ನವದೆಹಲಿ : ಪ್ರಸ್ತುತ ಆರ್ಥಿಕ ವರ್ಷದಲ್ಲಿ ಜಾಗತಿಕ ತೈಲ ಬೆಲೆ ಗರಿಷ್ಠ ಮಟ್ಟ ತಲುಪಿರುವ ಪರಿಣಾಮ, ಒಂದು ದಿನದ ವಿರಾಮದ ಮತ್ತೆ ಗುರುವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ.
ಈ ಹಿಂದಿನ ಪೆಟ್ರೋಲ್ ದರ 81.70 ಪೈಸೆಯಲ್ಲಿ 11 ಪೈಸೆ ಏರಿಕೆಯಾಗುವ ಮೂಲಕ ಗುರುವಾರ ಪ್ರತೀ ಲೀಟರ್‌ಗೆ 81.59 ಪೈಸೆ ಆಗಿದೆ. ಡೀಸೆಲ್ ಬೆಲೆ 71.41 ಪೈಸೆಯಲ್ಲಿ 21 ಪೈಸೆ ಹೆಚ್ಚಳವಾಗುವ ಮೂಲಕ ಪ್ರತೀ ಲೀಟರ್‌ಗೆ 71.62 ಪೈಸೆ ಆಗಿದೆ.
ಇದನ್ನೂ ಓದಿ: ಮಾರುತಿ ಸುಜುಕಿ ವಾಹನಗಳ ಮಾರಾಟದಲ್ಲಿ ಏರಿಕೆ.. ಹಳಿಗೆ ಮರಳಿದ ವಹಿವಾಟು!
ಇಂಧನ ಬೆಲೆ ಪರಿಷ್ಕರಣೆಯಲ್ಲಿ ಸುಮಾರು ಎರಡು ತಿಂಗಳ ವಿರಾಮದ ಬಳಿಕ, ತೈಲ ಕಂಪನಿಗಳು ಶುಕ್ರವಾರದಿಂದ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಲು ಪ್ರಾರಂಭಿಸಿವೆ. ಬುಧವಾರ ಒಂದು ದಿನದ ವಿರಾಮಕ್ಕಿಂತ ಮೊದಲು ಸತತ ಐದು ದಿನಗಳ ಬೆಲೆ ಹೆಚ್ಚಾಗಿವೆ.
ಐದು ದಿನಗಳಲ್ಲಿ ಪೆಟ್ರೋಲ್ ಬೆಲೆ 53 ಪೈಸೆ ಮತ್ತು ಡೀಸೆಲ್ ದರ ಪ್ರತಿ ಲೀಟರ್‌ಗೆ 95 ಪೈಸೆ ಏರಿಕೆಯಾಗಿದೆ. ಗುರುವಾರ ಮತ್ತೆ ಹೆಚ್ಚಳದೊಂದಿಗೆ, ಪೆಟ್ರೋಲ್ ಬೆಲೆ ಶುಕ್ರವಾರದಿಂದ ಲೀಟರ್‌ಗೆ 64 ಪೈಸೆ ಮತ್ತು ಡೀಸೆಲ್ ಲೀಟರ್‌ಗೆ 1.16 ರೂ. ಏರಿಕೆಯಾದಂತಾಗಿದೆ. ಸೆಪ್ಟೆಂಬರ್ 22 ರಿಂದ ಪೆಟ್ರೋಲ್ ಬೆಲೆ ಸ್ಥಿರವಾಗಿತ್ತು ಮತ್ತು ಅಕ್ಟೋಬರ್ 2 ರಿಂದ ಡೀಸೆಲ್ ದರ ಕೂಡ ಬದಲಾಗಿರಲಿಲ್ಲ.