ETV Bharat / bharat

'ದಿ ಕಾಶ್ಮೀರ್ ಫೈಲ್ಸ್'​ ಸಿನಿಮಾ ಕೇವಲ ಕಾಲ್ಪನಿಕ ಕಥೆ ಅಷ್ಟೇ.. ಕಾಶ್ಮೀರಿ ನಾಯಕ ಸಜಾದ್​ ಲೋನ್​

ದಿ ಕಾಶ್ಮೀರ್ ಫೈಲ್ಸ್​ ಸಿನಿಮಾ ತಂಡದ ಕೆಲವರು ರಾಜ್ಯಸಭಾ ಸದಸ್ಯರಾಗಲು ಈ ರೀತಿಯ ಕಾಲ್ಪನಿಕ ಕಥೆಯನ್ನಾಧರಿಸಿದ ಸಿನಿಮಾವನ್ನು ಮಾಡಿ ಕೆಲವರನ್ನು ಮೆಚ್ಚಿಸಿದ್ದಾರೆ. ಹೀಗಾಗಿ, ವಿವಾದಿತ ವಿಷಯದ ಮೇಲೆ ಸಿನಿಮಾ ರೂಪಿಸಲಾಗಿದೆ. ಸಿನಿಮಾದ ಕಥೆ ಕೇವಲ ಕಲ್ಪನೆಯಾಧಾರಿತ ಎಂದು ಟೀಕಿಸಿದ್ದಾರೆ..

sajad-lone
ಸಜಾದ್​ ಲೋನ್​
author img

By

Published : Mar 23, 2022, 4:48 PM IST

ಶ್ರೀನಗರ : ಕಾಶ್ಮೀರ ಪಂಡಿತರ ಹತ್ಯಾಕಾಂಡದ ಬಗ್ಗೆ ಚಿತ್ರಿಸಲಾದ 'ದಿ ಕಾಶ್ಮೀರ್​ ಫೈಲ್ಸ್'​ ಸಿನಿಮಾ ಕಾಲ್ಪನಿಕ ಕಥೆಯಾಗಿದೆ. ಇದು ದೇಶದಲ್ಲಿ ಜನಾಂಗೀಯ ದ್ವೇಷ ಉಂಟು ಮಾಡುತ್ತದೆ ಎಂದು ಪೀಪಲ್ಸ್​ ಕಾನ್ಫರೆನ್ಸ್​ ಪಕ್ಷದ ಅಧ್ಯಕ್ಷ ಸಜಾದ್​ ಲೋನ್​ ಅಭಿಪ್ರಾಯಪಟ್ಟಿದ್ದಾರೆ. ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ದಿ ಕಾಶ್ಮೀರ್ ಫೈಲ್ಸ್​ ಸಿನಿಮಾ ತಂಡದ ಕೆಲವರು ರಾಜ್ಯಸಭಾ ಸದಸ್ಯರಾಗಲು ಈ ರೀತಿಯ ಕಾಲ್ಪನಿಕ ಕಥೆಯನ್ನಾಧರಿಸಿದ ಸಿನಿಮಾವನ್ನು ಮಾಡಿ ಕೆಲವರನ್ನು ಮೆಚ್ಚಿಸಿದ್ದಾರೆ. ಹೀಗಾಗಿ, ವಿವಾದಿತ ವಿಷಯದ ಮೇಲೆ ಸಿನಿಮಾ ರೂಪಿಸಲಾಗಿದೆ. ಸಿನಿಮಾದ ಕಥೆ ಕೇವಲ ಕಲ್ಪನೆಯಾಧಾರಿತ ಎಂದು ಟೀಕಿಸಿದ್ದಾರೆ.

ಸಿನಿಮಾದ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರಿಗೆ ರಾಜ್ಯಸಭಾ ಸ್ಥಾನವನ್ನು ನೀಡಲು ನಾನು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನೇನು ಅನಾಹುತ ಮಾಡಲಿದ್ದಾರೋ ಎಂಬ ಭೀತಿ ಇದೆ. ಇದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಆಗಿದೆ. ಹೀಗಾಗಿ, ನಟ ಅನುಪಮ್​ ಖೇರ್​ ಮತ್ತು ಅಗ್ನಿಹೋತ್ರಿ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿಸಲು ಕೇಂದ್ರಕ್ಕೆ ಒತ್ತಾಯಿಸುವೆ ಎಂದು ವ್ಯಂಗ್ಯವಾಡಿದ್ದಾರೆ.

ಓದಿ: ಬೆಳಗಾವಿ: 30ಕ್ಕೂ ಅಧಿಕ ಸ್ವಾಮೀಜಿಗಳಿಂದ 'ದಿ ಕಾಶ್ಮೀರ್​ ಫೈಲ್ಸ್' ಚಿತ್ರ ವೀಕ್ಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.