ETV Bharat / bharat

'ಪೆಗಾಸಸ್' ಫೋನ್‌ ನಂಬರ್‌ ಹ್ಯಾಕ್​​​: ಮೋದಿ ತನಿಖೆಗೊಳಪಡಲಿ, ಶಾ ರಾಜೀನಾಮೆ ನೀಡಲಿ- ಕಾಂಗ್ರೆಸ್​ ಪಟ್ಟು - ಅಮಿತ್ ಶಾ ರಾಜೀನಾಮೆಗೆ ಆಗ್ರಹ

ಪೆಗಾಸಸ್ ಸ್ಪೈವೇರ್ ವಿವಾದ ಮುಂದಿಟ್ಟುಕೊಂಡು ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಜೊತೆಗೆ, ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಪಟ್ಟು ಹಿಡಿದಿವೆ.

PM & HM
PM & HM
author img

By

Published : Jul 19, 2021, 8:37 PM IST

ನವದೆಹಲಿ: ಇಸ್ರೇಲ್​ನ ಪೆಗಾಸಸ್​ ಸ್ಪೈವೇರ್​ ಇದೀಗ ದೇಶದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಇದೇ ವಿಚಾರವನ್ನಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ತೀವ್ರವಾಗಿ ವಾಗ್ದಾಳಿ ನಡೆಸಿದೆ. ವಿಶ್ವದಾದ್ಯಂತ 50,000 ಫೋನ್​ ನಂಬರ್‌ಗಳನ್ನು​ ಹ್ಯಾಕ್‌​ ಮಾಡಲಾಗಿದ್ದು ಇದರಲ್ಲಿ ಕಾಂಗ್ರೆಸ್ ಪಕ್ಷದ ರಾಜಕಾರಣಿಗಳ ಮೊಬೈಲ್ ಫೋನ್ ಕೂಡಾ​ ಹ್ಯಾಕ್​ ಆಗಿವೆ ಎನ್ನಲಾಗುತ್ತಿದೆ.

ಇಸ್ರೇಲ್ ಮೂಲದ ಸ್ಪೈವೇರ್​ ಬಳಕೆ ಮಾಡಿಕೊಂಡು ಕೇಂದ್ರ ಬಿಜೆಪಿ, ಕಾಂಗ್ರೆಸ್​ನ ರಾಹುಲ್ ಗಾಂಧಿ, ಪ್ರಶಾಂತ್ ಕಿಶೋರ್ ಸೇರಿದಂತೆ ಕೆಲವರ ಫೋನ್ ಹ್ಯಾಕ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದರ ನೈತಿಕ ಹೊಣೆ ಹೊತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್​ ಆಗ್ರಹಿಸಿದ್ದು, ಪ್ರಧಾನಿ ನರೇಂದ್ರ ಮೋದಿ ತನಿಖೆಗೊಳಪಡಬೇಕು ಎಂದಿದೆ.

  • #WATCH | PM & HM are involved in snooping on Opposition leaders including Rahul Gandhi, journalists & even Union ministers. Before a probe, Amit Shah sahab should resign & an inquiry should be conducted against Modi sahab: LoP in Rajya Sabha, Mallikarjun Kharge on Pegasus report pic.twitter.com/0whMbI1uSH

    — ANI (@ANI) July 19, 2021 " class="align-text-top noRightClick twitterSection" data=" ">

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಮಲ್ಲಿಕಾರ್ಜುನ​ ಖರ್ಗೆ, ರಾಹುಲ್​ ಗಾಂಧಿ, ದೇಶದ ಪತ್ರಕರ್ತರು ಸೇರಿದಂತೆ ಕೆಲವು ಕೇಂದ್ರ ಸಚಿವರ ಫೋನ್​ ಹ್ಯಾಕಿಂಗ್​ ಮಾಡಲಾಗಿದೆ. ಇದರಲ್ಲಿ ಪಿಎಂ ಹಾಗೂ ಗೃಹ ಸಚಿವರ ಕೈವಾಡವಿದೆ. ಇದರ ತನಿಖೆ ಆರಂಭವಾಗುವುದಕ್ಕೂ ಮೊದಲೇ ಅಮಿತ್​ ಶಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಪ್ರಧಾನಿ ತನಿಖೆಗೊಳಪಡಬೇಕು ಎಂದಿದ್ದಾರೆ.

ಇದೇ ವೇಳೆ ಮಾತನಾಡಿರುವ ಸುರ್ಜೇವಾಲ, 2019ರ ಲೋಕಸಭೆ ಚುನಾವಣೆಗೂ ಮೊದಲಿನಿಂದಲೂ ಕಾಂಗ್ರೆಸ್​​​ ಫೋನ್ ಹ್ಯಾಕಿಂಗ್ ಕೆಲಸದಲ್ಲಿ ಭಾಗಿಯಾಗಿದ್ದು, ಅವರು ಮೌನವಾಗಿರುವುದೇ ಇದಕ್ಕೆ ಉತ್ತರ ಎಂದಿದ್ದಾರೆ.

ಇದನ್ನೂ ಓದಿ: ಭಾರತೀಯ ಪ್ರಜಾಪ್ರಭುತ್ವದ ಅಪಖ್ಯಾತಿಗೆ ನಡೆದ ಪ್ರಯತ್ನವೇ ಫೋನ್‌ ಹ್ಯಾಕಿಂಗ್: ಕೇಂದ್ರ ಸಚಿವ ವೈಷ್ಣವ್‌

ಇಂದಿನಿಂದ ಮುಂಗಾರು ಅಧಿವೇಶನ ಆರಂಭಗೊಂಡಿದ್ದು, ಈ ವೇಳೆ ಸದನದೊಳಗೆ ಕಾಂಗ್ರೆಸ್​ ಇದೇ ವಿಚಾರವಾಗಿ ಗದ್ದಲ ನಡೆಸಿತು. ಕೇಂದ್ರ ಸರ್ಕಾರ ಇಸ್ರೇಲ್ ಮೂಲದ ಪೆಗಾಸಸ್ ಸ್ಪೈವೇರ್ ಬಳಕೆ ಮಾಡಿ 40ಕ್ಕೂ ಹೆಚ್ಚು ಪತ್ರಕರ್ತರು, ರಾಹುಲ್ ಗಾಂಧಿ ಸೇರಿದಂತೆ ಅನೇಕರ ಮೊಬೈಲ್ ಹ್ಯಾಕ್ ಮಾಡಿದೆ ಎಂದು ಆರೋಪಿಸಿದ್ದಾರೆ.

ಈ ಆರೋಪಕ್ಕೆ ಲೋಕಸಭೆಯಲ್ಲಿ ಪ್ರತಿಕ್ರಿಯೆ ನೀಡಿರುವ ನೂತನ ಐಟಿ ಸಚಿವ ಅಶ್ವಿನಿ ವೈಷ್ಣವ್, ಭಾರತೀಯ ಪ್ರಜಾಪ್ರಭುತ್ವವನ್ನು ಅಪಖ್ಯಾತಿಗೊಳಿಸಲು ನಡೆಸುತ್ತಿರುವ ಪ್ರಯತ್ನಗಳಿವು ಎಂದಿದ್ದಾರೆ. ಪ್ರಸ್ತುತ ದೇಶದ ಪ್ರತಿಯೊಂದು ಅಂಶಗಳಿಗೆ ಸಂಬಂಧಿಸಿದಂತೆ ಕಠಿಣ ನಿಯಮ, ನಿಬಂಧನೆಗಳಿವೆ. ಅಕ್ರಮವಾಗಿ ಫೋನ್ ಹ್ಯಾಕಿಂಗ್‌ ಮಾಡುವುದು ಅಸಾಧ್ಯ ಎಂದು ಅವರು ಸ್ಪಷ್ಟಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.