ಮಯೂರ್ಭಂಜ್ (ಒಡಿಶಾ): ಇಲ್ಲಿನ ಸೋನರಿಪೋಸಿ ಗ್ರಾಮದಲ್ಲಿ ಕೋವಿಡ್ ರೋಗಿಯೊಬ್ಬನ ಅಂತ್ಯಕ್ರಿಯೆ ಮಾಡಲು ಬಂದ ಪೊಲೀಸರು ಮತ್ತು ಅಧಿಕಾರಿಗಳಿಗೆ ಗ್ರಾಮಸ್ಥರು ಅಟ್ಟಾಡಿಸಿಕೊಂಡು ಥಳಿಸಿದ ಘಟನೆ ನಡೆದಿದೆ.
ಠಾಕೂರ್ಮುಂಡ ಪೊಲೀಸರು ಈ ಘಟನೆ ಕುರಿತು ಪ್ರಕರಣ ದಾಖಲಿಸಿದ್ದಾರೆ. ಈಗಾಗಲೇ ಏಳು ಜನರನ್ನು ಬಂಧಿಸಲಾಗಿದೆ ಎಂದು ಮಯೂರ್ಭಂಜ್ ಪೊಲೀಸ್ ವರಿಷ್ಠಾಧಿಕಾರಿ ಸ್ಮಿತ್ ಪರ್ಮಾರ್ ಹೇಳಿದರು.
ವೃದ್ಧನೊಬ್ಬ ಆರೋಗ್ಯ ತಪಾಸಣೆಗಾಗಿ ಗ್ರಾಮದ ಆಸ್ಪತ್ರೆಗೆ ಬಂದಿದ್ದ. ಆತನಿಗೆ ಕೋವಿಡ್ ಪಾಸಿಟಿವ್ ಬಂದಿತ್ತು. ಆದರೆ, ಚಿಕಿತ್ಸೆ ಫಲಿಸದೆ ಆತ ಅಲ್ಲಿಯೇ ಸಾವನ್ನಪ್ಪಿದ್ದ ಎಂದು ಆಸ್ಪತ್ರೆಯು ವರದಿ ಮಾಡಿದೆ. ಆ ಬಳಿಕ ಆ ಗ್ರಾಮದಲ್ಲಿ ಯಾವುದೇ ಕೊರೊನಾ ಪ್ರಕರಣ ವರದಿಯಾಗಿಲ್ಲ ಎಂಬುದನ್ನು ಗ್ರಾಮಸ್ಥರು ನಂಬಿದ್ದಾರೆ.
ಹಾಗಾಗಿ, ಅಲ್ಲಿ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಶವ ಸಂಸ್ಕಾರವನ್ನು ತಡೆಯಲು ಪ್ರಯತ್ನಿಸಿದ್ದೇವೆ ಎಂದು ಅನೇಕ ಸ್ಥಳೀಯರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.