ನೋಯ್ಡಾ: ನೋಯ್ಡಾದ ಸೂಪರ್ ಟೆಕ್ ಕಂಪನಿಯು 70 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಅವಳಿ ಕಟ್ಟಡಗಳ ಧ್ವಂಸಗೊಳಿಸಲು ಕ್ಷಣಗಣನೆ ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಮಧ್ಯರಾತ್ರಿ ಇಲ್ಲಿನ ಕೆಲ ಸ್ಥಳೀಯರು ಸ್ಥಳಕ್ಕೆ ಜಮಾಯಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡು ವಿಡಿಯೋ ಮಾಡಿಕೊಂಡರು.
ಸುಮಾರು 100 ಮೀಟರ್ ಎತ್ತರದ ಟವರ್‌ಗಳನ್ನು ಎಮರಾಲ್ಡ್ ಕೋರ್ಟ್ ಸೊಸೈಟಿ ಆವರಣದಲ್ಲಿ ಕಟ್ಟಡ ನಿಯಮಾವಳಿಗಳನ್ನು ಉಲ್ಲಂಘಿಸಿ ನಿರ್ಮಿಸಿರುವುದನ್ನು ಕಂಡು ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಇಂದು ಮಧ್ಯಾಹ್ನ 2:30ಕ್ಕೆ ಕೇವಲ 12 ಸೆಕೆಂಡ್ಗಳಲ್ಲಿ ಸುರಕ್ಷಿತವಾಗಿ ನೆಲಸಮ ಮಾಡಲು ನಿರ್ಧರಿಸಲಾಗಿದೆ. ಕಟ್ಟಡಗಳ ನಿರ್ಮಾಣವು ಕನಿಷ್ಟ ಅಂತರದ ಅಗತ್ಯವನ್ನು ಉಲ್ಲಂಘಿಸಿರುವುದರಿಂದ ಕೆಡವಲು ಆಗಸ್ಟ್ 2021 ರಲ್ಲಿ ಕೋರ್ಟ್ ಆದೇಶಿಸಿತ್ತು. ಕೋರ್ಟ್ ಪ್ರಕಾರ, ಯುಪಿ ಅಪಾರ್ಟ್‌ಮೆಂಟ್ ಕಾಯ್ದೆಯಡಿ ಅಗತ್ಯವಿರುವಂತೆ ವೈಯಕ್ತಿಕ ಫ್ಲಾಟ್ ಮಾಲೀಕರ ಒಪ್ಪಿಗೆ ತೆಗೆದುಕೊಳ್ಳದೆ ಕಟ್ಟಡಗಳನ್ನು ಅಕ್ರಮವಾಗಿ ನಿರ್ಮಿಸಲಾಗಿದೆ.
-
Noida’s Supertech Twin Tower became a selfie spot before being demolished.#supertechtwintower #twintower pic.twitter.com/rstCvbC3ed
— Pooja Dubey (@poojadubey888) August 27, 2022 " class="align-text-top noRightClick twitterSection" data="
">Noida’s Supertech Twin Tower became a selfie spot before being demolished.#supertechtwintower #twintower pic.twitter.com/rstCvbC3ed
— Pooja Dubey (@poojadubey888) August 27, 2022Noida’s Supertech Twin Tower became a selfie spot before being demolished.#supertechtwintower #twintower pic.twitter.com/rstCvbC3ed
— Pooja Dubey (@poojadubey888) August 27, 2022
ಇದನ್ನೂ ಓದಿ: ಇಂದು ಧರೆಗುರುಳಲಿವೆ 70 ಕೋಟಿ ವೆಚ್ಚದ ನೋಯ್ಡಾ ಬೃಹತ್ ಕಟ್ಟಡಗಳು.. 3,700 ಕೆಜಿ ಸ್ಫೋಟಕ ಬಳಕೆ
ಇಂದು ಕಟ್ಟಡ ನೆಲಸಮವಾಗುತ್ತಿರುವ ಹಿನ್ನೆಲೆಯಲ್ಲಿ ನೋಯ್ಡಾದ ಮಂದಿ ಅವಳಿ ಕಟ್ಟಡಗಳ ಪಕ್ಕಕ್ಕೆ ನಿಂತು ಸೆಲ್ಫಿ ತೆಗೆದುಕೊಂಡರು. ಶನಿವಾರ ಸಂಜೆಯಿಂದಲೇ ಸೆಕ್ಟರ್ 93ಎ ನಲ್ಲಿ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ನಿಯೋಜಿಸಿದ್ದರೂ ಸಹ ಮಕ್ಕಳು ಸೇರಿದಂತೆ ಯುವಕರು ಅತ್ಯಂತ ಉತ್ಸಾಹದಿಂದ ಫೋಟೋ ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮನ್ಯವಾಗಿತ್ತು.
ಮಾಧ್ಯಮಗಳೊಂದಿಗೆ ಮಾತನಾಡಿದ ಸ್ಥಳೀಯರಾದ ಶರ್ಮಾ, "ಕಳೆದ ಕೆಲವು ದಿನಗಳಿಂದ ಮಾಧ್ಯಮಗಳಲ್ಲಿ ಈ ಕುರಿತಾದ ಸುದ್ದಿ ನೋಡುತ್ತಿದ್ದೆ. ಪೊಲೀಸರು ಕಟ್ಟಡ ಕೆಡವುವಾಗ ಜನರು ಹತ್ತಿರ ಬಂದು ನೋಡಲು ಅನುಮತಿ ನೀಡುವುದಿಲ್ಲ. ಹಾಗಾಗಿ, ಕಟ್ಟಡ ಕೆಡವುವ ಮೊದಲು ಫೋಟೋ ತೆಗೆದುಕೊಳ್ಳೋಣವೆಂದು ಆಗಮಿಸಿದ್ದೇವೆ" ಎಂದು ಹೇಳಿದರು. ನೋಯ್ಡಾದ ಹೊರಗಿನಿಂದಲೂ ಪ್ರವಾಸಿಗರು ಆಗಮಿಸಿ ಬೃಹತ್ ಗಾತ್ರದ ಕಟ್ಟಡಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.