ನವದೆಹಲಿ: ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಮತ್ತೆ ಏರಿಕೆ ಕಂಡಿದೆ. ಅಕ್ಟೋಬರ್ ತಿಂಗಳಿನಿಂದ ಇದು ನಾಲ್ಕನೇ ಬಾರಿಯ ಏರಿಕೆಯಾಗಿದೆ.
ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL), ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಅಂತಾರಾಷ್ಟ್ರೀಯ ಬೆಲೆ ಮತ್ತು ವಿದೇಶಿ ವಿನಿಮಯ ದರಗಳಿಗೆ ಅನುಗುಣವಾಗಿ ಇಂಧನ ಬೆಲೆಯನ್ನು ಪರಿಷ್ಕರಿಸಿವೆ.
ರಾಷ್ಟ್ರ ರಾಜಧಾನಿಯಲ್ಲಿ ತೈಲ ಬೆಲೆಯ ವಿಚಾರಕ್ಕೆ ಬರುವುದಾದರೆ, ಮಂಗಳವಾರದಿಂದ ಒಂದು ಲೀಟರ್ ಪೆಟ್ರೋಲ್ 30 ಪೈಸೆಯಷ್ಟು ಏರಿಕೆ ಕಂಡಿದೆ. ಇದರಿಂದಾಗಿ ಈಗ ಪೆಟ್ರೋಲ್ ಬೆಲೆ ದೆಹಲಿಯಲ್ಲಿ 102.94 ರೂಪಾಯಿಗೆ ತಲುಪಿದೆ. ಡಿಸೇಲ್ ಬೆಲೆಯೂ ದೆಹಲಿಯಲ್ಲಿ 35 ಪೈಸೆ ಏರಿಕೆ ಕಂಡಿದ್ದು, ಒಂದು ಲೀಟರ್ ಡೀಸೆಲ್ ಬೆಲೆ 91.42 ರೂಪಾಯಿಗೆ ತಲುಪಿದೆ.
ಮೆಟ್ರೋ ನಗರಗಳಲ್ಲಿ ಮುಂಬೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಅಧಿಕವಾಗಿದೆ. ಇಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 108.96 ರೂಪಾಯಿ, ಪ್ರತಿ ಲೀಟರ್ ಡೀಸೆಲ್ ಬೆಲೆ 99.17 ರೂಪಾಯಿ ಇದೆ. ಮುಂಬೈನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಹೆಚ್ಚಳಕ್ಕೆ ಕಾರಣವೆಂದರೆ ಅಲ್ಲಿನ ರಾಜ್ಯ ಸರ್ಕಾರ ವಿವಿಧ ತೆರಿಗೆಗಳಾಗಿವೆ.
ವಿವಿಧ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ..
ನಗರದ ಹೆಸರು | ಪೆಟ್ರೋಲ್ ಬೆಲೆ (ರೂ.ಗಳಲ್ಲಿ) | ಡಿಸೇಲ್ ಬೆಲೆ (ರೂ.ಗಳಲ್ಲಿ) |
ನವದೆಹಲಿ | 102.94 | 91.42 |
ಹೈದರಾಬಾದ್ | 107.09 | 99.75 |
ಕೋಲ್ಕತಾ | 103.65 | 94.53 |
ಚೆನ್ನೈ | 100.49 | 95.93 |
ಬೆಂಗಳೂರು | 106.52 | 97.03 |
ಮುಂಬೈ | 108.96 | 99.17 |
ಇದನ್ನೂ ಓದಿ: ಅತ್ಯಾಚಾರಿಗೆ ಕೇವಲ 9 ದಿನದಲ್ಲಿ ಶಿಕ್ಷೆ ನೀಡಿದ ಕೋರ್ಟ್