ETV Bharat / bharat

ಛಾತ್ ಪೂಜೆಯ ಕೊನೆ ದಿನ ಸೂರ್ಯ ದೇವನಿಗೆ ಅರ್ಘ್ಯ ಅರ್ಪಿಸಿ ನಮಿಸಿದ ಭಕ್ತರು

ಛಾತ್ ಪೂಜೆಯ ಕೊನೆಯ ದಿನವಾದ ಇಂದು ಸೂರ್ಯ ದೇವನ ದರ್ಶನ ಪಡೆದು ಭಕ್ತರು ಪುನೀತರಾಗಿದ್ದಾರೆ. ಸೂರ್ಯ ದೇವನಿಗೆ ಅರ್ಘ್ಯ ಅರ್ಪಿಸಿ ಸಾವಿರಾರು ಭಕ್ತರು ಪೂಜೆ ಸಲ್ಲಿಸಿದ್ದಾರೆ.

author img

By

Published : Nov 11, 2021, 7:23 AM IST

people-offer-arag-to-the-sun-god-at-patna
ಛಾತ್ ಪೂಜೆಯ ಕೊನೆಯ ದಿನ ಸೂರ್ಯ ದೇವನಿಗೆ ಅರ್ಘ್ಯ ಅರ್ಪಿಸಿ ನಮಿಸಿದ ಭಕ್ತರು

ಪಾಟ್ನಾ (ಬಿಹಾರ​): ಛಾತ್​​​​​ ಪೂಜಾ ಹಬ್ಬದ 4ನೇ ದಿನವಾದ ಇಂದು ಉದಯಿಸುವ ಸೂರ್ಯ ದೇವನಿಗೆ ಅರ್ಘ್ಯ ಸಮರ್ಪಿಸಲಾಗಿದೆ. ನಗರದ ಪಾಟ್ನಾ ಕಾಲೇಜು ಘಾಟ್‌ನಲ್ಲಿ ಛಾತ್ ಪೂಜೆ ಹಬ್ಬದ ಕೊನೆಯ ದಿನದಂದು ಜನರು ಸೂರ್ಯ ದೇವರಿಗೆ ಅರ್ಘ್ಯ ಅರ್ಪಿಸಿ ನಮಿಸಿದ್ದಾರೆ.

ಸೂರ್ಯ ದೇವನಿಗೆ ಅರ್ಘ್ಯ ಅರ್ಪಿಸಿ ನಮಿಸಿದ ಭಕ್ತರು

ಘಾಟ್ ಬಳಿ ಸೂರ್ಯೋದಯಕ್ಕೂ ಮುನ್ನಾ ಜನಸಂದಣಿ ಏರ್ಪಟ್ಟಿತ್ತು. ಭಕ್ತರು ಬಿದಿರಿನಿಂದ ಮಾಡಿರುವ ಬುಟ್ಟಿಗಳಲ್ಲಿ ಫಲ ತುಂಬಿಕೊಂಡು ತಾತ್ಕಾಲಿಕ ಮಂಟಪದ ಕೆಳಗೆ ಇಟ್ಟು ಪೂಜಿಸುತ್ತಾರೆ. ಈ ಮಂಟಪಗಳು ಕಬ್ಬಿನಿಂದ ಮಾಡಲಾಗಿರುತ್ತದೆ. ಜೊತೆಗೆ ಈ ಹಬ್ಬವು ಸಮೃದ್ಧಿಯ ಸಂಕೇತವಾಗಿದೆ. ಮಂಟಪದ ನಾಲ್ಕು ಮೂಲೆಯಲ್ಲೂ ಆನೆಯ ಆಕೃತಿ ರಚಿಸಿಡಲಾಗುತ್ತದೆ. ಮಣ್ಣಿನಿಂದ ಮಾಡಲಾದ ದೀಪದಿಂದ ಅಲಂಕರಿಸಲಾಗುತ್ತದೆ.

ಇಡೀ ದಿನ ಕುಟುಂಬದ ಸದಸ್ಯರು ಉಪವಾಸ ಇರುವ ಸಂಪ್ರದಾಯವಿದೆ. ಜೊತೆಗೆ ಕುಟುಂಬಸ್ಥರು ನದಿಯಲ್ಲಿ ಇಳಿದು ಸೂರ್ಯ ದೇವನ ಮೊದಲ ಕಿರಣ ಭೂಮಿ ಸ್ಪರ್ಶ ಮಾಡಲು ಕಾದಿರುತ್ತಾರೆ. ಸೂರ್ಯೋದಯದ ಬಳಿಕ ಮಂತ್ರ ಮಠಣ ಮೊಳಗುತ್ತದೆ.

4ನೇ ದಿನ ಉದಯಿಸುವ ರವಿಗೆ ಅರ್ಘ್ಯ ಅರ್ಪಿಸಲಾಗುತ್ತದೆ. ಹಾಲು ಮತ್ತು ಹಣ್ಣುಗಳನ್ನು ನದಿಗೆ ಅರ್ಪಿಸುತ್ತಾರೆ. ತಮ್ಮ ಕುಟುಂಬ ಸದಸ್ಯರ ಸಂತೋಷ ಮತ್ತು ಸಮೃದ್ಧಿ ನೀಡು ಎಂದು ಆಶೀರ್ವಾದ ಬೇಡುತ್ತಾರೆ. ಬಳಿಕ ನೆರೆ ಜನಸಮೂಹಕ್ಕೆ ಪ್ರಸಾದ ವಿನಿಯೋಗವಾಗಲಿದೆ. ಈ ಮೂಲಕ ಛಾತ್​​​ ಹಬ್ಬ ಕೊನೆಗೊಳ್ಳಲಿದೆ.

ಇದನ್ನೂ ಓದಿ: ಎರಡೂವರೆ ವರ್ಷ ವಯಸ್ಸಲ್ಲೇ ಅದ್ಭುತ ಜ್ಞಾಪಕ ಶಕ್ತಿ:'ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್‌'​ ಸೇರಿದ ಪುಟಾಣಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.