ನವದೆಹಲಿ: ಸಲಿಂಗಿಗಳ ವಿವಾಹವನ್ನ ವಿಶೇಷ ವಿವಾಹ ಕಾಯ್ದೆಯಡಿ ಮಾತ್ರ ನೋಂದಣಿ ಮಾಡಬೇಕು, ಹಿಂದೂ ವಿವಾಹ ಕಾಯ್ದೆಯಡಿ ಇದಕ್ಕೆ ಅವಕಾಶ ನೀಡದಂತೆ ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ.
ಹಿಂದೂ ಮತ್ತು ವಿದೇಶಿ ವಿವಾಹ ಕಾನೂನುಗಳ ಅಡಿ ಸಲಿಂಗ ವಿವಾಹಗಳಿಗೆ ಮಾನ್ಯತೆ ನೀಡಲು ಕೋರಿ ಹಲವಾರು ಸಲಿಂಗ ದಂಪತಿಗಳು ಸಲ್ಲಿಸಿದ ಅರ್ಜಿಗಳನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ. ಇದರ ಬೆನ್ನಲ್ಲೇ ಹಿಂದೂ ವಿವಾಹ ಕಾಯ್ದೆಯಡಿ ಇದಕ್ಕೆ ಅವಕಾಶ ನೀಡಬಾರದು ಎಂದು ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ.
ಹಿಂದೂ ವಿವಾಹ ಕಾಯ್ದೆಯಡಿ ಸಲಿಂಗ ವಿವಾಹಗಳ ನೋಂದಣಿ ವಿರುದ್ಧ ದೆಹಲಿ ಹೈಕೋರ್ಟ್ಗೆ ಸೇವಾ ನ್ಯಾಯ್ ಉತ್ಥಾನ್ ಫೌಂಡೇಶನ್ಗೆ ಸೇರಿರುವ ಸಂಜೀವ್ ನೇವಾರ್ ಮತ್ತು ಸ್ವಾತಿ ಗೋಯೆಲ್ ಶರ್ಮಾ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಈ ವೇಳೆ, ಸಲಿಂಗಗಳ ವಿವಾಹವನ್ನ ವಿಶೇಷ ವಿವಾಹ ಕಾಯ್ದೆಯಡಿ ಮಾತ್ರ ನೋಂದಣಿ ಮಾಡಬೇಕು ಎಂದಿದ್ದಾರೆ. ಹಿಂದೂ ವಿವಾಹ ಕಾಯ್ದೆ ಧಾರ್ಮಿಕ ಪಠ್ಯಗಳಿಂದ ಹುಟ್ಟಿಕೊಂಡಿದ್ದು, ಇಲ್ಲಿ ಪುರುಷ ಮತ್ತು ಮಹಿಳೆ ವಿವಾಹಕ್ಕೆ ಮಾತ್ರ ಅವಕಾಶವಿದೆ ಎಂದಿದ್ದಾರೆ.
ದೆಹಲಿ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ಎನ್ ಪಟೇಲ್ ಹಾಗೂ ಜ್ಯೋತಿ ಸಿಂಗ್ ಅವರಿದ್ದ ವಿಭಾಗೀಯ ಪೀಠ ಈ ಅರ್ಜಿ ವಿಚಾರಣೆ ನಡೆಸಿದ್ದು, ಫೆಬ್ರವರಿ 3ಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆ ಮಾಡಿದೆ.