ETV Bharat / bharat

Manipur ambush: ಉಗ್ರರ ದಾಳಿ ಖಂಡಿಸಿದ ನಮೋ, ಅಪರಾಧಿಗಳನ್ನ ಬಿಡಲ್ಲ ಎಂದ ರಕ್ಷಣಾ ಸಚಿವ - ಸೇನಾ ಬೆಂಗಾವಲು ವಾಹನ

ಮಣಿಪುರದಲ್ಲಿ ಸೇನಾ ಬೆಂಗಾವಲು ವಾಹನದ ಮೇಲೆ ಉಗ್ರರು(Manipur terror attack) ದಾಳಿ ನಡೆಸಿದ್ದು, ಸೇನಾಧಿಕಾರಿ, ಅವರ ಪತ್ನಿ ಮತ್ತು ಮಗು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ಘಟನೆಯನ್ನ ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ..

PM condemns Manipur terrorist attack
PM condemns Manipur terrorist attack
author img

By

Published : Nov 13, 2021, 8:11 PM IST

ನವದೆಹಲಿ : ಮಣಿಪುರದಲ್ಲಿ ಉಗ್ರರು ಅಟ್ಟಹಾಸ( Manipur terrorist attack) ಮೆರೆದಿದ್ದಾರೆ. ಸೇನಾ ವಾಹನ ಗುರಿಯಾಗಿಸಿಕೊಂಡು ನಡೆಸಿರುವ ದಾಳಿಯಲ್ಲಿ ಸೇನಾಧಿಕಾರಿ(Commanding Officer), ಹೆಂಡತಿ ಮತ್ತು ಅವರ ಮಗು ಹಾಗೂ ಅಸ್ಸೋಂ ರೈಫಲ್ಸ್​(Assam Rifles)​ನ ನಾಲ್ವರು ಪ್ಯಾರಾ ಮಿಲಿಟರಿ ಪಡೆಯ ನಾಲ್ವರು ಯೋಧರು ಸೇರಿ ಒಟ್ಟು ಏಳು ಮಂದಿ ಹುತಾತ್ಮರಾಗಿದ್ದಾರೆ.

ಘಟನೆಯನ್ನ ತೀವ್ರವಾಗಿ ಖಂಡಿಸಿರುವ ಪ್ರಧಾನಿ ನರೇಂದ್ರ ಮೋದಿ(PM Narendra Modi), ಹುತಾತ್ಮರಾದ ಯೋಧರು ಹಾಗೂ ಕುಟುಂಬದ ಸದಸ್ಯರಿಗೆ ಗೌರವ ಸಲ್ಲಿಸುತ್ತೇನೆ. ಯೋಧರ ತ್ಯಾಗವನ್ನ ಎಂದಿಗೂ ಮರೆಯಲು ಸಾಧ್ಯವಿಲ್ಲ. ಇಂತಹ ದುಃಖದ ಸಮಯದಲ್ಲಿ ನನ್ನ ಆಲೋಚನೆ ಮೃತ ಕುಟುಂಬದ ಸದಸ್ಯರೊಂದಿಗಿವೆ ಎಂದು ಟ್ವೀಟ್ ಮಾಡಿದ್ದಾರೆ.

  • Strongly condemn the attack on the Assam Rifles convoy in Manipur. I pay homage to those soldiers and family members who have been martyred today. Their sacrifice will never be forgotten. My thoughts are with the bereaved families in this hour of sadness.

    — Narendra Modi (@narendramodi) November 13, 2021 " class="align-text-top noRightClick twitterSection" data=" ">

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದು, ಘಟನೆ ನಿಜಕ್ಕೂ ಅತ್ಯಂತ ನೋವಿನ ಸಂಗತಿ. ದೇಶ ಐವರು ವೀರ ಯೋಧರನ್ನ ಕಳೆದುಕೊಂಡಿದೆ. ಯಾವುದೇ ಕಾರಣಕ್ಕೂ ಅಪರಾಧಿಗಳನ್ನ ಸುಮ್ಮನೆ ಬಿಡಲ್ಲ ಎಂದಿದ್ದಾರೆ.

  • The cowardly attack on an Assam Rifles convoy in Churachandpur, Manipur is extremely painful & condemnable. The nation has lost 5 brave soldiers including CO 46 AR and two family members.

    My condolences to the bereaved families. The perpetrators will be brought to justice soon.

    — Rajnath Singh (@rajnathsingh) November 13, 2021 " class="align-text-top noRightClick twitterSection" data=" ">

ಇದನ್ನೂ ಓದಿರಿ: Manipur ambush: ಅಸ್ಸೋಂ ರೈಫಲ್​ನ​ CO ಪತ್ನಿ, ಮಗ ಹಾಗೂ ಐವರು ಸಿಬ್ಬಂದಿ ಹುತಾತ್ಮ

ಮಣಿಪುರದ ಸಿಂಘಾತ್​ ಎಂಬಲ್ಲಿ ನಡೆದ ಘಟನೆಯಲ್ಲಿ ಕಮಾಂಡಿಂಗ್​ ಆಫೀಸರ್​ ಕರ್ನಲ್​ ವಿಪ್ಲವ್​ ತ್ರಿಪಾಠಿ, ಅವರ ಪತ್ನಿ, ಮಗು ಸೇರಿದ್ದು, ಉಳಿದಂತೆ ನಾಲ್ವರು ಪ್ಯಾರಾ ಮಿಲಿಟರಿ ಯೋಧರು ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ,ವಿಮಾನಯಾನ ಸಚಿವ ಜೋತಿರಾಧಿತ್ಯ ಸಿಂಧಿಯಾ ಸೇರಿದಂತೆ ಅನೇಕರು ಖಂಡಿಸಿ, ಸಂತಾಪ ಸೂಚಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.