ETV Bharat / bharat

ಕಬ್ಬಡಿ ಪೋಸ್ಟರ್​ನಲ್ಲಿ ಗ್ಯಾಂಗ್​ಸ್ಟರ್​ ಛೋಟಾ ರಾಜನ್ ಫೋಟೋ​: 6 ಮಂದಿ ಬಂಧನ - ಮುಂಬೈನ ಮಲಡ್​ನಲ್ಲಿ ನಡೆಸಿದೆ

ಶುಭಾಶಯ ಪೋಸ್ಟರ್​ನಲ್ಲಿ ಛೋಟಾ ರಾಜನ್ ​- ಪ್ರಕರಣ ಸಂಬಂಧ 6 ಮಂದಿ ಬಂಧನ- ಬ್ಯಾನರ್​ ಕಿತ್ತು ಹಾಕಿದ ಪೊಲೀಸರು

Photo of Gangster Chhota Rajan in Kabbadi Poster; 6 arrested
ಕಬ್ಬಡಿ ಪೋಸ್ಟರ್​ನಲ್ಲಿ ಗ್ಯಾಂಗ್​ಸ್ಟರ್​ ಛೋಟಾ ರಾಜನ್ ಫೋಟೋ​; 6 ಮಂದಿ ಬಂಧನ
author img

By

Published : Jan 14, 2023, 3:01 PM IST

ಮುಂಬೈ: ಕಬ್ಬಡಿ ಕಾರ್ಯಕ್ರಮದ ಪೋಸ್ಟರ್​ನಲ್ಲಿ ಗ್ಯಾಂಗ್​ಸ್ಟರ್​​ ಛೋಟಾ ರಾಜನ್​ ಅವರಿಗೆ ಹುಟ್ಟು ಹಬ್ಬದ ಶುಭ ಕೋರಿ ಪೋಸ್ಟರ್​ ಹಾಕಿರುವ ಘಟನೆ ಮುಂಬೈನ ಮಲಡ್​ನಲ್ಲಿ ನಡೆಸಿದೆ. ಈ ಸಂಬಂಧ ಕಬ್ಬಡಿ ಕಾರ್ಯಕ್ರಮ ಆಯೋಜಕರು ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮುಂಬೈನ ಮಲಡ್​ ಪ್ರದೇಶದಲ್ಲಿ ಇದೇ ಜನವರಿ 14 ಮತ್ತು 15ರಂದು ನಡೆಯಲಿರುವ ಕಬ್ಬಡಿ ಕಾರ್ಯಕ್ರಮ ಆಯೋಜಿಸಿದ್ದು, ಈ ಸಂಬಂಧ ಪೋಸ್ಟರ್​ ಅನ್ನು ಅಳವಡಿಸಲಾಗಿತ್ತು. ಇದರಲ್ಲಿ ಸ್ವಾಗತಕೋರುವ ಬ್ಯಾನರ್​ಲ್ಲಿ ಛೋಟಾ ರಾಜನ್​ ಭಾವಚಿತ್ರವನ್ನು ದೊಡ್ಡದಾಗಿ ಅಳವಡಿಸಲಾಗಿದೆ. ನಗರದ ಹಲವು ಪ್ರದೇಶಗಳಲ್ಲಿ ಈ ಬ್ಯಾನರ್​ ಅನ್ನು ಹಾಕಲಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಸಿಆರ್​ ಸಮಜಿಕ್​ ಸಂಘಟನಾ ಮಹಾರಾಷ್ಟ್ರ ರಾಜ್ಯ ಮುಂಬೈ ಈ ಬ್ಯಾನರ್​ ಅನ್ನು ಅಳವಡಿಸಿದೆ. ಈ ಹಿನ್ನೆಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ವರದಿಗಳ ಪ್ರಕಾರ, ಪೋಸ್ಟರ್ ಅನ್ನು ಹಾಕಲು ನಾಗರಿಕ ಮಂಡಳಿಯಿಂದ ಯಾವುದೇ ಅನುಮತಿಯನ್ನು ಪಡೆಯದೇ ಪೋಸ್ಟರ್​ ಅಳವಡಿಸಿದ ಕಾರಣ ಪೋಸ್ಟರ್ ಅನ್ನು ಥಾಣೆ ಮುನ್ಸಿಪಲ್ ಕಾರ್ಪೊರೇಶನ್ ತೆಗೆದುಹಾಕಿದೆ.

ಮಹಾರಾಷ್ಟ್ರದಲ್ಲಿ 13 ವರ್ಷಗಳ ಹಿಂದೆ ನಡೆದ ಜೋಡಿ ಕೊಲೆ ಪ್ರಕರಣದಲ್ಲಿ ಕಳೆದ ನವೆಂಬರ್​ನಲ್ಲಿ ಸಿಬಿಐ ಕೋರ್ಟ್​​ ಛೋಟಾ ರಾಜನ್​ ಸೇರಿದಂತೆ ನಾಲ್ವರನ್ನು ಖುಲಾಸೆಗೊಳಿಸಿತ್ತು. ಸಾಕ್ಷ್ಯಾಧಾರ ಕೊರತೆ ಹಿನ್ನಲೆ ಅವರನ್ನು ಆರೋಪ ಮುಕ್ತರನ್ನಾಗಿ ಮಾಡಲಾಗಿತ್ತು. ಮುಂಬೈ ಸರಣಿ ಸ್ಪೋಟದ ಆರೋಪಿಯಾಗಿರುವ ಭೂಗತ ಪಾತಕಿ ಛೋಟಾ ರಜನ್​ ಇಂಡೋನೇಷ್ಯಾದ ಬಾಲಿಯಿಂದ ಬಂಧಿಸಿ ಭಾರತಕ್ಕೆ ಗಡೀಪಾರು ಮಾಡಲಾಗಿತ್ತು.

2015ರಿಂದ ಈತ ತಿಹಾರ್​ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಛೋಟಾ ರಾಜನ್​ ವಿರುದ್ಧ ಸರಿ ಸುಮಾರು 70 ಪ್ರಕರಣಗಳು ಇವೆ. 2018ರಲ್ಲಿ 2011ರಲ್ಲಿ ನಡೆದ ಪತ್ರಕರ್ತ ಜೆ ಡೇ ಅವರ ಹತ್ಯೆಗೆ ರಾಜನ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಛೋಟಾ ರಾಜನ್ ಅವರ ನಿಜವಾದ ಹೆಸರು ರಾಜೇಂದ್ರ ಸದಾಶಿವ ನಿಕಲ್ಜೆ, ಮೂಲತಃ ಚೆಂಬೂರಿನವರು.

ಕಾನ್ಪುರದಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ: ಮತ್ತೊಂದೆಡೆ ಕಾನ್ಪುರದ ಗಂಗಾಗಂಜ್​ ಪಾರ್ಟ್​2ನ ಅರಣ್ಯವೊಂದರಲ್ಲಿ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾಗಿದೆ. ಪಂಕಿ ಪೊಲೀಸ್​ ಠಾಣೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯನ್ನು ಜಜ್ಜಿ ಕೊಲೆ ಮಾಡಲಾಗಿದ್ದು, ಅರಣ್ಯದಲ್ಲಿ ಬಿಸಾಕಿ ಹೋಗಿರುವ ಸಾಧ್ಯತೆ ಇದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅರಣ್ಯ ಪ್ರದೇಶದಲ್ಲಿ ತಲೆ ಜಜ್ಜಿರುವ ಮೃತದೇಹವೊಂದು ಪತ್ತೆಯಾಗಿರುವ ಪ್ರಕರಣ ಕುರಿತು ಮಾಹಿತಿ ಪಡೆದ ಪೊಲೀಸರು ತಕ್ಷಣಕ್ಕೆ ಸ್ಥಳಕ್ಕೆ ಹಾಜರಾಗಿದ್ದಾರೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಸಾವನ್ನಪ್ಪಿರುವ ವ್ಯಕ್ತಿ 26 ವರ್ಷದ ವಯೋಮಾನದವರು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಫೋರೆನ್ಸಿಕ್​ ತಂಡ ಸ್ಥಳಕ್ಕೆ ಆಗಮಿಸಿದ್ದು, ಸಾಕ್ಷಿಗಳನ್ನು ಸಂಗ್ರಹಿಸಿದೆ. ಘಟನೆ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಮರಣೋತ್ತರ ಪರೀಕ್ಷೆಗೆ ಬಂದ ಪೊಲೀಸರು: ಚಿಕ್ಕಪ್ಪನ ಶವ ಹೊತ್ತು ಸ್ಮಶಾನಕ್ಕೆ ಓಡಿದ ಯುವಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.