ETV Bharat / bharat

ಸಾಂಬಾರಿನಲ್ಲಿ ಆಲೂ ಚಿಪ್ಸ್​​ .. ಇದು ಘೋರ ಅಪರಾಧ ಎಂದ ನೆಟ್ಟಿಗರು

'ಆಲೂ ಚಿಪ್ಸ್ ಕರಿ'ಯ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದ್ದು, ಟ್ವಿಟರ್​ನಲ್ಲಿ ಆಲೂಗಡ್ಡೆ ಚಿಪ್ಸ್ ಪ್ರಿಯರು ವಿನೋದಾವಳಿಗಳ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

author img

By

Published : Jun 10, 2021, 11:53 AM IST

Pics of Potato Chips Curry goes viral
ಸಾಂಬಾರಲ್ಲಿ ಆಲೂ ಚಿಪ್ಸ್

ಹೈದರಾಬಾದ್​: ಆಲೂಗಡ್ಡೆ ಚಿಪ್ಸ್ ರುಚಿಯೇ ಅದ್ಭುತ. ಇದನ್ನು ಚಪ್ಪರಿಸುತ್ತಾ ತಿನ್ನುವವರಿಗೆ, ಚಿಪ್ಸ್​ ಸಾಂಬಾರಿನೊಳಗೆ ಹಾಕ್ತಾರೆ ಎಂದ್ರೆ ಹೃದಯ ಒಡೆದು ಹೋದಂತೆ ಆಗಿದೆ. 'ಕೋಲ್ಕತಾ ಫುಡ್ ಟ್ರಾಟ್ಟರ್ಸ್' ಎಂಬ ಫೇಸ್​ಬುಕ್​ ಗ್ರೂಪ್​ವೊಂದು 'ಆಲೂ ಚಿಪ್ಸ್ ಕರಿ'ಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಭಕ್ಷ್ಯ ಮಾಡುವುದನ್ನು ನೆಟ್ಟಿಗರು ಘೋರ ಅಪರಾಧದಂತೆ ಪರಿಗಣಿಸಿದ್ದು, ಇದಕ್ಕೆ ತಮಾಷೆಯಾಗಿಯೇ ಕೋಪ ತೋರಿಸಿಕೊಂಡಿದ್ದಾರೆ.

'ಕೋಲ್ಕತಾ ಫುಡ್ ಟ್ರಾಟ್ಟರ್ಸ್' ಫೇಸ್​ಬುಕ್ ಪೋಸ್ಟ್​ ಅನ್ನು ಸ್ಕ್ರೀನ್​ ಶಾಟ್​ ತೆಗೆದು ತನ್ನ ಟ್ವಿಟರ್​ನಲ್ಲಿ ವ್ಯಕ್ತಿಯೊಬ್ಬ ಶೇರ್​ ಮಾಡಿದ್ದು, 'ಈ ಕೊಲೆಗೆ ಕನಿಷ್ಠ 14 ವರ್ಷಗಳ ಕಠಿಣ ಜೈಲು ಶಿಕ್ಷೆ' ಎಂದು ಬರೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಟೋ ಈಗ ಸಖತ್​ ವೈರಲ್​ ಆಗಿದ್ದು, ಆಲೂ ಚಿಪ್ಸ್ ಪ್ರಿಯರು ಟ್ವಿಟರ್​ನಲ್ಲಿ ಚಿತ್ರವಿಚಿತ್ರ ಕಮೆಂಟ್​ಗಳನ್ನು ಮಾಡಿದ್ದಾರೆ.

Pics of Potato Chips Curry goes viral
ವೈರಲ್​ ಪೋಸ್ಟ್​ಗೆ ಕಮೆಂಟ್​

ಒಬ್ಬರು 'ಭಯಾನಕವಾಗಿಯೂ ಇದೆ, ಆಸಕ್ತಿದಾಯಕವಾಗಿಯೂ ಇದೆ' ಎಂದರೆ, ಮತ್ತೊಬ್ಬರು 'ಮಾನವೀಯತೆಯ ವಿರುದ್ಧದ ಅಪರಾಧ' ಎಂದು ಪೋಸ್ಟ್ ಮಾಡಿದ್ದಾರೆ.

Pics of Potato Chips Curry goes viral
ವೈರಲ್​ ಪೋಸ್ಟ್​ಗೆ ಕಮೆಂಟ್​

ಇನ್ನೊಬ್ಬರು ಸಾರಿನೊಳಗೆ ಬಿಸ್ಕತ್​ ಹಾಕಿರುವ ಫೋಟೋ ಶೇರ್​ ಮಾಡಿ 'ಬಿಸ್ಕತ್ ಕರಿ' ಎಂದು ವ್ಯಂಗ್ಯವಾಡಿದ್ದಾರೆ. 'ಚಾವಟಿ ಜೊತೆ ಮುಳ್ಳನ್ನು ಸೇರಿಸಿ ಹೊಡೆತ ತಿನ್ನುವ ಶಿಕ್ಷೆ' ಎಂದು ಒಬ್ಬರು ವ್ಯಂಗ್ಯವಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.