ETV Bharat / bharat

ಧಾರ್ಮಿಕ ಕ್ಷೇತ್ರಗಳಲ್ಲಿ 2024ರ ವೇಳೆಗೆ ಸಂಪೂರ್ಣ ಸೌರ ಶಕ್ತಿ ಅಳವಡಿಕೆ: ಸಚಿವ ಶ್ರೀಕಾಂತ್ ಶರ್ಮಾ - ಉತ್ತರಪ್ರದೇಶದ ಧಾರ್ಮಿಕ ಕ್ಷೇತ್ರಗಳಲ್ಲಿ 2024 ರ ವೇಳೆಗೆ ಸಂಪೂರ್ಣ ಸೌರ ಶಕ್ತಿ ಅಳವಡಿಕೆ

ಉತ್ತರ ಪ್ರದೇಶದ ಧಾರ್ಮಿಕ ನಗರಗಳು 2024 ರ ವೇಳೆಗೆ ಶುದ್ಧ ಮತ್ತು ಸೌರ ಶಕ್ತಿಯನ್ನು ಹೊಂದಿರುತ್ತವೆ ಎಂದು ಉತ್ತರ ಪ್ರದೇಶದ ಇಂಧನ ಸಚಿವ ಶ್ರೀಕಾಂತ್ ಶರ್ಮಾ ಹೇಳಿದರು.

2024 ರ ವೇಳೆಗೆ ಸಂಪೂರ್ಣ ಸೌರ ಶಕ್ತಿ ಅಳವಡಿಕೆ
2024 ರ ವೇಳೆಗೆ ಸಂಪೂರ್ಣ ಸೌರ ಶಕ್ತಿ ಅಳವಡಿಕೆ
author img

By

Published : Dec 16, 2020, 4:36 PM IST

ಲಖನೌ(ಉತ್ತರಪ್ರದೇಶ): ಅಯೋಧ್ಯಾ, ಮಥುರಾ, ವಾರಣಾಸಿ, ಪ್ರಯಾಗರಾಜ್ ಮತ್ತು ಗೋರಖ್‌ಪುರ ಸೇರಿದಂತೆ ಧಾರ್ಮಿಕ ನಗರಗಳು 2024ರ ವೇಳೆಗೆ ಶುದ್ಧ ಮತ್ತು ಸೌರ ಶಕ್ತಿ ಹೊಂದಿರುತ್ತವೆ. ಈ ನಗರಗಳಲ್ಲಿ ಮನೆಗಳ ಛಾವಣಿಯಲ್ಲಿ ಸೋಲಾರ್ ಅಳವಡಿಸಲಾಗಿದ್ದು, ಸುಮಾರು 670 ಮೆಗಾವ್ಯಾಟ್ ಸೌರಶಕ್ತಿಯನ್ನು ಪಡೆಯುತ್ತವೆ ಎಂದು ಉತ್ತರ ಪ್ರದೇಶದ ಇಂಧನ ಸಚಿವ ಶ್ರೀಕಾಂತ್ ಶರ್ಮಾ ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಹಕರಿಗೆ ಕ್ರಮವಾಗಿ 859 ಕೋಟಿ ಮತ್ತು 473 ಕೋಟಿ ರೂ. ವೆಚ್ಚದಲ್ಲಿ ಈ ಗುರಿ ಸಾಧಿಸಲಿವೆ. 'ಉಜಾಲಾ' ಯೋಜನೆ ಅನುಷ್ಠಾನಗೊಳಿಸುವ ಮೂಲಕ ಇಂಧನ ಇಲಾಖೆ 1,363 ಕೋಟಿ ರೂ.ಗಳನ್ನು ಉಳಿಸುತ್ತಿದೆ ಎಂದು ಶರ್ಮಾ ಹೇಳಿದರು.

ಇದನ್ನೂ ಓದಿ:ರಾಹುಲ್‌ ಗಾಂಧಿಗೆ ಜೋಳ ಬಿತ್ತುವ ಸರಿಯಾದ ಕ್ರಮದ ಬಗೆಗಾದರೂ ತಿಳಿದಿದೆಯೇ?: ಶಿವರಾಜ್ ಸಿಂಗ್ ಚೌಹಾಣ್

ಇಂಧನ ಸಂರಕ್ಷಣಾ ಕ್ರಮಗಳ ಮೂಲಕ ಇಂಧನ ಇಲಾಖೆ ಕನಿಷ್ಠ 3,400 ದಶಲಕ್ಷ ಯೂನಿಟ್ ವಿದ್ಯುತ್ ಉಳಿತಾಯ ಮಾಡುತ್ತಿದೆ. ವಿದ್ಯುತ್ ಬೇಡಿಕೆ 682 ಮೆಗಾವ್ಯಾಟ್ ಕಡಿಮೆಯಾಗಿದೆ. ಇಂಗಾಲದ ಹೊರ ಸೂಸುವಿಕೆ 2.76 ಮಿಲಿಯನ್ ಟನ್​ಳಷ್ಟು ಕಡಿಮೆಯಾಗಿದೆ ಎಂದರು.

ರೈತರು ತಮ್ಮ ಬಂಜರು ಭೂಮಿಯಲ್ಲಿ 500 ಕಿಲೋವ್ಯಾಟ್‌ನಿಂದ 2 ಮೆಗಾವ್ಯಾಟ್ ಸಾಮರ್ಥ್ಯದ ಸೌರ ಸ್ಥಾವರಗಳನ್ನು ಸ್ಥಾಪಿಸುವ ಪಿಎಂ - ಕುಸುಮ್ ಯೋಜನೆಗೆ ಸರ್ಕಾರ ಕೂಡ ಕೈಜೋಡಿಸಿದೆ. ಎಲ್ಲ ಸರ್ಕಾರಿ ಕಟ್ಟಡಗಳಲ್ಲಿ ಛಾವಣಿಯ ಮೇಲೆ ಸೌರ ವಿದ್ಯುತ್ ಫಲಕಗಳನ್ನು ಅಳವಡಿಸುವ ಮೂಲಕ ರಾಜ್ಯ ಸರ್ಕಾರವು ಸೌರಶಕ್ತಿ ಉತ್ತೇಜಿಸುತ್ತಿದೆ ಎಂದು ತಿಳಿಸಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.