ETV Bharat / bharat

ನಿಷೇಧಿತ ಪಿಎಫ್‌ಐ ಪ್ರಕರಣ: ತಮಿಳುನಾಡು ಸೇರಿದಂತೆ ದೇಶದ ಹಲವೆಡೆ ಎನ್‌ಐಎ ಶೋಧ - ಅಮೃತಸರ ಸ್ಫೋಟ ಪ್ರಕರಣ

ನಿಷೇಧಿತ ಸಂಘಟನೆ ಪಿಎಫ್‌ಐ ಕಾನೂನುಬಾಹಿರ ಚಟುವಟಿಕೆಗೆ ಸಂಬಂಧಿಸಿದಂತೆ ದೇಶದ ಹಲವು ರಾಜ್ಯಗಳಲ್ಲಿ ಎನ್‌ಐಎ ಶೋಧ ನಡೆಸುತ್ತಿದೆ.

NIA
ಎನ್‌ಐಎ
author img

By

Published : May 9, 2023, 10:20 AM IST

Updated : May 9, 2023, 10:45 AM IST

ನವದೆಹಲಿ: ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಜತೆ ನಂಟು ಹೊಂದಿರುವ ದೇಶದ ಹಲವು ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಇಂದು ಶೋಧ ನಡೆಸುತ್ತಿದ್ದಾರೆ.

ತಮಿಳುನಾಡಿನಲ್ಲಿ ಶೋಧ: ರಾಜ್ಯದ ತಿರುವೊಟಿಯೂರ್ ತಂಗಳ್ ನ್ಯೂ ಕಾಲೋನಿ ಪ್ರದೇಶದ ಪಿಎಫ್‌ಐ ಕಾರ್ಯಕರ್ತ ಅಬ್ದುಲ್ ರಜಾಕ್ ಎಂಬವರ ಮನೆ ಮೇಲೆ ಎನ್‌ಐಎ ದಾಳಿ ನಡೆಸಿದೆ. ಥೆನಿ, ಮಧುರೈ ಮತ್ತು ದಿಂಡಿಗಲ್ ಸೇರಿದಂತೆ ಎಂಟು ಸ್ಥಳಗಳಲ್ಲಿ ಶೋಧ ಪ್ರಗತಿಯಲ್ಲಿದೆ. ಪಿಎಫ್‌ಐ ಅನ್ನು ಗೃಹ ವ್ಯವಹಾರಗಳ ಸಚಿವಾಲಯ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (UAPA) ಅಡಿಯಲ್ಲಿ ಸೆಪ್ಟೆಂಬರ್ 28, 2022 ರಂದು ಐದು ವರ್ಷಗಳ ಅವಧಿಗೆ ನಿಷೇಧಿಸಿದೆ. ಕೇರಳ ಮತ್ತು ಕರ್ನಾಟಕದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಿಷೇಧಿತ ಸಂಘಟನೆ ನಡೆಸುತ್ತಿದೆ ಎಂದು ಎನ್‌ಐಎ ಆರೋಪಿಸಿದೆ.

ಜಮ್ಮು & ಕಾಶ್ಮೀರದ ಹಲವೆಡೆ ದಾಳಿ: ಇಂದು ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ. ಶೋಪಿಯಾನ್, ಅನಂತನಾಗ್, ಕುಲ್ಗಾಮ್, ಪೂಂಚ್ ಮತ್ತು ಜಮ್ಮು ಮತ್ತು ಕಾಶ್ಮೀರದ ಇತರ ಜಿಲ್ಲೆಗಳಲ್ಲಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಗಡ್ಕರಿಗೆ ಬೆದರಿಕೆ- ತನಿಖೆ: ನಾಗ್ಪುರದಲ್ಲಿರುವ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಸಾರ್ವಜನಿಕ ಸಂಪರ್ಕ ಕಚೇರಿಗೆ ಬೆದರಿಕೆ ಹಾಕಿದ ಪ್ರಕರಣವನ್ನು ಎನ್‌ಐಎ ಎರಡು ತಿಂಗಳಲ್ಲಿ ಎರಡು ಬಾರಿ ತನಿಖೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣದಲ್ಲಿ ನಾಗ್ಪುರ ಪೊಲೀಸರು ಕರ್ನಾಟಕದ ಬೆಳಗಾವಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಜಯೇಶ್ ಪೂಜಾರಿ ಅಲಿಯಾಸ್ ಕಾಂತಾ ಎಂಬಾತನನ್ನು ಈಗಾಗಲೇ ಬಂಧಿಸಿದೆ. ಪೊಲೀಸರ ಪ್ರಕಾರ, ಜಯೇಶ್ ಪೂಜಾರಿ ಜನವರಿಯಲ್ಲಿ ನಿತಿನ್ ಗಡ್ಕರಿ ಅವರ ಸಾರ್ವಜನಿಕ ಸಂಪರ್ಕ ಕಚೇರಿಗೆ ಕರೆ ಮಾಡಿದ್ದ. ಮಾರ್ಚ್‌ನಲ್ಲಿ ಎರಡನೇ ಬಾರಿಗೆ ಕರೆ ಮಾಡಿ 10 ಕೋಟಿ ರೂ. ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದ. ಈ ವೇಳೆ ಜಯೇಶ್ ಪೂಜಾರಿ ಬೆಳಗಾವಿ ಜೈಲಿನಿಂದ ಕರೆ ಮಾಡಿದ್ದ ಎನ್ನಲಾಗಿತ್ತು. ಆ ನಂತರ ನಾಗ್ಪುರ ಪೊಲೀಸರು ಜಯೇಶ್ ಪೂಜಾರಿಯನ್ನು ಬೆಳಗಾವಿ ಜೈಲಿನಿಂದ ಮಾರ್ಚ್ 28 ರಂದು ಬಂಧಿಸಿ ನಾಗ್ಪುರಕ್ಕೆ ಕರೆತಂದಿದ್ದರು.

ಇದನ್ನೂ ಓದಿ: ಬಾಂಬ್​ ಸ್ಫೋಟ ಪ್ರಕರಣ: ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಎನ್​ಐಎ ಮಿಂಚಿನ ದಾಳಿ

ತನಿಖೆಯಲ್ಲಿ ಜಯೇಶ್ ಪೂಜಾರಿ ಭಯೋತ್ಪಾದಕ ಹಾಗೂ ದೊಡ್ಡ ದರೋಡೆಕೋರರ ಜತೆ ನಂಟು ಹೊಂದಿರುವುದು ಬೆಳಕಿಗೆ ಬಂದಿತ್ತು. ನಂತರ, ನಾಗ್ಪುರ ಪೊಲೀಸರು ಆರೋಪಿ ವಿರುದ್ಧ ಯುಎಪಿಎ (ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು. ಇಡೀ ಪ್ರಕರಣವನ್ನು ಕೇಂದ್ರ ಗೃಹ ಇಲಾಖೆಗೆ ವರದಿ ಮಾಡಿದ್ದರು. ಪ್ರಕರಣದ ತನಿಖೆಯ ಹೊಣೆಯನ್ನು ಎನ್​ಐಎಗೆ ವಹಿಸಲು ಕೇಂದ್ರ ಗೃಹ ಸಚಿವಾಲಯ ಒಪ್ಪಿಗೆ ನೀಡಿತ್ತು. ಎನ್‌ಐಎ ತಂಡವೊಂದು ನಾಗ್ಪುರಕ್ಕೆ ಆಗಮಿಸಲಿದ್ದು, ಶೀಘ್ರದಲ್ಲೇ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳಲಿದೆ ಎಂದು ತಿಳಿದು ಬಂದಿದೆ.

ಅಮೃತಸರ ಸ್ಫೋಟ ಪ್ರಕರಣ- NIA ತನಿಖೆ: ಸೋಮವಾರ(ನಿನ್ನೆ) ಬೆಳಗ್ಗೆ ಅಮೃತಸರದ ಗೋಲ್ಡನ್ ಟೆಂಪಲ್ ಬಳಿಯ ಹೆರಿಟೇಜ್ ಸ್ಟ್ರೀಟ್‌ನಲ್ಲಿ ಸ್ಫೋಟ ಸಂಭವಿಸಿತ್ತು. ಎರಡು ದಿನಗಳಲ್ಲಿ ಸಂಭವಿಸಿದ ಎರಡನೇ ಸ್ಫೋಟ ಇದಾಗಿದೆ. ಪ್ರಕರಣದ ತನಿಖೆಗಾಗಿ ಪೊಲೀಸರ ತಂಡಗಳು ನಿರಂತರವಾಗಿ ಆಗಮಿಸುತ್ತಿವೆ. ಸೋಮವಾರ ಬೆಳಗ್ಗೆ ಪಂಜಾಬ್ ಡಿಜಿಪಿ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಬಗ್ಗೆ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆಗಾಗಿ ಎನ್‌ಐಎ ತಂಡ ಸಂಜೆ ಘಟನಾ ಸ್ಥಳಕ್ಕೆ ಭೇಟಿ ನೀಡಿತ್ತು. ಘಟನೆಯ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುತ್ತಿದೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಮೃತಸರ ಡಿಸಿಪಿ ಪರ್ಮಿಂದರ್ ಸಿಂಗ್ ಭಂಡಾಲ್ "ಸೋಮವಾರ ಎನ್ಐಎ ತಂಡ ತನಿಖೆಗೆ ಆಗಮಿಸಿದೆ ಮತ್ತು ಅದರ ಹೊರತಾಗಿ, ಪೊಲೀಸರು ಕೂಡ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ" ಎಂದು ಮಾಹಿತಿ ನೀಡಿದರು.

ಒಟ್ಟು 77 ಬ್ಯಾಂಕ್ ಖಾತೆ ಸ್ಥಗಿತ: ಮಾರ್ಚ್ 2023ರವರೆಗೆ, ಎನ್​ಐಎ ನಿಷೇಧಿತ ಸಂಘಟನೆಯ 37 ಬ್ಯಾಂಕ್ ಖಾತೆಗಳನ್ನು ಹಾಗೂ ಕಳೆದ ವರ್ಷ ಏಪ್ರಿಲ್‌ನಿಂದ ಸಂಸ್ಥೆಗೆ ಸಂಬಂಧಿಸಿದ 19 ವ್ಯಕ್ತಿಗಳಿಗೆ ಸೇರಿದ 40 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿತ್ತು.

ಆರೋಪವೇನು?: ಎನ್​ಐಎ ಅಧಿಕಾರಿಗಳ ಪ್ರಕಾರ, "ಪಿಎಫ್​ಐ ಭಾರತ ಸರ್ಕಾರದ ವಿರುದ್ಧ ಸಶಸ್ತ್ರ ಹೋರಾಟ ನಡೆಸಲು ಯೋಜಿತ ಕಾರ್ಯತಂತ್ರವನ್ನು ರೂಪಿಸಿದೆ. ಇದಕ್ಕಾಗಿ ಮುಸ್ಲಿಂ ಯುವಕರನ್ನು ಆಮೂಲಾಗ್ರವಾಗಿ ಸೇರಿಸಿಕೊಳ್ಳುತ್ತದೆ. ಪಿಎಫ್‌ಐ ಭಯೋತ್ಪಾದಕ ಸಂಘಟನೆ ಐಸಿಸ್‌ನೊಂದಿಗೆ ಸಂಪರ್ಕ ಹೊಂದಿದೆ. ಯುವಕರನ್ನು ವಂಚಿಸುವ ಮೂಲಕ ಅವರನ್ನು ಭಯೋತ್ಪಾದನೆಗೆ ತಳ್ಳುತ್ತಿದೆ. ದೇಶದಲ್ಲಿ ಶಾಂತಿ ಕದಡುವುದು ಮತ್ತು ಜನರ ಮನಸ್ಸಿನಲ್ಲಿ ಭಯ ಮೂಡಿಸುವುದು ಇದರ ಉದ್ದೇಶ. ಪಿಎಫ್‌ಐ ಸಂಘಟನೆ ಹವಾಲಾ ಮತ್ತು ದೇಣಿಗೆ ಮೂಲಕ ಹಣ ಸಂಗ್ರಹಿಸುತ್ತದೆ. ಸುಶಿಕ್ಷಿತ ಪಿಎಫ್‌ಐ ಸೈನ್ಯವನ್ನು ಕಟ್ಟುವ ಉದ್ದೇಶದಿಂದ ದೇಶಾದ್ಯಂತ ಸಂಸ್ಥೆಯು ನಡೆಸುತ್ತಿರುವ ವಿವಿಧ ಶಸ್ತ್ರಾಸ್ತ್ರ ತರಬೇತಿ ಶಿಬಿರಗಳಲ್ಲಿ ಹೆಚ್ಚು ಯುವಕರಿಗೆ ಶಸ್ತ್ರಾಸ್ತ್ರಗಳ ಬಳಕೆ ತರಬೇತಿ ನೀಡಲಾಗುತ್ತಿದೆ. ಮುಸ್ಲಿಂ ಮೂಲಭೂತವಾದವನ್ನು ಹರಡುತ್ತಿದೆ. ಇಸ್ಲಾಮಿಕ್ ಕಲಿಫಟ್ ಸ್ಥಾಪಿಸಲು ಭಾರತೀಯ ಗಣರಾಜ್ಯವನ್ನು ವಿಘಟಿಸಲು ಯೋಜನೆ ರೂಪಿಸಿದೆ" ಎಂದು ಆರೋಪಿಸಿದೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಇಸ್ಲಾಮಿಕ್ ಸ್ಟೇಟ್ ಸಂಚು ಪ್ರಕರಣ: ಇಬ್ಬರು ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ ಎನ್‌ಐಎ

Last Updated : May 9, 2023, 10:45 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.