ನವದೆಹಲಿ: ಸತತ ಮೂರನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಏರಿಕೆ ಕಂಡಿದೆ. ಇಂದು ಕೂಡ ಪೆಟ್ರೋಲ್ ಒಂದು ಲೀಟರ್ಗೆ 25 ಪೈಸೆ ಮತ್ತು ಡೀಸೆಲ್ ಲೀಟರ್ಗೆ 30 ಪೈಸೆ ಏರಿಕೆ ಕಂಡಿದೆ. ತೈಲ ದರ ಏರಿಕೆಯಿಂದಾಗಿ ಗ್ರಾಹಕರ ಜೇಬು ಸುಡುವಂತಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ ದರ ₹87.85 ಮತ್ತು ಡೀಸೆಲ್ ದರ ₹78.03, ಮುಂಬೈನಲ್ಲಿ ₹94.36 & ₹84.94, ಕೋಲ್ಕತ್ತಾದಲ್ಲಿ ₹90.18 & ₹83.18 ಮತ್ತು ಬೆಂಗಳೂರಿನಲ್ಲಿ ₹90.78 & ₹82.72 ದರ ಇದೆ. ಕೊರೊನಾದಿಂದ ದೇಶದ ಜನರು ಆರ್ಥಿಕ ಸಂಕಷ್ಟದಿಂದ ತತ್ತರಿಸಿದ್ದು, ಈ ನಡುವೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಇನ್ನಷ್ಟು ಸಂಕಷ್ಟ ತಂದಿಟ್ಟಿದೆ.
ಪೆಟ್ರೋಲ್ 90ರ ಗಡಿ ದಾಟಿದ್ದರೂ ತೈಲ ಉತ್ಪನ್ನಗಳ ಅಬಕಾರಿ ಶುಲ್ಕ ಕಡಿತದ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಸೆಸ್ ವಾಪಸ್ ತೆಗೆಯುವುದಿಲ್ಲ ಎಂದು ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ರಾಜ್ಯಸಭೆಯಲ್ಲಿ ನಿನ್ನೆ ಹೇಳಿದ್ದರು.