ನವದೆಹಲಿ: ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 25 ರಿಂದ 30 ಪೈಸೆ ಮತ್ತೆ ಏರಿಕೆಯಾಗಿದೆ. ಈ ಮೂಲಕ ದೇಶದಲ್ಲಿ ಕಳೆದ 12 ದಿನಗಳಲ್ಲಿ 9 ಬಾರಿ ತೈಲ ದರ ಹೆಚ್ಚಳವಾದಂತಾಗಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 26 ಪೈಸೆ ಹೆಚ್ಚಳ ಕಂಡುಬಂದಿದ್ದು, ಲೀಟರ್ ಬೆಲೆ 106.21 ಆಗಿದೆ. ಅಂತೆಯೇ ಡೀಸೆಲ್ ಬೆಲೆಯಲ್ಲೂ 22 ಪೈಸೆ ಏರಿಕೆಯಾಗಿದ್ದು, 96.67 ರೂ. ಆಗಿದೆ.
ದೆಹಲಿಯಲ್ಲಿ 25 ಪೈಸೆ ಹೆಚ್ಚಳವಾಗಿದ್ದು ಲೀಟರ್ ಪೆಟ್ರೋಲ್ಗೆ 102.64 ರೂ. ಬೆಲೆಯಿದೆ. ಡೀಸೆಲ್ಗೆ 30 ಪೈಸೆ ಹೆಚ್ಚಳವಾಗಿದ್ದು, 91.07 ರೂ. ಇದೆ.
ಮುಂಬೈನಲ್ಲಿ ಪೆಟ್ರೋಲ್ ಬೆಲೆ ಸದ್ಯಕ್ಕೆ ಪ್ರತಿ ಲೀಟರ್‌ಗೆ 108.67 ರೂ. ರಷ್ಟಿದ್ದು, ಡೀಸೆಲ್ ದರ 98.48 ರೂ. ಇದೆ. ಆದರೆ, ಚಿಲ್ಲರೆ ದರಗಳು ರಾಜ್ಯದ ಸ್ಥಳೀಯ ತೆರಿಗೆಗಳ ಮಟ್ಟವನ್ನು ಅವಲಂಬಿಸಿ ಬದಲಾಗುತ್ತಿರುತ್ತವೆ.
ಕೊಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆಯಲ್ಲಿ 29 ಪೈಸೆ ಹೆಚ್ಚಳವಾಗಿದ್ದು, ಪ್ರತೀ ಲೀಟರ್‌ಗೆ 103.36 ರೂ. ಆಗಿದೆ. ಇನ್ನು ಡೀಸೆಲ್ ಬೆಲೆಯೂ 94.17 ರೂ. ಇದೆ. ಇನ್ನೊಂದೆಡೆ ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 100.23 ರೂ ಆಗಿದ್ದು, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 95.59 ರೂ ಇದೆ.