ನವದೆಹಲಿ: ನ್ಯಾಯಾಲಯದ ವಿಚಾರಣೆಗೆ ಒಳಪಟ್ಟು ದೇಶದ ನಾನಾ ಪೊಲೀಸ್ ಠಾಣೆಗಳ ಕಷ್ಟಡಿಯಲ್ಲಿರುವ ಕೋವಿಡ್ ಚಿಕಿತ್ಸೆಗೆ ಅಗತ್ಯವಾಗಿ ಬೇಕಾಗಿರುವ ಆಮ್ಲಜನಕ ಸಿಲಿಂಡರ್ಗಳು, ರೆಮ್ಡೆಸಿವಿರ್, ಆಕ್ಸಿಮೀಟರ್, ಇಂಜಕ್ಷನ್ಗಳನ್ನು ಬಿಡುಗಡೆ ಮಾಡುವಂತೆ ಕೋರಿ ಸುಪ್ರೀಂಕೋರ್ಟ್ನಲ್ಲಿ ಪಿಐಎಲ್ ಸಲ್ಲಿಕೆಯಾಗಿದೆ.
ಈ ಮನವಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಪೊಲೀಸರು ಹಲವು ಪ್ರಕರಣಗಳಡಿ ವಶಪಡಿಸಿಕೊಂಡಿರುವ ಅಗತ್ಯ ವೈದ್ಯಕೀಯ ವಸ್ತುಗಳ ವಿಡಿಯೋಗಳು ಹಾಗೂ ಫೋಟೋಗಳನ್ನು ಬಿಡುಗಡೆ ಮಾಡಬೇಕು ಎಂದು ಸಹ ಕೋರಲಾಗಿದೆ. ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಅಗತ್ಯವಿರುವಂತೆ, ಸಿಆರ್ಪಿಸಿ ಕಾನೂನಿನ ಅನುಸರಿಸಿ ಅಗತ್ಯ ವಸ್ತುಗಳ ಬಿಡುಗಡೆಗಾಗಿ ಕೋರಲಾಗಿದೆ.
ಈ ಕುರಿತು ಆದಷ್ಟು ಬೇಗ ಕ್ರಮ ತೆಗೆದುಕೊಳ್ಳುವಂತೆ ಕೋರಿ ಶ್ರೀಕಾಂತ್ ಪ್ರಸಾದ್ ಹಾಗೂ ರಾಜ್ಕಿಶೋರ್ ಪ್ರಸಾದ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಕೋವಿಡ್ ರೋಗಿಗಳ ಜೀವ ಉಳಿಸುವ ಅಗತ್ಯ ವಸ್ತುಗಳ ಕೊರತೆ ಉಂಟಾಗಿದೆ. ಬ್ಲ್ಯಾಕ್ ಮಾರ್ಕೆಟ್ನಲ್ಲಿ ಹೆಚ್ಚಿನ ಬೆಲೆಗೆ ಅಗತ್ಯ ಔಷಧಗಳು ಮಾರಾಟವಾಗುತ್ತಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಓದಿ: ನಾರದ ಪ್ರಕರಣ: ಅನಿವಾರ್ಯ ಕಾರಣಗಳಿಂದಾಗಿ ವಿಚಾರಣೆ ಮುಂದೂಡಿದ ಕೋಲ್ಕತ್ತಾ ಹೈಕೋರ್ಟ್