ಕಾನ್ಪುರ (ಉತ್ತರ ಪ್ರದೇಶ): ಪಿಯೂಷ್ ಜೈನ್ ಬಳಿಕ ಇದೀಗ ಸಮಾಜವಾದಿ ಪಕ್ಷದ ಎಂಎಲ್‌ಸಿ ಆಗಿರುವ ಪುಷ್ಪರಾಜ್ ಜೈನ್ ಅಲಿಯಾಸ್ ಪಂಪಿ ಜೈನ್ ಹಾಗೂ ಮತ್ತೊಬ್ಬ ಸುಗಂಧ ದ್ರವ್ಯ ವ್ಯಾಪಾರಿ ಫೌಜಾನ್ ನಿವಾಸ, ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.
ಉತ್ತರ ಪ್ರದೇಶದ ಕಾನ್ಪುರ, ಕನೌಜ್, ಮಹಾರಾಷ್ಟ್ರದ ಮುಂಬೈ ಮತ್ತು ಗುಜರಾತ್ನ ಸೂರತ್, ತಮಿಳುನಾಡಿನ ದಿಂಡಿಗಲ್ ಸೇರಿದಂತೆ ಇವರಿಬ್ಬರಿಗೆ ಸೇರಿದ ಎಂಟು ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ಇಂದು ಬೆಳಗ್ಗೆಯಿಂದ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದೊಂದು ವಾರದಿಂದ ಸೆಂಟ್ ಉದ್ಯಮಿ ಪಿಯೂಷ್ ಜೈನ್ಗೆ ಸೇರಿದ ಸ್ಥಳಗಳಲ್ಲಿ ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯದ ಡೈರೆಕ್ಟರೇಟ್ ಜನರಲ್ ತನಿಖಾ ಸಂಸ್ಥೆಯಡಿ ಬರುವ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್‌ಗಳ ಕೇಂದ್ರೀಯ ಮಂಡಳಿಯ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಬರೋಬ್ಬರಿ 194.45 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಂಡಿತ್ತು.
ಇದನ್ನೂ ಓದಿ: ಕಾನ್ಪುರ್ ಐಟಿ ದಾಳಿ ಈಗ ಚಿತ್ರವಾಗಿ ತೆರೆ ಮೇಲೆ... ಯಾವುದಾ ಚಿತ್ರ..? ಹೀರೋ ಯಾರು?
ಇತ್ತೀಚೆಗೆ ಸಮಾಜವಾದಿ ಪಕ್ಷ ಸುಗಂಧ ದ್ರವ್ಯವೊಂದನ್ನು ಬಿಡುಗಡೆ ಮಾಡಿದ್ದು, ಇದನ್ನು ಪಿಯೂಷ್ ಜೈನ್ ತಯಾರಿಸಿದ್ದರು. ಆ ಬಳಿಕ ಎಸ್ಪಿ ಪಕ್ಷಕ್ಕೂ ಈ ಹಣಕ್ಕೂ ಲಿಂಕ್ ಇದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು.
-
पिछली बार की अपार विफलता के बाद इस बार BJP के परम सहयोगी I.T. ने सपा MLC श्री पुष्प राज जैन और कन्नौज के अन्य इत्र व्यापारियों के यहां पर आखिर छापे मार ही दिए है।
— Samajwadi Party (@samajwadiparty) December 31, 2021 " class="align-text-top noRightClick twitterSection" data="
डरी BJP द्वारा केंद्रीय एजेंसियों का खुलेआम दुरुपयोग, यूपी चुनावों में आम है।
जनता सब देख रही है, वोट से देगी जवाब।
">पिछली बार की अपार विफलता के बाद इस बार BJP के परम सहयोगी I.T. ने सपा MLC श्री पुष्प राज जैन और कन्नौज के अन्य इत्र व्यापारियों के यहां पर आखिर छापे मार ही दिए है।
— Samajwadi Party (@samajwadiparty) December 31, 2021
डरी BJP द्वारा केंद्रीय एजेंसियों का खुलेआम दुरुपयोग, यूपी चुनावों में आम है।
जनता सब देख रही है, वोट से देगी जवाब।पिछली बार की अपार विफलता के बाद इस बार BJP के परम सहयोगी I.T. ने सपा MLC श्री पुष्प राज जैन और कन्नौज के अन्य इत्र व्यापारियों के यहां पर आखिर छापे मार ही दिए है।
— Samajwadi Party (@samajwadiparty) December 31, 2021
डरी BJP द्वारा केंद्रीय एजेंसियों का खुलेआम दुरुपयोग, यूपी चुनावों में आम है।
जनता सब देख रही है, वोट से देगी जवाब।
ಬಿಜೆಪಿ ವಿರುದ್ಧ ತನ್ನ ಟ್ವಿಟರ್ ಹ್ಯಾಂಡಲ್ನಲ್ಲಿ ವಾಗ್ದಾಳಿ ನಡೆಸಿರುವ ಎಸ್ಪಿ ಪಕ್ಷ, "ಕಳೆದ ಬಾರಿಯ ಭಾರೀ ವೈಫಲ್ಯದ ನಂತರ ಈ ಬಾರಿ ಬಿಜೆಪಿಯ ಅಂತಿಮ ಮಿತ್ರ ಆದಾಯ ತೆರಿಗೆ ಇಲಾಖೆ. ಯುಪಿ ಚುನಾವಣೆಯಲ್ಲಿ ಹೆದರಿದ ಬಿಜೆಪಿಯು ಕೇಂದ್ರೀಯ ಸಂಸ್ಥೆಗಳನ್ನು ಬಹಿರಂಗವಾಗಿ ದುರುಪಯೋಗಪಡಿಸಿಕೊಳ್ಳುವುದು ಸಾಮಾನ್ಯವಾಗಿದೆ. ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ, ಮತದ ಮೂಲಕ ಉತ್ತರ ನೀಡುತ್ತಾರೆ" ಎಂದು ಹೇಳಿದೆ.
ಇದನ್ನೂ ಓದಿ: ಸೆಂಟ್ ಉದ್ಯಮಿಯ ತೆರಿಗೆ ವಂಚನೆ ಪ್ರಕರಣ: ಕನೌಜ್ನಲ್ಲಿ ವಶಪಡಿಸಿಕೊಂಡ ಹಣವೆಷ್ಟು ಗೊತ್ತಾ?