ETV Bharat / bharat

ತಿಂಗಳ ಮೊದಲ ದಿನವೇ ಬೆಲೆ ಏರಿಕೆ ಬಿಸಿ..ಅಡುಗೆ ಅನಿಲ ಸಿಲಿಂಡರ್​ ಬೆಲೆ 25 ರೂ. ಏರಿಕೆ - ಣಿಜ್ಯ ಬಳಕೆಯ ಸಿಲಿಂಡರ್​

ಇಂದಿನಿಂದ ಸಬ್ಸಿಡಿ ರಹಿತ ಸಿಲಿಂಡರ್ ಹಾಗೂ ವಾಣಿಜ್ಯ ಬಳಿಕೆಯ ಸಿಲಿಂಡರ್ ದರದಲ್ಲಿ ಏರಿಕೆಯಾಗಲಿದ್ದು, ಕ್ರಮವಾಗಿ 25 ಹಾಗೂ 75 ರೂಪಾಯಿ ಏರಿಕೆಯಾಗಲಿದೆ.

Petroleum companies increase the price
ಅಡುಗೆ ಅನಿಲ ದರ
author img

By

Published : Sep 1, 2021, 11:01 AM IST

Updated : Sep 1, 2021, 1:25 PM IST

ನವದೆಹಲಿ: ಪೆಟ್ರೋಲಿಯಂ ಕಂಪನಿಗಳು ದರ ಏರಿಸಿದ ಹಿನ್ನೆಲೆ ಅಡುಗೆ ಅನಿಲ ದರ ಏರಿಕೆಯಾಗಿದೆ. ಸಬ್ಸಿಡಿ ರಹಿತ ಗೃಹ ಬಳಕೆ ಅಡುಗೆ ಅನಿಲ ದರ 25 ರೂಪಾಯಿ ಏರಿಕೆಯಾಗಿದ್ದು, ಇಂದಿನಿಂದ ಪರಿಷ್ಕೃತ ದರ ಜಾರಿಯಾಗಲಿದೆ.

ಈ ಹಿನ್ನೆಲೆ ದೆಹಲಿಯಲ್ಲಿ 14.2 ಕೆ.ಜಿ ಸಿಲಿಂಡರ್​​ನ ಬೆಲೆ ಇದೀಗ ಪರಿಷ್ಕೃತ ದರದಂತೆ 884.50ಕ್ಕೆ ತಲುಪಿದೆ. ಈ ನಡುವೆ ವಾಣಿಜ್ಯ ಬಳಕೆಯ ಸಿಲಿಂಡರ್​ ದರ ಸಹ 75 ರೂಪಾಯಿ ಏರಿಕೆಯಾಗಿದ್ದು, 19 ಕೆ.ಜಿ ಸಿಲಿಂಡರ್​​ಗೆ 1,693 ರೂಪಾಯಿ ನೀಡಬೇಕಿದೆ.

ಈ ದರಗಳು ಇಂದಿನಿಂದಲೇ ಜಾರಿಯಾಗಲಿದ್ದು, ಗ್ರಾಹಕರಿಗೆ ತೈಲ ದರ ಏರಿಕೆ ನಡುವೆ ಇನ್ನಷ್ಟು ಹೊರೆಯಾಗಲಿವೆ.

ತಿಂಗಳ ಮೊದಲ ದಿನವೇ ಬೆಲೆ ಏರಿಕೆ ಬಿಸಿ..ಅಡುಗೆ ಅನಿಲ ಸಿಲಿಂಡರ್​ ಬೆಲೆ 25 ರೂ. ಏರಿಕೆ

ನವದೆಹಲಿ: ಪೆಟ್ರೋಲಿಯಂ ಕಂಪನಿಗಳು ದರ ಏರಿಸಿದ ಹಿನ್ನೆಲೆ ಅಡುಗೆ ಅನಿಲ ದರ ಏರಿಕೆಯಾಗಿದೆ. ಸಬ್ಸಿಡಿ ರಹಿತ ಗೃಹ ಬಳಕೆ ಅಡುಗೆ ಅನಿಲ ದರ 25 ರೂಪಾಯಿ ಏರಿಕೆಯಾಗಿದ್ದು, ಇಂದಿನಿಂದ ಪರಿಷ್ಕೃತ ದರ ಜಾರಿಯಾಗಲಿದೆ.

ಈ ಹಿನ್ನೆಲೆ ದೆಹಲಿಯಲ್ಲಿ 14.2 ಕೆ.ಜಿ ಸಿಲಿಂಡರ್​​ನ ಬೆಲೆ ಇದೀಗ ಪರಿಷ್ಕೃತ ದರದಂತೆ 884.50ಕ್ಕೆ ತಲುಪಿದೆ. ಈ ನಡುವೆ ವಾಣಿಜ್ಯ ಬಳಕೆಯ ಸಿಲಿಂಡರ್​ ದರ ಸಹ 75 ರೂಪಾಯಿ ಏರಿಕೆಯಾಗಿದ್ದು, 19 ಕೆ.ಜಿ ಸಿಲಿಂಡರ್​​ಗೆ 1,693 ರೂಪಾಯಿ ನೀಡಬೇಕಿದೆ.

ಈ ದರಗಳು ಇಂದಿನಿಂದಲೇ ಜಾರಿಯಾಗಲಿದ್ದು, ಗ್ರಾಹಕರಿಗೆ ತೈಲ ದರ ಏರಿಕೆ ನಡುವೆ ಇನ್ನಷ್ಟು ಹೊರೆಯಾಗಲಿವೆ.

Last Updated : Sep 1, 2021, 1:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.