ETV Bharat / bharat

ಆಮ್ಲಜನಕದ ಸಿಲಿಂಡರ್​ ಸಹಾಯ ಇಲ್ಲದೇ ಎವರೆಸ್ಟ್​ ಏರಿ ಸಾಧನೆ.. ಆದರೆ ಇದಕ್ಕೆ ಸಿಗ್ತಿಲ್ಲ ಮಾನ್ಯತೆ.. ಯಾಕೆ ಗೊತ್ತಾ? - ಪಿಯಾಲಿ ಅವರ ಮನವಿಗೆ ಸ್ಪಂದಿಸಿದರುವ ಚಂದನನಗರ ರೋಟರಿ ಕ್ಲಬ್

ಎವರೆಸ್ಟ್ ಏರಿ, ಅದನ್ನ ಪೂರ್ಣಗೊಳಿಸಿದ್ದಾರೆ ಎಂಬುದನ್ನು ತಿಳಿಯಬೇಕಾದರೆ, ಪರ್ವತಾರೋಹಿಗಳು ಭದ್ರತಾ ಪರವಾನಿಗೆ ಪಡೆಯಲೇ ಬೇಕು. ಇದಕ್ಕಾಗಿ ಅವರು 4 ಲಕ್ಷ ರೂ. ಠೇವಣಿ ಇಡಬೇಕು. ಆದರೆ, ಪಿಯಾಲಿ ಬಸಕ್ ಅವರಿಗೆ 4 ಲಕ್ಷ ರೂಪಾಯಿ ಠೇವಣಿ ಇಡಲು ಸಾಧ್ಯವಾಗಿಲ್ಲ. ಈ ವಿಷಯವೀಗ ಭಾರಿ ಚರ್ಚೆಗೆ ಕಾರಣವಾಗಿದೆ.

Piyali's recognition of Everest conquest on hold; know why
ಆಮ್ಲಜನಕದ ಸಿಲಿಂಡರ್​ ಸಹಾಯ ಇಲ್ಲದೇ ಎವರೆಸ್ಟ್​ ಏರಿ ಸಾಧನೆ
author img

By

Published : May 24, 2022, 8:03 PM IST

ಚಂದನನಗರ (ಹೂಗ್ಲಿ ಕೋಲ್ಕತ್ತಾ): ಮೌಂಟ್​ ಎವರೆಸ್ಟ್​ ವಿಶ್ವದ ಅತಿ ಎತ್ತರದ ಶಿಖರ. ಹಿಮಾಲಯ ಪರ್ವತ ಪ್ರದೇಶದಲ್ಲಿ ಇದರದ್ದೇ ಹವಾ. ಈ ಶಿಖರವನ್ನು ಒಮ್ಮೆ ಏರಬೇಕು ಎಂಬುದು ಬಹುತೇಕರ ಕನಸು. ಆ ಕನಸನ್ನು ನನಸು ಮಾಡಿಕೊಳ್ಳಲೆಂದೇ, ಪಶ್ಚಿಮ ಬಂಗಾಳದ ಚಂದನನಗರ ಶಾಲೆಯ ಶಿಕ್ಷಕಿ ಪಿಯಾಲಿ ಬಸಕ್, ಮೇ 22 ರಂದು ಆಮ್ಲಜನಕದ ಸಹಾಯವಿಲ್ಲದೇ ಮೌಂಟ್ ಎವರೆಸ್ಟ್ ಏರಿ ಮಹತ್ವದ ಸಾಧನೆ ಮಾಡಿದ್ದಾರೆ.

ಆದರೆ, ಈ ಸಾಧನೆಗೆ ಮನ್ನಣೆ ಸಿಗುವುದೇ? ಅನ್ನೋದು ಈಗಿರುವ ಪ್ರಶ್ನೆ. ಎವರೆಸ್ಟ್ ಏರಿ, ಅದನ್ನ ಪೂರ್ಣಗೊಳಿಸಿದ್ದಾರೆ ಎಂಬುದನ್ನು ತಿಳಿಯಬೇಕಾದರೆ, ಪರ್ವತಾರೋಹಿಗಳು ಭದ್ರತಾ ಪರವಾನಗಿ ಪಡೆಯಲೇ ಬೇಕು. ಇದಕ್ಕಾಗಿ ಅವರು 4 ಲಕ್ಷ ರೂ. ಠೇವಣಿ ಇಡಬೇಕು. ಆದರೆ, ಪಿಯಾಲಿ ಬಸಕ್ ಅವರಿಗೆ 4 ಲಕ್ಷ ರೂಪಾಯಿ ಠೇವಣಿ ಇಡಲು ಸಾಧ್ಯವಾಗಿಲ್ಲ. ಈ ವಿಷಯವೀಗ ಭಾರಿ ಚರ್ಚೆಗೆ ಕಾರಣವಾಗಿದೆ.

ಪಿಯಾಲಿ ಬಸಕ್‌ ಅವರು, ಆಮ್ಲಜನಕ ಕೊರತೆ ಇರುವ ಶಿಖರಗಳ ತುತ್ತ ತುದಿಯನ್ನ ಏರಿ ಸಾಧನೆ ಮಾಡಿದ್ದಾರೆ. ಆದರೆ, ಇವರು ಭದ್ರತಾ ಠೇವಣಿ ಇಡದೇ ಇರುವ ಕಾರಣ ಇವರು ಎವರೆಸ್ಟ್ ಏರಿ ವಿಜಯದ ನಗೆ ಬೀರಿರುವ ಬಗ್ಗೆ ಮಾನ್ಯತೆಯನ್ನು ತಡೆ ಹಿಡಿಯಲಾಗಿದೆ.

ಕ್ರೌಡ್​ ಫಂಡಿಂಗ್​ ಮೊರೆ ಹೋದ ಬಸಾಕ್​: ಭದ್ರತಾ ಠೇವಣಿ ಇಡದೇ ಇರುವುದರಿಂದ ಅವರಿಗೆ ಎವರೆಸ್ಟ್​ ಏರಿದ ಪ್ರಮಾಣಪತ್ರ ಸಿಕ್ಕಿಲ್ಲ. ಇದರಿಂದಾಗಿ ಅನಿವಾರ್ಯವಾಗಿ ಶಿಕ್ಷಕಿ ಪಿಯಾಲಿ ಅವರು ಕ್ರೌಡ್​ ಫಂಡಿಂಗ್​ಗೆ ಮೊರೆ ಹೋಗಿದ್ದಾರೆ. ಈ ಸಂಬಂಧ ಕ್ಯಾಂಪ್​ 4 ರಲ್ಲಿ ಇದ್ದಾಗಲೇ ವಿಡಿಯೋ ಸಂದೇಶದ ಮೂಲಕ ಸಾರ್ವಜನಿಕರಿಂದ ಆರ್ಥಿಕ ಸಹಾಯ ಕೇಳಿದ್ದಾರೆ.

ಭದ್ರತಾ ಠೇವಣಿಗೆ ಶ್ಯೂರಿಟಿ ಕೊಟ್ಟ ತಪಸ್​ ಸಹಾ: ಪಿಯಾಲಿ ಅವರ ಮನವಿಗೆ ಸ್ಪಂದಿಸಿದರುವ ಚಂದನನಗರ ರೋಟರಿ ಕ್ಲಬ್ ಸದಸ್ಯರಾದ ತಪಸ್ ಸಹಾ, 4 ಲಕ್ಷ ರೂಪಾಯಿ ಭದ್ರತಾ ಠೇವಣಿಗೆ ಜಾಮೀನುದಾರರಾಗಿದ್ದಾರೆ. ಹೀಗಾಗಿ ಪಿಯಾಲಿ ಮತ್ತು ಆಕೆಯ ಶೆರ್ಪಾ ಎವರೆಸ್ಟ್​ ಏರಲು ಅನುಮತಿ ಪಡೆದರು. ಈ ಮೂಲಕ ಪಿಯಾಲಿ ಅವರು ಪ್ರಸ್ತುತ ಕ್ಯಾಂಪ್ 4 ರಿಂದ ತನ್ನ ಎರಡನೇ ಗುರಿಯಾದ ಲೊಟ್ಸೆಗೆ ತೆರಳುತ್ತಿದ್ದಾರೆ. ಅವರಿಗ ಲೊಟ್ಸ್​​​​ ಶಿಖರದತ್ತ ಪ್ರಯಾಣ ಬೆಳೆಸಿದ್ದು, ಈ ಶಿಖರವನ್ನು ಏರಿದ ಬಳಿಕ ಪ್ರಮಾಣ ಪತ್ರವನ್ನು ಪಡೆಯುವ ಸಾಧ್ಯತೆ ಇದೆ.

ಇದನ್ನು ಓದಿ:ಆಮ್ಲಜನಕ ಸಿಲಿಂಡರ್​ ಇಲ್ಲದೇ ಮೌಂಟ್​ ಎವರೆಸ್ಟ್​ ಶಿಖರ ಏರಿದ ಯುವತಿ!

ಕ್ರೌಡ್ ಫಂಡಿಂಗ್ ಮೂಲಕ 25 ಲಕ್ಷ ಸಂಗ್ರಹ.. ಸಾಧನೆಗೆ ಬೇಕಿದೆ ಇನ್ನೂ 10 ಲಕ್ಷ ರೂ: ಅವರು ಈಗ ಕೈಗೊಂಡಿರುವ ಎರಡು ಪರ್ವತಾರೋಹಣ ಯಾತ್ರೆಗಳಿಗೆ 35 ಲಕ್ಷ ರೂ.ಗಳ ಅವಶ್ಯಕತೆ ಇದೆ. ಈಗ ಕ್ರೌಡ್ ಫಂಡಿಂಗ್ ಮೂಲಕ 25 ಲಕ್ಷ ರೂಪಾಯಿ ಸಂಗ್ರಹಿಸಲಾಗಿದೆ. ಚಂದನನಗರದ ರೋಟರಿ ಕ್ಲಬ್ ಒಂದರಿಂದಲೇ 15 ಲಕ್ಷ ರೂ. ಸಂಗ್ರಹವಾಗಿದೆ. ಇನ್ನೂ 10 ಲಕ್ಷ ರೂ. ಅವಶ್ಯಕತೆ ಇದೆ.

ಯಾರಿವರು ಪಿಯಾಲಿ ಬಸಕ್​: ಚಂದನನಗರದ ಕನೈಲಾಲ್ ವಿದ್ಯಾಮಂದಿರದಲ್ಲಿ ಶಿಕ್ಷಕಿಯಾಗಿದ್ದಾರೆ. 31 ವರ್ಷದ ಪಿಯಾಲಿ ಬಸಕ್ ಅವರಿಗೆ ಬಾಲ್ಯದಿಂದಲೂ ಬೆಟ್ಟ - ಗುಡ್ಡಗಳನ್ನು ಏರುವುದೆದಂದರೆ ಅಚ್ಚು- ಮೆಚ್ಚು. ಇದೇ ಆಸಕ್ತಿ ಶಿಕ್ಷಕಿಯನ್ನ ಪರ್ವತಾರೋಹಿಯನ್ನಾಗಿಸಿದೆ. ಚಂದನನಗರ ಪರ್ವತಾರೋಹಣದ ಮೂಲಕ ಅವರ ಯಾತ್ರೆ ಆರಂಭವಾಗಿದೆ. ಈಗ ಅವರು ಆಮ್ಲಜನಕದ ಸಹಾಯ ಇಲ್ಲದೇ ಹಿಮಾಲಯ ಪರ್ವತಾರೋಹಣ ಮಾಡಿರುವುದು ಇತಿಹಾಸ.

ಇದನ್ನು ಓದಿ:ಮೌಂಟ್ ಎವರೆಸ್ಟ್ ಏರಿದ ಆರು ಮಂದಿಯಿಂದ ಹೊಸ ದಾಖಲೆ..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.