ETV Bharat / bharat

ವೈದ್ಯಕೀಯ ಚಿಕಿತ್ಸೆಗೆ PF ಹಿಂಪಡೆಯುವುದು ಹೇಗೆ? ಯಾವೆಲ್ಲ ಕಾರಣಗಳಿಗೆ PF ಹಿಂಪಡೆಯಬಹುದು? - ಮದುವೆಗಾಗಿ ಪಿಎಫ್ ಹಿಂಪಡೆಯುವ ವಿಧಾನ

ಕುಟುಂಬದ ಸದಸ್ಯರ ಒಪ್ಪಿಗೆಯ ಮೇರೆಗೆ, ಅನುಮೋದಿತ ಮೊತ್ತವನ್ನು ಇಪಿಎಫ್‌ಓ ಸದಸ್ಯರ ಸಂಬಳದ ಖಾತೆಗೆ ಅಥವಾ ಚಿಕಿತ್ಸೆ ಪಡೆಯುತ್ತಿರುವ ಸಂಬಂಧಿತ ಆಸ್ಪತ್ರೆಯ ಖಾತೆಗೆ ಹಣ ಜಮೆ ಮಾಡಬಹುದು. ವೈದ್ಯಕೀಯ ಮುಂಗಡ ಪಡೆಯುವ ಮುನ್ನವೇ ರೋಗಿಯು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, ಮುಂಗಡ ಪಡೆಯಲು ಉದ್ಯೋಗಿಯು 45 ದಿನಗಳ ಒಳಗೆ ವೈದ್ಯಕೀಯ ಬಿಲ್‌ಗಳನ್ನು ಇಪಿಎಫ್‌ಓಗೆ ಸಲ್ಲಿಸಬೇಕು.

Here's How Your PF (Provident Fund) Can Help In A Medical Emergency
PF ಹಿಂಪಡೆಯುವುದು ಹೇಗೆ
author img

By

Published : Jul 19, 2022, 12:21 PM IST

ವೈದ್ಯಕೀಯ ತುರ್ತುಸ್ಥಿತಿ ಮತ್ತು ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಕಾರ್ಮಿಕರ ಭವಿಷ್ಯ ನಿಧಿ ವಂತಿಗೆದಾರರು ತಮ್ಮ ಭವಿಷ್ಯ ನಿಧಿಯ ಭಾಗವನ್ನು ಹಿಂಪಡೆಯಲು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯ (EPFO) ನಿಯಮಾವಳಿಗಳ ಪ್ರಕಾರ ಅವಕಾಶವಿದೆ. ಈ ಹಿಂದೆ, ಆಸ್ಪತ್ರೆಯಿಂದ ಎಸ್ಟಿಮೇಟ್​ ಒದಗಿಸಿದ ನಂತರ ಮಾತ್ರ ಹಣ ಹಿಂಪಡೆಯಲು ಸಾಧ್ಯವಿತ್ತು. ಆದರೆ, ಕಳೆದ ವರ್ಷ ಈ ನಿಯಮಗಳನ್ನು ತಿದ್ದುಪಡಿ ಮಾಡಲಾಗಿದೆ. ಈಗ, ಇಪಿಎಫ್​​ಓ ​​ಸದಸ್ಯರು ಆಸ್ಪತ್ರೆಯಿಂದ ಎಸ್ಟಿಮೇಟ್​ (ಅಂದಾಜು) ಅಥವಾ ದಾಖಲೆಗಳ ಅಗತ್ಯವಿಲ್ಲದೇ 1 ಲಕ್ಷ ರೂಪಾಯಿಗಳವರೆಗೆ ವೈದ್ಯಕೀಯ ಮುಂಗಡವನ್ನು ಹಿಂಪಡೆಯಲು ಅನುಮತಿಸಲಾಗಿದೆ.

ಕೇಂದ್ರ ಸೇವೆಗಳು (ವೈದ್ಯಕೀಯ ಹಾಜರಾತಿ) ನಿಯಮ (CS(MA)) ಅಥವಾ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (CGHS) ಅಡಿಯಲ್ಲಿ ಬರುವ ಉದ್ಯೋಗಿಗಳು ಮಾತ್ರ ಈ ಸೌಲಭ್ಯ ಪಡೆಯಬಹುದು. ಸರ್ಕಾರಿ ಅಥವಾ ಸಾರ್ವಜನಿಕ ವಲಯದ ಘಟಕ ಅಥವಾ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯಡಿ ನೋಂದಾಯಿತ ಆಸ್ಪತ್ರೆಗೆ ದಾಖಲಾದ ರೋಗಿಗಳ ಚಿಕಿತ್ಸೆಗಾಗಿ ಮೊತ್ತವನ್ನು ಹಿಂಪಡೆಯಬಹುದು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ, ವೈದ್ಯಕೀಯ ಮುಂಗಡಕ್ಕೆ ಒಪ್ಪಿಗೆ ನೀಡುವ ಮುನ್ನ ಇಪಿಎಫ್​​ಓ ​​ನ ಸಕ್ಷಮ ಪ್ರಾಧಿಕಾರದಿಂದ ಪರಿಶೀಲನೆ ಮಾಡಲಾಗುತ್ತದೆ.

ವೈದ್ಯಕೀಯ ತುರ್ತು ಪರಿಸ್ಥಿತಿಗಾಗಿ ಪಿಎಫ್ ಹಣ ಹಿಂಪಡೆಯುವುದು ಹೇಗೆ?:

  • EPFO ​​ಪೋರ್ಟಲ್, epfindia.gov.in ಗೆ ಲಾಗ್ ಇನ್ ಮಾಡಿ
  • ಕ್ಯಾಪ್ಚಾ ವಿವರಗಳನ್ನು ತುಂಬುವ ಮುನ್ನ ನಿಮ್ಮ ಯುನಿವರ್ಸಲ್ ಖಾತೆ ಸಂಖ್ಯೆ (UAN) ಮತ್ತು ಪಾಸ್‌ವರ್ಡ್ ನಮೂದಿಸುವ ಮೂಲಕ ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ.
  • "online services" ಟ್ಯಾಬ್‌ಗೆ ನ್ಯಾವಿಗೇಟ್ ಮಾಡಿ ಮತ್ತು "claim" ಆಯ್ಕೆಯನ್ನು ಕ್ಲಿಕ್ ಮಾಡಿ.
  • UAN ನೊಂದಿಗೆ ಲಿಂಕ್ ಮಾಡಲಾದ ನಿಮ್ಮ ಬ್ಯಾಂಕ್ ವಿವರಗಳನ್ನು ಪರಿಶೀಲಿಸುವ ಅಗತ್ಯವಿರುವ ಹೊಸ ಪುಟಕ್ಕೆ ನಿಮ್ಮನ್ನು ಮರುನಿರ್ದೇಶಿಸಲಾಗುತ್ತದೆ
  • ನಿಯಮಗಳು ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ನಿಮ್ಮ ಒಪ್ಪಿಗೆ ನೀಡಿ.
  • ಈಗ, "Proceed for online claim" ಮೇಲೆ ಕ್ಲಿಕ್ ಮಾಡಿ ಮತ್ತು ವಾಪಸಾತಿಗೆ ಅನ್ವಯಿಸುವ ಆಯ್ಕೆಗಳಿಂದ "medical emergency" ಆಯ್ಕೆಮಾಡಿ.
  • ವಾಪಸಾತಿ ಅರ್ಜಿಯನ್ನು ಕೆಲಸದ ದಿನದಂದು ಸಲ್ಲಿಸಿದರೆ, ಮರುದಿನದ ಅಂತ್ಯದೊಳಗೆ ವಿತರಣೆ ಮಾಡಲಾಗುತ್ತದೆ.

ಕುಟುಂಬದ ಸದಸ್ಯರ ಒಪ್ಪಿಗೆ ಮೇರೆಗೆ, ಅನುಮೋದಿತ ಮೊತ್ತವನ್ನು ಇಪಿಎಫ್‌ಓ ಸದಸ್ಯರ ಸಂಬಳದ ಖಾತೆಗೆ ಅಥವಾ ಚಿಕಿತ್ಸೆ ಪಡೆಯುತ್ತಿರುವ ಸಂಬಂಧಿತ ಆಸ್ಪತ್ರೆಯ ಖಾತೆಗೆ ಹಣ ಜಮೆ ಮಾಡಬಹುದು. ವೈದ್ಯಕೀಯ ಮುಂಗಡ ಪಡೆಯುವ ಮುನ್ನವೇ ರೋಗಿಯು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, ಮುಂಗಡ ಪಡೆಯಲು ಉದ್ಯೋಗಿಯು 45 ದಿನಗಳ ಒಳಗೆ ವೈದ್ಯಕೀಯ ಬಿಲ್‌ಗಳನ್ನು ಇಪಿಎಫ್‌ಓಗೆ ಸಲ್ಲಿಸಬೇಕು.

ಉದ್ಯೋಗಿಗಳು ತಮ್ಮ ಪಿಎಫ್ ಅನ್ನು ವೈದ್ಯಕೀಯ ಕಾರಣವಲ್ಲದೆ ಇತರ ಕಾರಣಗಳಿಗಾಗಿ ಸಹ ಆನ್‌ಲೈನ್‌ನಲ್ಲಿ ಸುಲಭವಾಗಿ ಹಿಂಪಡೆಯಬಹುದು. EPFO ನ e-SEW ಪೋರ್ಟಲ್ ಮೂಲಕ ಸುಗಮವಾಗಿ ಹಣ ಹಿಂಪಡೆಯಬಹುದಾಗಿದೆ. ಉದ್ಯೋಗಿಗಳು ನಿವೃತ್ತರಾದ ನಂತರ ಪಿಎಫ್‌ನಲ್ಲಿನ ತಮ್ಮ ಸಂಪೂರ್ಣ ಉಳಿತಾಯವನ್ನು ಹಿಂಪಡೆಯಬಹುದು. ಆದಾಗ್ಯೂ ನಿವೃತ್ತಿಯ ಮುಂಚೆಯೇ, ಕೆಲ ಮಾನದಂಡಗಳನ್ನು ಪೂರೈಸಿ ಭಾಗಶಃ ಮೊತ್ತವನ್ನು ಹಿಂತೆಗೆದುಕೊಳ್ಳಬಹುದು.

ಪ್ರಾವಿಡೆಂಟ್ ಫಂಡ್ ಹಿಂಪಡೆಯುವಿರಾದರೆ ಈ ವಿಷಯಗಳು ಗಮನದಲ್ಲಿರಲಿ: ಪಿಎಫ್ ಖಾತೆಗೆ ಹಣ ಜಮಾ ಮಾಡಲು ನಿಮ್ಮ ಆಧಾರ್ ಕಾರ್ಡ್ ಅನ್ನು ಯುಎಎನ್ ಅಥವಾ ಯುನಿವರ್ಸಲ್ ಅಕೌಂಟ್​ನೊಂದಿಗೆ ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. EPFO ​​ವೆಬ್‌ಸೈಟ್ ಮೂಲಕ ಅಥವಾ UMANG ಮೊಬೈಲ್ ಅಪ್ಲಿಕೇಶನ್ ಮೂಲಕ ಇದನ್ನು ಮಾಡಬಹುದು. ಪಿಎಫ್​ ಹಿಂತೆಗೆದುಕೊಳ್ಳುವ ಮೊದಲು "ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ" ಅಥವಾ KYC ಔಪಚಾರಿಕತೆಯನ್ನು ಪೂರ್ಣಗೊಳಿಸುವುದು ಸಹ ಮುಖ್ಯವಾಗಿದೆ. ಕೆವೈಸಿಗಾಗಿ ಪ್ಯಾನ್ ಕಾರ್ಡ್ ಅಗತ್ಯ ಮತ್ತು ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ಪಿಎಫ್​ ಖಾತೆ "verified" ಆಗಿದೆ ಎಂಬುದನ್ನು ತೋರಿಸುತ್ತದೆ.

PF ಹಣವನ್ನು ಹಿಂಪಡೆಯಲು ನೀವು ಈ ಕಾರಣಗಳನ್ನು ಉಲ್ಲೇಖಿಸಬಹುದು:

  • ವಾಸದ ಮನೆ ನಿರ್ಮಾಣ ಅಥವಾ ಖರೀದಿಗಾಗಿ ವಸತಿ ಸಾಲ. ಇದಕ್ಕಾಗಿ ನೀವು ಕನಿಷ್ಠ 60 ತಿಂಗಳು ಸೇವೆಯಲ್ಲಿರಬೇಕು.
  • ಸ್ವತಃ ತನ್ನ ಮದುವೆಗಾಗಿ, ಮಕ್ಕಳ ಮದುವೆಗಾಗಿ, ಒಡಹುಟ್ಟಿದವವ ಮದುವೆಗಾಗಿ ಅಥವಾ ಮಕ್ಕಳ ಮೆಟ್ರಿಕ್ಯುಲೇಷನ್ ನಂತರದ ಶಿಕ್ಷಣಕ್ಕಾಗಿ. ಈ ರೀತಿಯಲ್ಲಿ ಹಣ ಹಿಂಪಡೆಯಲು ಕನಿಷ್ಠ 84 ತಿಂಗಳು ಉದ್ಯೋಗದಲ್ಲಿರಬೇಕಾಗುತ್ತದೆ.
  • ನಿವೃತ್ತಿಯ ಒಂದು ವರ್ಷದ ಮೊದಲು ನಿಮ್ಮ ಪಿಎಫ್​ ಹಣದ 90 ಪ್ರತಿಶತದವರೆಗೆ ನೀವು ಹಿಂಪಡೆಯಬಹುದು. ಆದರೆ ಆ ಸಮಯದಲ್ಲಿ ನೀವು 54 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.
  • ನಿಮ್ಮ ಪಿಎಫ್ ಹಣದ ಒಂದು ಭಾಗವನ್ನು ವೈದ್ಯಕೀಯ ವೆಚ್ಚ, ನೈಸರ್ಗಿಕ ವಿಕೋಪ, ದೈಹಿಕ ವಿಕಲಚೇತನರ ಉಪಕರಣಗಳ ಖರೀದಿ, ಕಾರ್ಖಾನೆ ಮುಚ್ಚಲು, ಸಂಸ್ಥೆಗಳಲ್ಲಿ ವಿದ್ಯುತ್ ಕಡಿತಕ್ಕೆ ಬಳಸಬಹುದು.

ಇನ್ನಿತರ ಕಾರಣಗಳಿಗಾಗಿ ಪ್ರಾವಿಡೆಂಟ್ ಫಂಡ್ ಹಿಂಪಡೆಯಲು ಅನುಸರಿಸಬೇಕಾದ ವಿಧಾನ:

  • https://unifiedportal-mem.epfindia.gov.in/memberinterface/ ನಲ್ಲಿ UAN ಪೋರ್ಟಲ್‌ಗೆ ಭೇಟಿ ನೀಡಿ
  • ನಿಮ್ಮ UAN ಮತ್ತು ಪಾಸ್‌ವರ್ಡ್ ಬಳಸಿ ಲಾಗ್ ಇನ್ ಮಾಡಿ ಮತ್ತು ಕ್ಯಾಪ್ಚಾ ನಮೂದಿಸಿ.
  • ಈಗ 'Online Services' ಟ್ಯಾಬ್‌ಗೆ ಹೋಗಿ ಮತ್ತು ಡ್ರಾಪ್-ಡೌನ್ ಮೆನುವಿನಿಂದ 'Claim (Form-31, 19 & 10C)' ' ಆಯ್ಕೆಯನ್ನು ಆರಿಸಿ.
  • ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಿ ಮತ್ತು 'Verify' ಕ್ಲಿಕ್ ಮಾಡಿ.
  • ಈಗ '‘Yes' ಕ್ಲಿಕ್ ಮಾಡಿ ಮತ್ತು ಮುಂದುವರೆಯಿರಿ.
  • ಇದರ ನಂತರ, 'Proceed for Online Claim' ಕ್ಲಿಕ್ ಮಾಡಿ.
  • ಈಗ ಕ್ಲೈಮ್ ಫಾರ್ಮ್‌ನಲ್ಲಿ, 'I Want To Apply For' ಎಂಬ ಟ್ಯಾಬ್ ಅಡಿಯಲ್ಲಿ ನಿಮಗೆ ಅಗತ್ಯವಿರುವ ಕ್ಲೈಮ್ ಅನ್ನು ಆಯ್ಕೆ ಮಾಡಿ.
  • ನಿಮ್ಮ ನಿಧಿಯನ್ನು ಹಿಂಪಡೆಯಲು 'PF Advance (Form 31)' ಆಯ್ಕೆಮಾಡಿ. ನಂತರ ಮುಂಗಡದ ಉದ್ದೇಶ, ಅಗತ್ಯವಿರುವ ಮೊತ್ತ ಮತ್ತು ಉದ್ಯೋಗಿಯ ವಿಳಾಸವನ್ನು ಒದಗಿಸಿ.
  • ಈಗ, certificate ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಅರ್ಜಿಯನ್ನು ಸಲ್ಲಿಸಿ.
  • ಸ್ಕ್ಯಾನ್ ಮಾಡಿದ ದಾಖಲೆಗಳನ್ನು ಸಲ್ಲಿಸುವಂತೆ ನಿಮ್ಮನ್ನು ಪೋರ್ಟಲ್ ಕೇಳಬಹುದು.
  • ಉದ್ಯೋಗದಾತನು ಹಿಂಪಡೆಯುವ ವಿನಂತಿಯನ್ನು ಅನುಮೋದಿಸಿದ ನಂತರ, ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತದೆ. ಸಾಮಾನ್ಯವಾಗಿ ಇದಕ್ಕೆ 15-20 ದಿನ ಬೇಕಾಗುತ್ತದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.