ನೋಯ್ಡಾ(ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದೆ. ಹೀಗಾಗಿ, ಮತ್ತೊಂದು ಅವಧಿಗೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಇನ್ನಿಲ್ಲದ ಕರಸತ್ತು ನಡೆಸುತ್ತಿದೆ.
ಈ ನಿಟ್ಟಿನಲ್ಲಿ ಈಗಾಗಲೇ ರಾಜ್ಯದಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿರುವ ಪ್ರಧಾನಿ ಮೋದಿ, ಇಂದು ನೋಯ್ಡಾದಲ್ಲಿ ಏಷ್ಯಾದ ಅತಿದೊಡ್ಡ ಏರ್ಪೋರ್ಟ್ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು.
ಗೌತಮ ಬುದ್ಧನಗರದ ಜೇವರ್‌ನಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಏರ್ಪೋರ್ಟ್ಗಳ ನಿರ್ಮಾಣದಿಂದ ದೇಶದ ಆರ್ಥಿಕತೆ, ಅಭಿವೃದ್ಧಿಗೆ ಹೆಚ್ಚಿನ ಲಾಭವಾಗಲಿದೆ. ಪ್ರವಾಸೋದ್ಯಮ, ಸರಕು ಸಾಗಣೆಯ ಜೊತೆಗೆ, ಉದ್ಯೋಗ ಸೃಷ್ಟಿಸಲು ವಿಮಾನ ನಿಲ್ದಾಣಗಳು ಹೆಚ್ಚು ಸಹಕಾರಿ. ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಉತ್ತರ ಭಾರತದ ಸರಕು ಸಾಗಣೆಗೆ ದೊಡ್ಡ ಹೆದ್ದಾರಿ ಆಗಲಿದೆ ಎಂದರು.
-
#WATCH | Some people caused a series of riots here. Today, the country has to decide whether it wants to give new wings to the sweetness of sugarcane here or let the followers of Jinnah run riot: UP CM Yogi Adityanath on the occasion of foundation laying of Jewar airport pic.twitter.com/aoCMquUI9w
— ANI UP (@ANINewsUP) November 25, 2021 " class="align-text-top noRightClick twitterSection" data="
">#WATCH | Some people caused a series of riots here. Today, the country has to decide whether it wants to give new wings to the sweetness of sugarcane here or let the followers of Jinnah run riot: UP CM Yogi Adityanath on the occasion of foundation laying of Jewar airport pic.twitter.com/aoCMquUI9w
— ANI UP (@ANINewsUP) November 25, 2021#WATCH | Some people caused a series of riots here. Today, the country has to decide whether it wants to give new wings to the sweetness of sugarcane here or let the followers of Jinnah run riot: UP CM Yogi Adityanath on the occasion of foundation laying of Jewar airport pic.twitter.com/aoCMquUI9w
— ANI UP (@ANINewsUP) November 25, 2021
ಈ ವಿಮಾನ ನಿಲ್ದಾಣ ರಾಜ್ಯದ ಸಾವಿರಾರು ಜನರಿಗೆ ಉದ್ಯೋಗ ಸೃಷ್ಟಿಸಿ ಕೊಡಲಿದೆ. ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದ್ದು ಏರ್ಪೋರ್ಟ್ನಿಂದ ಕೋಟ್ಯಂತರ ಜನರಿಗೆ ಪ್ರಯೋಜನವಾಗಲಿದೆ. ಅನೇಕ ಅಂತಾರಾಷ್ಟ್ರೀಯ ಮಾರುಕಟ್ಟೆಗಳೊಂದಿಗೆ ಇಲ್ಲಿಂದ ನೇರ ಸಂಪರ್ಕ ಸಿಗುತ್ತೆ. ಈ ಪ್ರದೇಶದ ರೈತರು ಬೆಳೆಯುವ ತರಕಾರಿ, ಹಣ್ಣು ಮತ್ತು ಮೀನು ವಿದೇಶಕ್ಕೆ ರಫ್ತು ಮಾಡಲು ಅನುವಾಗಲಿದೆ ಎಂದು ಪ್ರಧಾನಿ ವಿವರಿಸಿದರು.
ಕಳೆದ ಕೆಲವು ವರ್ಷಗಳಿಂದ ಉತ್ತರ ಪ್ರದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಪ್ರಯತ್ನಿಸಲಾಗುತ್ತಿದ್ದು, ರಾಜ್ಯವು ಇದೀಗ ಬಹುರಾಷ್ಟ್ರೀಯ ಕಂಪನಿಗಳ ಕೇಂದ್ರವಾಗಿದೆ ಎಂದರು. ಈ ಕಾರ್ಯಕ್ರಮದಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
-
#WATCH | Noida International Airport will directly connect a major centre of export with international markets. It will enable farmers of this region to export perishable goods like vegetables, fruits, & fish. It will help MSMEs of western UP to reach foreign markets: PM Modi pic.twitter.com/pw54X3GC4t
— ANI UP (@ANINewsUP) November 25, 2021 " class="align-text-top noRightClick twitterSection" data="
">#WATCH | Noida International Airport will directly connect a major centre of export with international markets. It will enable farmers of this region to export perishable goods like vegetables, fruits, & fish. It will help MSMEs of western UP to reach foreign markets: PM Modi pic.twitter.com/pw54X3GC4t
— ANI UP (@ANINewsUP) November 25, 2021#WATCH | Noida International Airport will directly connect a major centre of export with international markets. It will enable farmers of this region to export perishable goods like vegetables, fruits, & fish. It will help MSMEs of western UP to reach foreign markets: PM Modi pic.twitter.com/pw54X3GC4t
— ANI UP (@ANINewsUP) November 25, 2021
ವಿಪಕ್ಷಗಳ ವಿರುದ್ಧ ವಾಗ್ದಾಳಿ
ಭಾಷಣದ ವೇಳೆ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಕಳೆದ 20 ವರ್ಷಗಳ ಹಿಂದೆ ಬಿಜೆಪಿ ಸರ್ಕಾರ ಇಲ್ಲಿ ಏರ್ಪೋರ್ಟ್ ನಿರ್ಮಾಣ ಮಾಡುವ ಕನಸು ಕಂಡಿತ್ತು. ಆದರೆ ಲಖನೌ ಮತ್ತು ದೆಹಲಿಯಲ್ಲಿ ಕುಳಿತಿದ್ದ ಹಿಂದಿನ ಸರ್ಕಾರದ ಜಟಾಪಟಿಯಿಂದ ಅದು ಸಾಧ್ಯವಾಗಲಿಲ್ಲ. ಸ್ವತಂತ್ರ ಭಾರತದ ನಂತರ ಡಬಲ್ ಇಂಜಿನ್ ಸರ್ಕಾರ ಇದೀಗ ಉತ್ತರ ಪ್ರದೇಶದಲ್ಲಿ ಅಭಿವೃದ್ಧಿ ಕೆಲಸ ಕೈಗೊಳ್ಳುತ್ತಿದೆ ಎಂದರು.
1,300 ಹೆಕ್ಟೇರ್ಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ನಿರ್ಧಾರ ಕೈಗೊಳ್ಳಲಾಗಿದ್ದು, ಮೊದಲ ಹಂತದಲ್ಲಿ ಇದಕ್ಕಾಗಿ 10,050 ಕೋಟಿ ರೂ. ಖರ್ಚು ಮಾಡಲು ನಿರ್ಧರಿಸಲಾಗಿದೆ. 2024ರ ಸೆಪ್ಟೆಂಬರ್ ವೇಳೆಗೆ ಇದು ಪ್ರಯಾಣಿಕರಿಗಾಗಿ ತೆರೆದುಕೊಳ್ಳಲಿದೆ.