ಹೈದರಾಬಾದ್: ಏಪ್ರಿಲ್ 2, 2011 ಭಾರತೀಯ ಕ್ರಿಕೆಟ್ ರಂಗ ಮರೆಯಲಾಗದ ದಿನ. ಅಂದು ಶ್ರೀಲಂಕಾ ವಿರುದ್ಧ ಸೆಣಸಾಡಿದ ಭಾರತ ಎರಡು ದಶಕಗಳ ಬಳಿಕ ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು. ಆ ಘಳಿಗೆಗೆ ಇವತ್ತಿಗೆ 10 ವರ್ಷ ತುಂಬಿದ ಸಂಭ್ರಮ.
ಟೀಂ ಇಂಡಿಯಾ ನಾಯಕನಾಗಿ ಮುಂದಾಳತ್ವ ವಹಿಸಿದ್ದ ಮಹೇಂದ್ರ ಸಿಂಗ್ ಧೋನಿ, 28 ವರ್ಷಗಳ ಬಳಿಕ ಭಾರತಕ್ಕೆ ವಿಶ್ವಕಪ್ ತಂದುಕೊಟ್ಟರು. ಈ ಪಂದ್ಯದಲ್ಲಿ ಭಾರತ 87 ರನ್‌ಗಳಿಂದ ಗೆದ್ದುಕೊಂಡಿತ್ತು.
2011 ರಲ್ಲಿ ನಡೆದ ಈ ಪಂದ್ಯದುದ್ದಕ್ಕೂ ಟೀಂ ಇಂಡಿಯಾ ಉತ್ತಮ ಪ್ರದರ್ಶನವನ್ನು ನೀಡಿತ್ತು. ಈ ಮೂಲಕ ವಿಶ್ವಕಪ್ ಭಾರತದ ಪಾಲಾಗುವ ಭರವಸೆ ಮೂಡಿಸಿತ್ತು. ಭರವಸೆಯಂತೆ ಏಪ್ರಿಲ್ 2ರಂದು ಭಾರತದ ಮುಡಿಗೆ ವಿಶ್ವಕಪ್ ವಿಜಯಮಾಲೆ ಸೇರಿತ್ತು. ಸದ್ಯ ಈ ದಿನವನ್ನು ಕ್ರಿಕೆಟ್ ಅಭಿಮಾನಿಗಳು ಮತ್ತು ದಿಗ್ಗಜರು ಸ್ಮರಿಸಿದ್ದಾರೆ.
2011ರ ವಿಶ್ವಕಪ್ ವಿಜೇತ ತಂಡ:
ಮಹೇಂದ್ರಸಿಂಗ್ ಧೋನಿ (ನಾಯಕ-ವಿಕೆಟ್‌ಕೀಪರ್), ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ (ಉಪನಾಯಕ), ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಸುರೇಶ್ ರೈನಾ, ಹರ್ಭಜನ್ ಸಿಂಗ್, ಜಹೀರ್ ಖಾನ್, ಎಸ್. ಶ್ರೀಶಾಂತ್, ಮುನಾಫ್ ಪಟೇಲ್, ಆಶೀಶ್ ನೆಹ್ರಾ, ಪಿಯೂಷ್ ಚಾವ್ಲಾ, ಆರ್. ಅಶ್ವಿನ್, ಯೂಸುಫ್ ಪಠಾಣ್, ಪ್ರವೀಣಕುಮಾರ್, ಗ್ಯಾರಿ ಕರ್ಸ್ಟನ್ (ಮುಖ್ಯ ಕೋಚ್).