ETV Bharat / bharat

ಚಿನ್ ಕುಕಿ ನಾರ್ಕೋ ವಿರುದ್ಧ ಯುದ್ಧ ಘೋಷಿಸಿದ COCOMI - Chin Kuki Narco

ಮಣಿಪುರ ಸಮಗ್ರತೆ ಸಮನ್ವಯ ಸಮಿತಿ ಚಿನ್ ಕುಕಿ ನಾರ್ಕೋ ಯುದ್ಧ ಘೋಷಿಸಿದೆ.

People's Convention announces National war against Chin Kuki Narco
ಚಿನ್ ಕುಕಿ ನಾರ್ಕೋ ವಿರುದ್ಧ ಯುದ್ಧ ಘೋಷಿಸಿದ COCOMI
author img

By

Published : Jun 8, 2023, 10:31 AM IST

ತೇಜ್‌ಪುರ ( ಅಸ್ಸೋಂ) : ಮಣಿಪುರದ ಇಂಫಾಲ್ ಪೂರ್ವ ಜಿಲ್ಲೆಯ ಇಬೊಯೈಮಾ ಶುಮಾಂಗ್ ಲೀಲಾ ಸಂಗ್ಲೆನ್‌ (Iboyaima Shumang Leela Sanglen) ನಲ್ಲಿ ನಡೆದ ಜನರ ಸಮಾವೇಶದಲ್ಲಿ ಮಣಿಪುರ ಸಮಗ್ರತೆ ಸಮನ್ವಯ ಸಮಿತಿ (Coordinating Committee on Manipur Integrity, COCOMI) ಬುಧವಾರ ಚಿನ್ ಕುಕಿ ನಾರ್ಕೋ ( Chin - Kuki Narco ) ವಿರುದ್ಧ ಮಣಿಪುರಿ ರಾಷ್ಟ್ರೀಯ ಯುದ್ಧವನ್ನು ಘೋಷಿಸಿತು.

ಚಿನ್ ಕುಕಿ ನಾರ್ಕೋ ಮತ್ತು ಮೇಟಿ ಜನರ ನಡುವೆ ನಡೆಯುತ್ತಿರುವ ಬಿಕ್ಕಟ್ಟಿಗೆ ಭಾರತ ಸರ್ಕಾರವೇ ಹೊಣೆಯಾಗಬೇಕು ಎಂದು ಪೀಪಲ್ಸ್ ಕನ್ವೆನ್ಷನ್ (ಜನರ ಸಭೆ) ಹೇಳಿದೆ. ನಾರ್ಕೋ ವಿರುದ್ಧ ಸಮರದಲ್ಲಿ ಜಂಟಿಯಾಗಿ ಹೋರಾಡುವಂತೆ ರಾಜ್ಯದ ಎಲ್ಲ ಜನಾಂಗೀಯ ಸಮುದಾಯಗಳಿಗೆ ಸಭೆ ಮನವಿ ಮಾಡಿದೆ. ನಾರ್ಕೋ ಭಯೋತ್ಪಾದಕರ ವಿರುದ್ಧ ರಾಷ್ಟ್ರೀಯ ಯುದ್ಧದ ಘೋಷಣೆಯ ನಂತರ ರಾಜ್ಯದಲ್ಲಿ ಸಾರ್ವಜನಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಇದರಲ್ಲಿ ಧಾರ್ಮಿಕ ಆಚರಣೆಗಳನ್ನು ಹೊರತುಪಡಿಸಿ ಎಲ್ಲ ಹಬ್ಬಗಳು ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ನಿಷೇಧಿಸಲಾಗಿದೆ ಎಂದು ಪೀಪಲ್ಸ್ ಕನ್ವೆನ್ಷನ್ ದೃಢಪಡಿಸಿದೆ.

ನಾರ್ಕೋ ಭಯೋತ್ಪಾದಕರ ವಿರುದ್ಧದ ಯುದ್ಧ ಮತ್ತು ಆಕ್ರಮಣವು ಕೊನೆಗೊಂಡಿಲ್ಲದ ಕಾರಣ ಶಸ್ತ್ರಾಸ್ತ್ರಗಳನ್ನು ಸಲ್ಲಿಸದಿರಲು ಪೀಪಲ್ಸ್ ಕನ್ವೆನ್ಷನ್ ನಿರ್ಧರಿಸಿದೆ. ಮಣಿಪುರ ಕಣಿವೆಯಲ್ಲಿ ಯಾವುದೇ ಮಿಲಿಟರಿ ಕೂಂಬಿಂಗ್ ಕಾರ್ಯಾಚರಣೆ ಪ್ರಾರಂಭಿಸಬಾರದು ಎಂದು ಹೇಳಿದೆ.

ಈ ಸಭೆಯಲ್ಲಿ ಸಂಘರ್ಷದ ಸಮಯದಲ್ಲಿ ಮಡಿದ ಹುತಾತ್ಮರಿಗೆ ಸ್ಮಾರಕ ಉದ್ಯಾನವನ ಸ್ಥಾಪಿಸಲು ಪೀಪಲ್ಸ್ ಕನ್ವೆನ್ಷನ್ ನಿರ್ಧರಿಸಿತು. ರಾಜ್ಯದ ಪ್ರತಿಯೊಂದು ಗ್ರಾಮವನ್ನು ರಕ್ಷಿಸಲು ಸರ್ಕಾರವು ಗ್ರಾಮ ರಕ್ಷಣಾ ಪಡೆಗಳನ್ನು ಸ್ಥಾಪಿಸಬೇಕು ಎಂದು ಹೇಳಿದೆ. ಕುಕಿ ಭಯೋತ್ಪಾದಕರ ದಾಳಿಯಿಂದ ಗ್ರಾಮಗಳನ್ನು ರಕ್ಷಿಸಲ ಶಸ್ತ್ರಾಸ್ತ್ರ ಪರವಾನಗಿಗಳನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಸಭೆ ಅಂತಿಮವಾಗಿ ಸಂಬಂಧಿಸಿದ ಪ್ರಾಧಿಕಾರಕ್ಕೆ ಮನವಿ ಮಾಡಿತು.

ಇದನ್ನೂ ಓದಿ: 'ಕಾಂತಾರ' ಕಾಡುಬೆಟ್ಟು ಶಿವನ ಚೆಲುವೆ ಲೀಲಾಗೆ ಹುಟ್ಟುಹಬ್ಬದ ಸಂಭ್ರಮ..ಯುವ 'ಸಿರಿ' ಪೋಸ್ಟರ್ ರಿಲೀಸ್​

ಮಣಿಪುರದಲ್ಲಿ ಹಿಂಸಾಚಾರ ಮುಂದಿವರಿದಿದೆ. ಈ ರಾಜ್ಯಲ್ಲಿರುವ ಒಟ್ಟು ಜನಸಂಖ್ಯೆಯ ಶೇ.53ರಷ್ಟು ಮೇಟಿ ಸಮುದಾಯದವರಿದ್ದಾರೆ. ಪ್ರಾಬಲ್ಯ ಹೊಂದಿರುವ ಈ ಸಮುದಾಉವು ಪರಿಶಿಷ್ಟ ಪಂಗಡ ಸ್ಥಾನಮಾನಕ್ಕೆ ಬೇಡಿಕೆ ಇಟ್ಟಿದೆ. ಇದು ನಾಗಾ ಮತ್ತು ಕುಕಿ ಬುಡಕಟ್ಟು ಜನಾಂಗದವರ ಅಸಮಧಾನಕ್ಕೆ ಕಾರಣವಾಗಿದೆ. ಶೇ.40ರಷ್ಟು ನಾಗಾ ಮತ್ತು ಕುಕಿ ಬುಡಕಟ್ಟು ಸಮುದಾಯದವರಿದ್ದಾರೆ.

ಇದನ್ನೂ ಓದಿ: ಸೀರೆಯಲ್ಲಿ ಸ್ಯಾಂಡಲ್​ವುಡ್​ ಸುಂದರಿಯರ ಸೌಂದರ್ಯ: ಹಾಲ್ಗೆನ್ನೆ ಚೆಲುವೆಯರನ್ನು ನೋಡಿ

ಉನ್ನತ ಮಟ್ಟದ ತನಿಖೆ: ಮಣಿಪುರದಲ್ಲಿ ನಡೆದ ಹಿಂಸಾಚಾರ ಬಗ್ಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ. ಗುವಾಹಟಿ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಅಜಯ್ ಲಂಬಾ ನೇತೃತ್ವದ ಮೂವರು ಸದಸ್ಯರ ತನಿಖಾ ಆಯೋಗವನ್ನು ಈ ಜನಾಂಗೀಯ ಹಿಂಸಾಚಾರ ಪ್ರಕರಣ ಸಂಬಂಧ ತನಿಖೆಗಾಗಿ ನೇಮಕ ಮಾಡಲಾಗಿದೆ. ಜನರ ರಕ್ಷಣೆಗಾಗಿಯೂ ಕ್ರಮ ಕೈಗೊಳ್ಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.