ETV Bharat / bharat

ಕೊರೊನಾ ಕಾಲದಲ್ಲಿ ಸಾಕುಪ್ರಾಣಿಗಳ ಆರೈಕೆ - ಕೊರೊನಾ ಕಾಲದಲ್ಲಿ ಸಾಕುಪ್ರಾಣಿಗಳ ಸಂಕಷ್ಟ

ಕೋವಿಡ್-19 ಸೋಂಕು ವಿಪರೀತವಾಗಿ ಹರಡಿದ್ದರಿಂದ ಕ್ವಾರಂಟೈನ್ ಹಾಗೂ ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿ ಸಾಕುಪ್ರಾಣಿಗಳನ್ನು ಹೊಂದಿರುವವರು ಇನ್ನೂ ಹೆಚ್ಚಿನ ಸವಾಲು ಅನುಭವಿಸಿದರು. ಆದರೆ ಸಾಕುಪ್ರಾಣಿಗಳು ಸೋಂಕನ್ನು ಹರಡುವುದಿಲ್ಲವಾದ್ದರಿಂದ ಆತಂಕಪಡುವ ಅಗತ್ಯವಿಲ್ಲ ಎನ್ನುವುದು ವೈದ್ಯರ ಮಾತು.

pet
pet
author img

By

Published : Feb 19, 2021, 5:28 PM IST

ಹೈದರಾಬಾದ್: ಕೋವಿಡ್-19 ವಿವಿಧ ಅನಿರೀಕ್ಷಿತ ಸಂದರ್ಭಗಳನ್ನು ಪ್ರಸ್ತುತಪಡಿಸದ್ದು, ನಾವು ಅವರೊಂದಿಗೆ ವ್ಯವಹರಿಸುವ ಹೊಸ ಮಾರ್ಗಗಳನ್ನು ಕಂಡುಹಿಡಿಯಬೇಕಾಗಿತ್ತು. ಅಂತಹ ಒಂದು ಸಂದರ್ಭವೆಂದರೆ ಸಾಕುಪ್ರಾಣಿಗಳ ಆರೈಕೆ.

ಕೋವಿಡ್-19 ಸೋಂಕು ವಿಪರೀತವಾಗಿ ಹರಡಿದ್ದರಿಂದ ಕ್ವಾರಂಟೈನ್ ಹಾಗೂ ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿ ಸಾಕು ಪ್ರಾಣಿಗಳನ್ನು ಹೊಂದಿರುವವರು ಇನ್ನೂ ಹೆಚ್ಚಿನ ಸವಾಲು ಅನುಭವಿಸಿದರು. ಈಟಿವಿ ಭಾರತ್ ಸುಖೀಭವ ತಂಡ ಪಶುವೈದ್ಯೆ ಡಾ.ಅನುರಾಧಾ ವಿ. ಪೈ ಅವರೊಂದಿಗೆ ಸಂವಾದ ನಡೆಸಿದೆ.

ಸಾಕುಪ್ರಾಣಿಗಳ ಮಾಲೀಕರು ಕೋವಿಡ್​ಗೆ ತುತ್ತಾದಾಗ, ಅನೇಕರು ತಮ್ಮ ಸಾಕುಪ್ರಾಣಿಗಳನ್ನು ಕುಟುಂಬಸ್ಥರ ಆರೈಕೆಯಲ್ಲಿ ಬಿಟ್ಟಿದ್ದರು. ಇದರಿಂದ ಅವುಗಳು ಏಕಾಂಗಿಯಾಗದಿರಲಿ ಹಾಗೂ ಡೇಕೇರ್​ಗಳ ಅಗತ್ಯ ಇಲ್ಲದಂತೆ ಕ್ರಮ ಕೈಗೊಂಡಿದ್ರು.

ಕೋವಿಡ್ -19 ಪ್ರಾರಂಭವಾದ ಸಂದರ್ಭದಲ್ಲಿ ವುಹಾನ್‌ನಲ್ಲಿ ಸಾಕುಪ್ರಾಣಿಗಳನ್ನು ಮಾಲೀಕರು ತಮ್ಮಿಂದ ದೂರ ಮಾಡಿದರು ಎಂದು ಅನೇಕ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದವು. ಕೋವಿಡ್ -19 ಭಾರತದಲ್ಲಿ ಹರಡಲು ಪ್ರಾರಂಭಿಸಿದಾಗ ಮತ್ತು ಲಾಕ್‌ಡೌನ್ ಜಾರಿಗೊಳಿಸಿದಾಗ, ಕೆಲವು ಜನರು ತಮ್ಮ ಸಾಕುಪ್ರಾಣಿಗಳಿಗೆ ಆಹಾರವನ್ನು ನೀಡುವುದು ಅಥವಾ ಅವುಗಳನ್ನು ನೋಡಿಕೊಳ್ಳುವುದು ಕಷ್ಟಕರವಾದಾಗ ಅವುಗಳನ್ನು ತ್ಯಜಿಸಿದ್ದರು.

ಇದರಿಂದಾಗಿ ಕೆಲವು ಪ್ರಾಣಿಗಳು ಹಸಿವಿನಿಂದ ಬಳಲುತ್ತಿದ್ದವು. ಕೆಲ ಸಂಘಟನೆಗಳು ಇಂತಹ ಪ್ರಾಣಿಗಳಿಗೆ ಆಹಾರ ಪೂರೈಸುವ ಕಾರ್ಯದಲ್ಲಿ ತೊಡಗಿದ್ದವು.

ಕೋವಿಡ್ 19 ಸಂದರ್ಭದಲ್ಲಿ ಮನೆಯಿಂದ ಹೊರ ಹೋಗಲು ಸಾಧ್ಯವಾಗದ ಕಾರಣ ಸಾಕುಪ್ರಾಣಿಗಳ ಮಾಲೀಕರು ತಮ್ಮ ಸಾಕುಪ್ರಾಣಿಗಳಿಗೆ ಮನೆಯಲ್ಲಿಯೇ ಶೌಚ ಮಾಡಿಸಲು ತರಬೇತಿ ನೀಡಿದರು. ಇದಕ್ಕಾಗಿ ಅವರು ಯೂಟ್ಯೂಬ್ ವಿಡಿಯೋಗಳನ್ನು ವೀಕ್ಷಿಸಿದರು ಅಥವಾ ಆನ್‌ಲೈನ್‌ನಲ್ಲಿ ತಮ್ಮ ಪಶುವೈದ್ಯರೊಂದಿಗೆ ಸಮಾಲೋಚನೆ ನಡೆಸಿದರು. ಸಾಕುಪ್ರಾಣಿಗಳ ಮಾಲೀಕರು ತಮ್ಮ ಸಾಕುಪ್ರಾಣಿಗಳೊಂದಿಗೆ ಸಾಕಷ್ಟು ಸಮಯ ಕಳೆದರು.

ಸೋಂಕಿಗೆ ಒಳಗಾದ ಮತ್ತು ಸಾಕುಪ್ರಾಣಿಗಳನ್ನು ನೋಡಿಕೊಳ್ಳಲು ಸಾಧ್ಯವಾಗದ ಸಾಕುಪ್ರಾಣಿ ಪೋಷಕರಿಗೆ ಯಾವ ಆಯ್ಕೆಗಳಿವೆ?

ಆನ್‌ಲೈನ್‌ನಲ್ಲಿ 'ಪೆಟ್‌ಬ್ಯಾಕರ್' ಎಂಬ ಪೇಜ್ ಇದ್ದು, ಅದು ಭಾರತದ ಪ್ರತಿಯೊಂದು ರಾಜ್ಯಗಳಲ್ಲೂ ಅಂತಹ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ದೇಶದಲ್ಲಿ ಸಾಕುಪ್ರಾಣಿಗಳನ್ನು ನೋಡಿಕೊಳ್ಳುವ ಮತ್ತು ಅಂತಹ ಸಂದರ್ಭಗಳಲ್ಲಿ ಅವುಗಳನ್ನು ನಿಭಾಯಿಸುವ ಡೇಕೇರ್‌ಗಳ ಬಗ್ಗೆ ನಿಮಗೆ ತಿಳಿಸುತ್ತದೆ. ಕೆಲವು ಪೆಟ್ ಸಿಟ್ಟರ್‌ಗಳಿವೆ. ಅಲ್ಲಿ ನಿಮ್ಮ ನಾಯಿಯನ್ನು ವಾಕ್​ಗೆ ಕರೆದೊಯ್ಯುತ್ತಾರೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ಸಾಕು ದಾದಿಯರಾಗಿ ಸಹಾಯ ಮಾಡುತ್ತಾರೆ. ಅಲ್ಲಿ ಅವರಿಗೆ ನಿಮ್ಮ ಸಾಕುಪ್ರಾಣಿಗಳ ಆಹಾರದ ವಿವರಗಳು ಅಥವಾ ಸೂಚನೆಗಳು ಮತ್ತು ಯಾವುದೇ ವೈದ್ಯಕೀಯ ಔಷಧಗಳ ಮಾಹಿತಿ ಒದಗಿಸಬೇಕು.

ಸಾಕುಪ್ರಾಣಿಗಳು ಸೋಂಕನ್ನು ಹರಡುವುದಿಲ್ಲವಾದ್ದರಿಂದ ಆತಂಕಪಡುವ ಅಗತ್ಯವಿಲ್ಲ. ಕೊರೊನಾ ವೈರಸ್ ರೋಗಿಯಿಂದ ಸಾಕುಪ್ರಾಣಿಗಳಿಗೆ ಸೋಂಕು ತಗಲುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.