ETV Bharat / bharat

ಗುಡ್​ನ್ಯೂಸ್​: ಕೇಂದ್ರದಿಂದ ಅಬಕಾರಿ ಸುಂಕ ಕಡಿತ; ಪೆಟ್ರೋಲ್ 9.5, ಡಿಸೇಲ್ ದರ 7 ರೂ. ಇಳಿಕೆ

ತೈಲ ಬೆಲೆ ವಿಚಾರವಾಗಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಪೆಟ್ರೋಲ್​-ಡಿಸೇಲ್ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿ, ಮಹತ್ವದ ನಿರ್ಧಾರ ಕೈಗೊಂಡಿದೆ.

Petrol price
Petrol price
author img

By

Published : May 21, 2022, 7:05 PM IST

Updated : May 21, 2022, 9:10 PM IST

ನವದೆಹಲಿ: ಪಂಚರಾಜ್ಯ ಚುನಾವಣೆ ಬಳಿಕ ತೈಲ ಬೆಲೆಗಳಲ್ಲಿ ಏರಿಕೆಯಾಗಿದ್ದರಿಂದ ವಾಹನ ಸವಾರರು ಇನ್ನಿಲ್ಲದ ಸಮಸ್ಯೆ ಅನುಭವಿಸುವಂತಾಗಿತ್ತು. ಇದೀಗ, ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಬಿಗ್ ರಿಲೀಫ್ ನೀಡಿದ್ದು, ಪೆಟ್ರೋಲ್​-ಡಿಸೇಲ್ ಮೇಲಿನ ಅಬಕಾರಿ ಸುಂಕ ಇಳಿಕೆ ಮಾಡಿದೆ. ದಿಢೀರ್​ ಬೆಳವಣಿಗೆವೊಂದರಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು,ಪೆಟ್ರೋಲ್ ಮೇಲೆ ಪ್ರತಿ ಲೀಟರ್​ಗೆ 8 ರೂಪಾಯಿ ಹಾಗೂ ಡಿಸೇಲ್ ಮೇಲೆ 6 ರೂಪಾಯಿ ಅಬಕಾರಿ ಸುಂಕ ಇಳಿಕೆ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಟ್ವೀಟ್ ಮಾಡಿ, ಮಾಹಿತಿ ಹಂಚಿಕೊಂಡಿದ್ದಾರೆ.

  • We are reducing the Central excise duty on Petrol by Rs 8 per litre and on Diesel by Rs 6 per litre. This will reduce the price of petrol by Rs 9.5 per litre and of Diesel by Rs 7 per litre: Union Finance Minister Nirmala Sitharaman

    (File Pic) pic.twitter.com/13YJTpDGIf

    — ANI (@ANI) May 21, 2022 " class="align-text-top noRightClick twitterSection" data=" ">

ದೊಡ್ಡ ಮಟ್ಟದಲ್ಲಿ ಅಬಕಾರಿ ಸುಂಕ ಇಳಿಕೆಯಾಗಿರುವ ಕಾರಣ ವಾಹನ ಸವಾರರಿಗೆ ಇದೀಗ ಪೆಟ್ರೋಲ್​ ಮೇಲೆ 9.5ರೂ ಹಾಗೂ ಡಿಸೇಲ್​ 7 ರೂ ಕಡಿಮೆ ಆಗಲಿದೆ. ಈ ಮೂಲಕ ಗ್ರಾಹಕರಿಗೆ ಕೇಂದ್ರ ಸರ್ಕಾರ ಬಿಗ್​​ ರಿಲೀಫ್ ನೀಡಿದೆ. ಇದರ ಜೊತೆಗೆ ಆಮುದು ಪ್ಲಾಸ್ಟಿಕ್ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ಸಹ ಇಳಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಮನೆ ಕಟ್ಟುವವರಿಗೂ ಶುಭ ಸುದ್ದಿ ನೀಡಿದೆ. ಸಿಮೆಂಟ್​ ದರ ಇಳಿಕೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಈ ಮೂಲಕ ಕೇಂದ್ರ ಸರ್ಕಾರ ತನ್ನ ಮೇಲಿದ್ದ ಆರೋಪಗಳಿಂದ ಮುಕ್ತವಾಗಲು ಮತ್ತು ಪ್ರತಿಪಕ್ಷಗಳನ್ನು ಕಟ್ಟಿ ಹಾಕಲು ಭಾರಿ ರಣತಂತ್ರವನ್ನೇ ರೂಪಿಸಿದಂತಿದೆ.

ಇದನ್ನೂ ಓದಿ: ರೈತರಿಗೆ ಬಂಪರ್​​: ರಸಗೊಬ್ಬರಕ್ಕೆ 1.10 ಲಕ್ಷ ಕೋಟಿ ಹೆಚ್ಚುವರಿ ಸಬ್ಸಿಡಿ, ಸಿಮೆಂಟ್ ದರ ಇಳಿಸಲು ನಿರ್ಧಾರ

ರೈತರಿಗೆ ಗುಡ್​ನ್ಯೂಸ್: ಕೇಂದ್ರ ಸರ್ಕಾರ ರೈತರಿಗೂ ಗುಡ್​ನ್ಯೂಸ್ ನೀಡಿದ್ದು, ರಸಗೊಬ್ಬರದ ಮೇಲೆ ಹೆಚ್ಚುವರಿ ಸಬ್ಸಿಡಿ ನೀಡಲು ನಿರ್ಧಾರ ಕೈಗೊಂಡಿದೆ. ಇದರ ಜೊತೆಗೆ ಉಜ್ವಲ ಯೋಜನೆಯಡಿ ಗ್ಯಾಸ್ ಬಳಕೆ ಮಾಡುತ್ತಿರುವ ಪ್ರತಿ ಕುಟುಂಬಕ್ಕೆ 200 ರೂಪಾಯಿ ಸಹಾಯ ಧನ ನೀಡಲು ನಿರ್ಧರಿಸಿದ್ದು, ವರ್ಷಕ್ಕೆ 12 ಸಿಲಿಂಡರ್​​ಗಳಿಗೆ ಈ ಹಣ ಸಿಗಲಿದೆ. ಹಣದುಬ್ಬರ ಇಳಿಕೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ತಿಳಿದು ಬಂದಿದೆ.

ಈ ಮೊದಲು ಡಿಸೆಂಬರ್​​ನಲ್ಲಿ ಅಬಕಾರಿ ಸುಂಕ ಇಳಿಕೆ ಮಾಡಿದ್ದ ಕೇಂದ್ರ: ಕೇಂದ್ರ ಸರಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿತ್ತು. ಈ ಬೆನ್ನಿಗೆ ರಾಜ್ಯ ಸರಕಾರವೂ ಇಂಧನದ ಬೆಲೆ ಇಳಿಕೆ ಮಾಡಿತ್ತು. ಕೇಂದ್ರ ಸರಕಾರ ಪೆಟ್ರೋಲ್‌ ಮೇಲಿನ ಅಬಕಾರಿ ಸುಂಕವನ್ನು 5 ರೂ., ಹಾಗೂ ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು 10 ರೂ. ಇಳಿಕೆ ಮಾಡಿತ್ತು. ಆ ಬೆನ್ನಲ್ಲೇ ರಾಜ್ಯ ಸರಕಾರವೂ ಡೀಸೆಲ್‌ ಮತ್ತು ಪೆಟ್ರೋಲ್ ದರವನ್ನು ತಲಾ 7 ರೂ. ಕಡಿತಗೊಳಿಸಿತ್ತು.

Last Updated : May 21, 2022, 9:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.