ETV Bharat / bharat

ಕಾಂಗ್ರೆಸ್​​ ಸುಳ್ಳನ್ನು ಸತ್ಯದಿಂದ ಸೋಲಿಸಿ, ಸರ್ಕಾರದ ಕೆಲಸದ ಬಗ್ಗೆ ಜನರಿಗೆ ಅರಿವು ಮೂಡಿಸಿ: ಪ್ರಧಾನಿ ಮೋದಿ ಕರೆ

ಕಾಂಗ್ರೆಸ್​ ಮಾಡುವ ಆರೋಪಗಳನ್ನು ಸತ್ಯ ಹೇಳುವ ಮೂಲಕ ಸೋಲಿಸಿ, ನಮ್ಮ ಸರ್ಕಾರದ ಕೆಲಸಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಸಂಸದರಿಗೆ ಕರೆ ಕೊಟ್ಟಿದ್ದಾರೆ.

PM Modi
PM Modiಬಿಜೆಪಿ ಸಂಸದರ ಸಭೆ ನಡೆಸಿದ ಮೋದಿ
author img

By

Published : Jul 20, 2021, 1:19 PM IST

ನವದೆಹಲಿ: ಸರ್ಕಾರದ ಕೆಲಸಗಳ ಬಗ್ಗೆ ಸತ್ಯಗಳನ್ನು ಜನರ ಮುಂದಿಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತೀಯ ಜನತಾ ಪಕ್ಷದ ಸಂಸದರಿಗೆ ಸೂಚಿಸಿದ್ದಾರೆ. ಪ್ರತಿಪಕ್ಷಗಳು, ವಿಶೇಷವಾಗಿ ಕಾಂಗ್ರೆಸ್ ಪ್ರಚಾರ ಮಾಡಿದ ಸುಳ್ಳುಗಳನ್ನು ಸೋಲಿಸಲು ಜನರಿಗೆ ಸತ್ಯವನ್ನು ಹೇಳುತ್ತಲೇ ಇರಬೇಕೆಂದು ಬಿಜೆಪಿಯ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ಮೋದಿ ಸಂಸದರಿಗೆ ಕರೆ ಕೊಟ್ಟರು.

PM Modi
ಬಿಜೆಪಿ ಸಂಸದರ ಸಭೆ ನಡೆಸಿದ ಮೋದಿ

ಸರ್ಕಾರದ ಕೆಲಸಗಳ ಬಗ್ಗೆ ಸತ್ಯವನ್ನು ಜನರ ಮುಂದೆ ತೆರೆದಿಡುವ ಮೂಲಕ ಪ್ರತಿಪಕ್ಷಗಳ ಸುಳ್ಳುಗಳ ಸ್ಥಳವನ್ನು ಸತ್ಯದಿಂದ ತುಂಬಿ ಎಂದು ಹೇಳಿದ್ರು. ಕಾಂಗ್ರೆಸ್ ತನ್ನ ಮತದಾರರ ಬಗ್ಗೆ ಚಿಂತಿಸುತ್ತಿಲ್ಲ. ಇದು 60 ವರ್ಷಗಳಿಂದ ದೇಶವನ್ನು ಆಳಿದೆ ಎಂಬ ಪ್ರಜ್ಞೆಯಲ್ಲೇ ಇದೆ. ಅವರಿಗೆ ಸತ್ಯವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ, ಈ ಕಾರಣದಿಂದಾಗಿ ಜನರು ನಮ್ಮನ್ನು ಆಯ್ಕೆ ಮಾಡಿದ್ದಾರೆ ಎಂದು ನರೇಂದ್ರ ಮೋದಿ ಹೇಳಿದ್ರು.

ಪಶ್ಚಿಮ ಬಂಗಾಳ, ಅಸ್ಸೋಂ ಚುನಾವಣೆಗಳ ಬಳಿಕವೂ ವಿರೋಧಿಯಾಗಿ ಕಾಂಗ್ರೆಸ್​ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎಂದು ಮೋದಿ ಇದೇ ವೇಳೆ ಹೇಳಿದರು.

ಇದನ್ನೂ ಓದಿ:Pegasus: ಕೇಂದ್ರದ ವಿರುದ್ಧ ಕೈ ನಾಯಕರ ವಾಕ್ಸಮರ.. ನ್ಯಾಯಾಂಗ ತನಿಖೆಗೆ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.