ಪೂರ್ಣಿಯಾ: ಬಿಹಾರ ಮತ್ತು ಬಂಗಾಳ ಗಡಿಯಲ್ಲಿರುವ ತಾರಾಬಾದಿ ಗ್ರಾಮದಲ್ಲಿ ಬಯಾಸಿ ಪಂಚಾಯತ್ ಇದೆ. ಇಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಸುಮಾರು 800 ಜನರಿದ್ದಾರೆ. ಎಲ್ಲ ಕಡೆಯಿಂದ ಜಲಮೂಲಗಳಿದ್ದರೂ ಈ ಹಳ್ಳಿಯಲ್ಲಿ ಮದುವೆ ಮಾತ್ರ ನಡೆದಿಲ್ಲ. ಕಾರಣ ಏನೆಂದರೆ ಸಾರಿಗೆ ಸಂಪರ್ಕದ ಅವ್ಯವಸ್ಥೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ 'ಸಾಥ್ ನಿಸ್ಚೆ' ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಭರವಸೆ ನೀಡಿದ್ದರೂ, ತಾರಾಬಾದಿಯಲ್ಲಿ ಆರೋಗ್ಯ, ಶಿಕ್ಷಣ ಮತ್ತು ವೈದ್ಯಕೀಯ ಚಿಕಿತ್ಸೆಯ ಮೂಲ ಸೌಲಭ್ಯಗಳು ಇನ್ನೂ ಇಲ್ಲ. ಮದುವೆ ಪ್ರಸ್ತಾಪಗಳು ನಡೆಯಬೇಕಿದ್ದರೆ, ಇಲ್ಲಿನ ಜನರು ದೂರದ ಸ್ಥಳಗಳಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ತೆರಳಬೇಕಾಗುತ್ತದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಪದೇ ಪದೆ ಆಶ್ವಾಸನೆಗಳ ಹೊರತಾಗಿಯೂ ಸರ್ಕಾರವು ತಮ್ಮ ಭರವಸೆಗಳನ್ನು ತಲುಪಿಸುವಲ್ಲಿ ವಿಫಲವಾದ ಬಗ್ಗೆ ಜನರು ಅಸಮಾಧಾನಗೊಂಡಿದ್ದಾರೆ.
ಇದನ್ನು ಓದಿ: ಕೋವಿಡ್ ಕುರಿತ ಸಾರ್ಕ್ ಸಭೆಗೆ ಭಾರತದಿಂದ ಪಾಕ್ಗೆ ಆಹ್ವಾನ
61 ವರ್ಷದ ರೆಹಬಾರ್ ಇಮಾಮ್ ಎಂಬವರು ಈಟಿವಿ ಭಾರತಕ್ಕೆ ಈ ಬಗ್ಗೆ ಮಾಹಿತಿ ನೀಡಿದ್ದು, "ಗ್ರಾಮದ ಜನರು ಸಂಪೂರ್ಣವಾಗಿ ಕೃಷಿ ಮತ್ತು ಪಶುಸಂಗೋಪನೆಯ ಮೇಲೆ ಅವಲಂಬಿತರಾಗಿದ್ದಾರೆ. ಆದರೆ, ಗ್ರಾಮದಲ್ಲಿ ಸಾರಿಗೆ ಕೊರತೆಯಿಂದಾಗಿ ಜನರು ಹತ್ತಿರದ ಹಳ್ಳಿಗಳಿಗೆ ತೆರಳಿ ಮದುವೆ ಆಚರಣೆಗಳು ಮತ್ತು ಪದ್ಧತಿಗಳನ್ನು ಪೂರ್ಣಗೊಳಿಸಬೇಕಾಗುತ್ತದೆ" ಎಂದಿದ್ದಾರೆ.
"ನಮ್ಮ ಈ ಹಳ್ಳಿ ಜಲಪ್ರದೇಶದಿಂದ ಸುತ್ತುವರರೆದಿದೆ. ನದಿ ದಾಟಲು ಕೇವಲ ಒಂದು ದೋಣಿ ಇದೆ ಮತ್ತು ಹತ್ತಿರದ ಸ್ಥಳಗಳಿಗೆ ಹೋಗಲು ನಾವು ನದಿ ನೀರಿನ ಮೂಲಕ ಓಡಾಡಬೇಕು" ಎಂದು ಅವರು ಹೇಳಿದರು.
ಇನ್ನೊಬ್ಬ ಗ್ರಾಮಸ್ಥ ಮೊಹಮ್ಮದ್ ನಿಯಾಜ್ ಮಾತನಾಡಿ, "ಪ್ರತಿವರ್ಷ ಗ್ರಾಮದ ಜನರ ಜೀವನದ ಮೇಲೆ ಪ್ರವಾಹ ಪರಿಣಾಮ ಬೀರುತ್ತದೆ" ಎಂದರು.
ರಾಜಕೀಯ ನಾಯಕರು ಚುನಾವಣೆಯ ಸಮಯದಲ್ಲಿ ಒಮ್ಮೆ ಮಾತ್ರ ಬರುತ್ತಾರೆ ಎಂದು ಸ್ಥಳೀಯರು ದೂರಿದ್ದಾರೆ. ನಾಯಕರು ಬಂದು ದೊಡ್ಡ ಭರವಸೆಗಳನ್ನು ನೀಡುತ್ತಾರೆ. ಆದರೆ ಅವುಗಳಲ್ಲಿ ಯಾವುದನ್ನೂ ಈಡೇರಿಸಿಲ್ಲ ಎಂದು ಹೇಳಿದರು.