ETV Bharat / bharat

ಭಾರತದ ಶೇ 40ರಷ್ಟು ಸಂಪತ್ತಿನ ಭಾಗ ಶೇ 1ರಷ್ಟು ಶ್ರೀಮಂತರ ಬಳಿ ಇದೆ: ವರದಿ

ಭಾರತದ ತೆರಿಗೆ ಪದ್ಧತಿಯಲ್ಲಿನ ಅಸಮಾನತೆ ಕುರಿತು ಆಕ್ಸಫಾಮ್​ ವರದಿ ಪ್ರಕಟಿಸಿದೆ.

Tax system
ತೆರಿಗೆ ಪದ್ದತಿ
author img

By

Published : Jan 16, 2023, 12:45 PM IST

Updated : Jan 16, 2023, 1:14 PM IST

ನವದೆಹಲಿ: ದೇಶದ ಶೇ 40ಕ್ಕಿಂತ ಹೆಚ್ಚಿನ ಸಂಪತ್ತಿನ ಭಾಗವನ್ನು ಶೇ 1ರಷ್ಟು ಶ್ರೀಮಂತರು ಹೊಂದಿದ್ದಾರೆ. ಭಾರತದ ಶೇ 3ರಷ್ಟು ಸಂಪತ್ತನ್ನು ಭಾರತದ ಒಟ್ಟಾರೆ ಜನಸಂಖ್ಯೆಯ ಜನ ಹೊಂದಿದ್ದಾರೆ ಎಂದು ಹೊಸ ಅಧ್ಯಯನ ತಿಳಿಸಿದೆ. ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ಅಸಮಾನತೆಯ ವರದಿ ಬಿಡುಗಡೆ ಮಾಡಲಾಗಿದೆ. ಆಕ್ಸ್​ಫರ್ಡ್​ ಇಂಟರ್​ನ್ಯಾಷನಲ್​ ಹೇಳುವಂತೆ, ಭಾರತದ ಹತ್ತು ಶ್ರೀಮಂತರಿಗೆ ಶೇ5 ರಷ್ಟು ತೆರಿಗೆ ವಿಧಿಸುವ ಹಣದಿಂದ ಅರ್ಧದಲ್ಲೇ ಶಾಲೆ ತೊರೆದ ಮಕ್ಕಳನ್ನು ಮತ್ತೆ ಮರಳಿ ತರಲು ಸಂಪೂರ್ಣ ಹಣವನ್ನು ಪಡೆಯಬಹುದು ಎಂದು ತಿಳಿಸಿದೆ. ಈ ವರದಿಯ ಸಾರಾಂಶ ಇಲ್ಲಿದೆ.

2017- 2021ರಿಂದ ಬಿಲಿಯನೇರ್​ಗಳಿಗೆ ವಿಧಿಸುವ ಅವಾಸ್ತವಿಕ ತೆರಿಗೆಯಿಂದ ಗೌತಮ್​ ಅದಾನಿ ಸಂಪತ್ತು 1.79 ಲಕ್ಷ ಕೋಟಿ ರೂ ಏರಿಕೆ ಕಂಡಿದ್ದು, ಇದು ಭಾರತದ ಪ್ರಾಥಮಿಕ ಶಾಲೆಯ ಐದು ಮಿಲಿಯನ್​ ಶಿಕ್ಷಕರ ವೇತನಕ್ಕೆ ಸಮವಾಗಿದೆ. ಶ್ರೀಮಂತರ ಉಳಿಯುವಿಕೆಯ ವರದಿ ಅನುಸಾರ ಭಾರತದ ಬಿಲಿಯನೇರ್​ಗಳ ಒಟ್ಟಾರೆ ಸಂಪತ್ತಿನ ಮೇಲೆ ಶೇ 2 ರಷ್ಟು ತೆರಿಗೆ ವಿಧಿಸಿದರೂ ಅದು ಮೂರು ವರ್ಷಕ್ಕೆ ದೇಶಕ್ಕೆ ಬೇಕಾಗುವ ಅಪೌಷ್ಟಿಕತೆ ವೆಚ್ಚವಾದ 40,423 ಕೋಟಿ ರೂ ನೀಡಬಲ್ಲದು. ದೇಶದ 10 ಶ್ರೀಮಂತರಿಗೆ ಶೇ 5ರಷ್ಟು ತೆರಿಗೆ ವಿಧಿಸಿದರೆ ಅದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (86,200 ಕೋಟಿ) ಹಾಗೂ ಆಯುಷ್​ ಸಚಿವಾಲಯದ (3,050 ಕೋಟಿ) ಅಂದಾಜಿಗಿಂತ 1.5ಕ್ಕಿಂತ ಹೆಚ್ಚಿನ ಹಣವಾಗಿರಲಿದೆ. ಲಿಂಗ ಅಸಮಾನತೆ ವರದಿ ಅನುಸಾರ ಪುರುಷರು ಒಂದು ರೂಪಾಯಿ ಸಂಪಾದನೆ ಮಾಡಿದರೆ, ಮಹಿಳೆಯರು 63 ಪೈಸೆ ಸಂಪಾದಿಸುತ್ತದೆ, ಪರಿಶಿಷ್ಟ ಜಾತಿ ಮತ್ತು ಗ್ರಾಮೀಣ ಕೆಲಸಗಾರರ ಸಂಪಾದನೆ ಇನ್ನೂ ಸಾಕಷ್ಟು ವ್ಯತ್ಯಾಸವನ್ನು ಹೊಂದಿದೆ.

ಭಾರತದ ಟಾಪ್​ 100 ಬಿಲಿಯನೇರ್​​ಗಳಿಗೆ 2.5 ರಷ್ಟು ಅಥವಾ ಭಾರತದ 10 ಬಿಲಿಯನೇರ್​ಗಳಿಗೆ ಶೇ 5ರಷ್ಟು ತೆರಿಗೆ ವಿಧಿಸಿದರೆ, ಇದರಿಂದ ಬಂದ ಹಣದಿಂದ ಶಾಲೆಯನ್ನು ಅರ್ಧಕ್ಕೆ ತೊರೆದ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರಬಹುದಾಗಿದೆ. ಭಾರತದಲ್ಲಿನ ಅಸಮಾನತೆಯ ಪರಿಣಾಮವನ್ನು ಅನ್ವೇಷಿಸಲು ಗುಣಾತ್ಮಕ ಮತ್ತು ಪರಿಣಾಮಾತ್ಮಕ ಮಾಹಿತಿಯ ಮಿಶ್ರಣವಾಗಿದೆ. ದೇಶದ ಸಂಪತ್ತಿನ ಅಸಮಾನತೆ ಮತ್ತು ಬಿಲಿಯನೇರ್ ಸಂಪತ್ತನ್ನು ನೋಡಲು ಫೋರ್ಬ್ಸ್ ಮತ್ತು ಕ್ರೆಡಿಟ್ ಸೂಸ್ಸೆಯಂತಹ ದ್ವಿತೀಯಕ ಮೂಲಗಳನ್ನು ಬಳಸಲಾಗಿದೆ. ಎನ್​ಎಸ್​ಎಸ್​​, ಯೂನಿಯನ್ ಬಜೆಟ್ ದಾಖಲೆಗಳು, ಸಂಸದೀಯ ಪ್ರಶ್ನೆಗಳು ಇತ್ಯಾದಿ ಸರ್ಕಾರಿ ಮೂಲಗಳನ್ನು ವರದಿಯನ್ನು ದೃಢೀಕರಿಸಲು ಬಳಸಲಾಗಿದೆ.

2022ರಲ್ಲಿ ನವೆಂಬರ್​ನಲ್ಲಿ ಸಾಂಕ್ರಾಮಿಕತೆ ಶುರುವಾದಾಗಿನಿಂದ ಭಾರತದ ಬಿಲಿಯನಿಯರ್​ಗಳ ಸಂಪತ್ತು 121 ರಷ್ಟು ಏರಿಕೆ ಕಂಡಿದೆ. ದಿನಕ್ಕೆ ಅವರ ಸಂಪತ್ತಿನ ಏರಿಕೆ 3. 608 ಕೋಟಿ ಹೆಚ್ಚಾಗಿದೆ ಎಂದು ಆಕ್ಸಫಾಮ್​ ತಿಳಿಸಿದೆ. ಮತ್ತೊಂದು ಕಡೆ 2021-22ರಲ್ಲಿ ಶೇ 64 ಒಟ್ಟು 14.83 ಲಕ್ಷ ಕೋಟಿ ರೂಪಾಯಿಗಳ ಸರಕು ಮತ್ತು ಸೇವಾ ತೆರಿಗೆಯಲ್ಲಿ (ಜಿಎಸ್‌ಟಿ) ಸರಿಸುಮಾರು ಶೇಕಡಾ 64 ರಷ್ಟು ತೆರಿಗೆಯಲ್ಲಿ ಶೇ 50ರಷ್ಟು ಪ್ರತಿಶತ ಕೆಳಭಾಗದ ಜನಸಂಖ್ಯೆಯಿಂದ ಬಂದಿದೆ. ಜಿಎಸ್‌ಟಿಯ ಶೇಕಡಾ 3 ರಷ್ಟು ಮಾತ್ರ ಬಿಲಿಯನಿಯರ್​​ಗಳಿಂದ ಬಂದಿದೆ. ಭಾರತದಲ್ಲಿ 2020ರಲ್ಲಿ ಬಿಲಿಯೇನರ್​ಗಳ ಸಂಖ್ಯೆ 102ಕ್ಕೆ ಏರಿಕೆ ಕಂಡಿದ್ದು 2022ರಲ್ಲಿ 166ಕ್ಕೆ ಏರಿದೆ. ಶ್ರೀಮಂತರ ಉಳಿಯುವಿಕೆಗಾಗಿ ದೇಶದ ಅಳಿವಿನಂಚಿನಲ್ಲಿರುವ ದಲಿತರು, ಆದಿವಾಸಿಗಳು, ಮುಸ್ಲಿಮರು, ಮಹಿಳೆಯರು ಮತ್ತು ಮಾಹಿತಿ ವಲಯ ಕೆಲಸಗಾರರ ಬಳಲುತ್ತಿದ್ದಾರೆ.

ಅಸಮಾನ ರೀತಿಯ ಹೆಚ್ಚಿನ ತೆರಿಗೆಗಳನ್ನು ಬಡವರಿಗೆ ವಿಧಿಸಲಾಗಿದೆ. ಶ್ರೀಮಂತರಿಗೆ ಹೋಲಿಸಿದರೆ ಅವರು ಅಗತ್ಯ ವಸ್ತುಗಳು, ಸೇವೆಗಳಿಗೆ ಹೆಚ್ಚಿನ ಹಣ ವ್ಯಯ ಮಾಡುತ್ತಾರೆ. ಶ್ರೀಮಂತರು ಕೂಡ ನ್ಯಾಯಯುತ ತೆರಿಗೆ ಪಾವತಿಸುವ ಸಮಯ ಬಂದಿದೆ ಎಂದು ಅವರು ತಿಳಿಸುತ್ತಾರೆ. ಇದೇ ವೇಳೆ ಬೆಹರ್​, ಕೇಂದ್ರ ಹಣಕಾಸು ಸಂಪತ್ತು ತೆರಿಗೆ ಮತ್ತು ಪಿತ್ರಾರ್ಜಿತ ತೆರಿಗೆಯಂತಹ ಪ್ರಗತಿಪರ ತೆರಿಗೆ ಕ್ರಮಗಳನ್ನು ಜಾರಿಗೊಳಿಸಬೇಕಿದ್ದು ಅಸಮಾನತೆಯ ನಿವಾರಣೆಗೂ ಕಾರಣವಾಗುತ್ತದೆ ಎಂದು ಒತ್ತಾಯಿಸಿದ್ದಾರೆ. ಭಾರತದಲ್ಲಿ ಶೇ 80ರಷ್ಟು ಮಂದಿ ಶ್ರೀಮಂತರು, ಕಾರ್ಪೊರೇಟ್ ತೆರಿಗೆ ವಿಧಿಸುವುದನ್ನು ಬೆಂಬಲಿಸುತ್ತಾರೆ ಎಂದು ಆಕ್ಸ್​ಫಾಮ್​ ತಿಳಿಸಿದೆ.

ಇದನ್ನೂ ಓದಿ: ಗಡಿ ತಂಟೆ: ಚೀನಾ ದೇಶಕ್ಕೆ ನಮ್ಮ ಪ್ರತಿಕ್ರಿಯೆ ಪ್ರಬಲ, ದೃಢವಾಗಿದೆ: ಜೈಶಂಕರ್‌

Last Updated : Jan 16, 2023, 1:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.