆಚ್ಚುತ್ತಿದೆ ಎಂದು ಹೇಳಲಾಗುತ್ತಿದೆ.

ಸಂಸ್ಥೆಯು ಅವರಿಗೆ ಮತ್ತೊಮ್ಮೆ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿದ್ದರೂ, 2023ರಲ್ಲಿ ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ವಿಜಯವರ್ಗಿಯ ಅವರಿಗೆ ಮಹತ್ವದ ಜವಾಬ್ದಾರಿ ನೀಡಬಹುದು ಎಂದು ಹೇಳಲಾಗುತ್ತಿದೆ.

ಕೈಲಾಶ್ ವಿಜಯವರ್ಗಿಯ ಅವರ ಕಿರಿಯ ಸಹೋದರ ವಿಜಯ್ ವಿಜಯವರ್ಗಿಯ ಅವರ ಪುತ್ರ ವಿವೇಕ್ ಅವರ ವಿವಾಹ ಡಿಸೆಂಬರ್ ಮೊದಲ ವಾರದಲ್ಲಿ ನಡೆದಿತ್ತು, ಆದರೆ ವಿಜಯವರ್ಗಿಯಾ ಗುರುವಾರ ದೆಹಲಿಯಲ್ಲಿ ಆರತಕ್ಷತೆ ಏರ್ಪಡಿಸಿದ್ದರು. ಇದರಲ್ಲಿ ಪ್ರಧಾನಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಈ ವೇಳೆ ಪ್ರಧಾನಿಯವರು ವಿಜಯವರ್ಗಿಯ ಕುಟುಂಬದವರೊಂದಿಗೆ ಛಾಯಾಚಿತ್ರ ತೆಗೆಸಿಕೊಂಡಿದ್ದಾರೆ.

ಪ್ರಧಾನಿ ವೇದಿಕೆಗೆ ಬಂದ ಕೂಡಲೇ ನವ ದಂಪತಿ ಅವರ ಪಾದ ಮುಟ್ಟಿ ಆಶೀರ್ವಾದ ಪಡೆದರು. ನವದಂಪತಿಯನ್ನು ಆಶೀರ್ವಸಿದ ಪ್ರಧಾನಿ ಕುರ್ತಾ-ಪೈಜಾಮಾ ಧರಿಸಿ ತಮ್ಮ ಭುಜದ ಮೇಲೆ ಮಫ್ಲರ್ ಅನ್ನು ನೇತುಹಾಕಿಕೊಂಡು ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ಕರ್ನಾಟಕಕ್ಕೆ ಆಗಮಿಸಲಿದೆ ಬಿಜೆಪಿ ಅಗ್ರ ರಾಷ್ಟ್ರೀಯ ನಾಯಕರ ದಂಡು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.