ನವದೆಹಲಿ/ಟೋಕಿಯೋ: ಕ್ವಾಡ್ ರಾಷ್ಟ್ರಗಳ ನಾಯಕರ ಶೃಂಗಸಭೆಯ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಜಪಾನ್‌ಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಇಂದು ಬೆಳಗ್ಗೆ ಟೋಕಿಯೋದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಈ ವೇಳೆ ಜಪಾನಿ ಬಾಲಕನೊಬ್ಬ ಭಾರತದ ತ್ರಿವರ್ಣ ಧ್ವಜದ ಪ್ಲಕಾರ್ಡ್ ಹಿಡಿದು, ಮೋದಿ ಅವರೊಂದಿಗೆ ಹಿಂದಿಯಲ್ಲಿ ಮಾತನಾಡಿದ. ಬಾಲಕನ ಮಾತು ಕೇಳಿ ಪ್ರಧಾನಿ ಸಂತಸಗೊಂಡರು.
ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಪುಟ್ಟ ಮಕ್ಕಳು ವಿವಿಧ ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲಾದ 'ಸ್ವಾಗತ' ಫಲಕಗಳನ್ನು ಹಿಡಿದು ಟೋಕಿಯೋ ವಿಮಾನ ನಿಲ್ದಾಣದಲ್ಲಿ ನಿಂತಿದ್ದರು. ಮಕ್ಕಳ ಬಳಿ ತೆರಳಿದ ಮೋದಿ, ಕೆಲ ಕಾಲ ಸಂವಾದ ನಡೆಸಿದರು.
-
#WATCH | "Waah! Where did you learn Hindi from?... You know it pretty well?," PM Modi to Japanese kids who were awaiting his autograph with Indian kids on his arrival at a hotel in Tokyo, Japan pic.twitter.com/xbNRlSUjik
— ANI (@ANI) May 22, 2022 " class="align-text-top noRightClick twitterSection" data="
">#WATCH | "Waah! Where did you learn Hindi from?... You know it pretty well?," PM Modi to Japanese kids who were awaiting his autograph with Indian kids on his arrival at a hotel in Tokyo, Japan pic.twitter.com/xbNRlSUjik
— ANI (@ANI) May 22, 2022#WATCH | "Waah! Where did you learn Hindi from?... You know it pretty well?," PM Modi to Japanese kids who were awaiting his autograph with Indian kids on his arrival at a hotel in Tokyo, Japan pic.twitter.com/xbNRlSUjik
— ANI (@ANI) May 22, 2022
ಜಪಾನಿನ ವಿಝುಕಿ ಎಂಬ ಬಾಲಕ ಹಿಂದಿ ಭಾಷೆಯಲ್ಲಿ 'ಜಪಾನ್‌ಗೆ ಸ್ವಾಗತ, ದಯವಿಟ್ಟು ನಿಮ್ಮ ಆಟೋಗ್ರಾಫ್ ಕೊಡಬಹುದೇ? ಎಂದು ಕೇಳಿದ. ಅವನ ಮಾತು ಕೇಳಿದ ಪ್ರಧಾನಿ, ವಾಹ್! ನೀನು ಹಿಂದಿ ಎಲ್ಲಿಂದ ಕಲಿತೆ?. ನಿನಗೆ ಹಿಂದಿ ಚೆನ್ನಾಗಿ ತಿಳಿದಿದೆಯೇ?' ಎಂದು ಪ್ರಶ್ನಿಸಿದರು.
'ನನಗೆ ಹೆಚ್ಚು ಹಿಂದಿ ಮಾತನಾಡಲು ಬರುವುದಿಲ್ಲ, ಆದರೆ ಅರ್ಥವಾಗುತ್ತೆ ಎಂದ. ಮೋದಿಯವರು ನನ್ನ ಸಂದೇಶ ಓದಿದರು. ನಾನು ಅವರ ಸಹಿ ಪಡೆದುಕೊಂಡೆ, ಬಹಳ ಸಂತೋಷವಾಯಿತು ಎಂದುಬಾಲಕ ವಿಝುಕಿ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ.
-
#WATCH | "...Can't speak Hindi much, but I understand...PM read my message, and I also got his signature, so I am very happy...," said grade 5 student Wizuki on his interaction with PM Modi in Tokyo, Japan pic.twitter.com/1V3RjnpQQF
— ANI (@ANI) May 23, 2022 " class="align-text-top noRightClick twitterSection" data="
">#WATCH | "...Can't speak Hindi much, but I understand...PM read my message, and I also got his signature, so I am very happy...," said grade 5 student Wizuki on his interaction with PM Modi in Tokyo, Japan pic.twitter.com/1V3RjnpQQF
— ANI (@ANI) May 23, 2022#WATCH | "...Can't speak Hindi much, but I understand...PM read my message, and I also got his signature, so I am very happy...," said grade 5 student Wizuki on his interaction with PM Modi in Tokyo, Japan pic.twitter.com/1V3RjnpQQF
— ANI (@ANI) May 23, 2022
ಇಂಡೋ-ಪೆಸಿಫಿಕ್, ಜಾಗತಿಕ ಸಮಸ್ಯೆಗಳು ಹಾಗೂ ಪ್ರಭಾವಿ ರಾಷ್ಟ್ರಗಳ ನಡುವಿನ ಸಹಕಾರವನ್ನು ಮತ್ತಷ್ಟು ಹೆಚ್ಚಿಸುವ ಹಿನ್ನೆಲೆಯಲ್ಲಿ ಟೋಕಿಯೋ ನಗರದಲ್ಲಿ ನಾಳೆ ನಡೆಯಲಿರುವ ಕ್ವಾಡ್ ರಾಷ್ಟ್ರಗಳ ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್‌ಗೆ ಭಾರತದ ಪ್ರಧಾನಿ ತೆರಳಿದ್ದಾರೆ.
ಇದನ್ನೂ ಓದಿ: ಕ್ವಾಡ್ ಶೃಂಗಸಭೆ: ಟೋಕಿಯೋದಲ್ಲಿ ಪ್ರಧಾನಿ ಮೋದಿಗೆ ಆತ್ಮೀಯ ಸ್ವಾಗತ