ETV Bharat / bharat

ಕೋವಿಡ್ ಮೊದಲ ಅಲೆ ನಂತರ ಸರ್ಕಾರ, ಜನರ ನಿರ್ಲಕ್ಷ್ಯವೇ ಈ ಸ್ಥಿತಿಗೆ ಕಾರಣ: ಮೋಹನ್​ ಭಾಗವತ್​

ಕೋವಿಡ್ ಮೊದಲನೇ ಅಲೆ ವೇಳೆ ಸರ್ಕಾರ, ಜನರು ಹಾಗೂ ಆಡಳಿತ ವರ್ಗ ನಿರ್ಲಕ್ಷ್ಯ ವಹಿಸಿರುವುದೇ ಇಂದಿನ ಪರಿಸ್ಥಿತಿಗೆ ಕಾರಣ ಎಂದು ಮೊಹನ್ ಭಾಗವತ್​ ಅಭಿಪ್ರಾಯ ಪಟ್ಟಿದ್ದಾರೆ.

RSS Chief
RSS Chief
author img

By

Published : May 15, 2021, 10:25 PM IST

ನವದೆಹಲಿ: ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್​ನ ಮೊದಲ ಅಲೆ ವೇಳೆ ಸರ್ಕಾರ, ಜನರು ಹಾಗೂ ಆಡಳಿತ ವರ್ಗ ನಿರ್ಲಕ್ಷ್ಯ ವಹಿಸಿರುವುದೇ ಸದ್ಯದ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್​ ಭಾಗವತ್​ ಹೇಳಿದ್ದಾರೆ.

ಪಾಸಿಟಿವಿಟಿ ಅನ್​​ಲಿಮಿಟೆಡ್​​ ಎಂಬ ಉಪನ್ಯಾಸ ಸರಣಿಯನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಈ ಮಾಹಿತಿ ನೀಡಿರುವ ಭಾಗವತ್​, ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಜನರು ಸಕಾರಾತ್ಮಕ ಮತ್ತು ಕ್ರೀಯಾಶೀಲರಾಗಿರಬೇಕು ಎಂದು ತಿಳಿಸಿದ್ದಾರೆ.

ದೇಶದಲ್ಲಿ ಕೋವಿಡ್​ ಮೊದಲ ಅಲೆ ನಂತರ ಸರ್ಕಾರ, ಆಡಳಿತ ಮತ್ತು ಸಾರ್ವಜನಿಕರು ತಮ್ಮ ಸುರಕ್ಷತೆ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದೇ ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ ಎಂದಿದ್ದು, ಸಾಂಕ್ರಾಮಿಕ ಕೋವಿಡ್​ ವಿರುದ್ಧ ಹೋರಾಡಲು ಪರಸ್ಪರ ಬೆರಳು ತೊರಿಸುವ ಬದಲು ಒಗ್ಗಟ್ಟಿನಿಂದ ಹೋರಾಡಬೇಕಿದೆ ಎಂದಿದ್ದಾರೆ.

ಮೊದಲನೇ ಕೋವಿಡ್ ಅಲೆ ವೇಳೆ ವೈದ್ಯರು, ವಿಜ್ಞಾನಿಗಳು ಮನಗೆ ಎಚ್ಚರಿಕೆ ನೀಡಿದ್ದರು. ಆದರೂ ನಾವು ನಿರ್ಲಕ್ಷ್ಯ ವಹಿಸಿದ್ದೇವೆ ಎಂದ ಭಾಗವತ್​, ಮೂರನೇ ಅಲೆಯನ್ನ ಧೈರ್ಯದಿಂದ ಎದುರಿಸಬೇಕಾಗಿದೆ ಎಂದರು.

ಕೋವಿಡ್ ವಿರುದ್ಧ ನಾವು ಸಕಾರಾತ್ಮಕವಾಗಿ ಕೆಲಸ ಮಾಡಬೇಕು. ಪ್ರಸ್ತುತ ಪರಿಸ್ಥಿತಿ ಹತೋಟಿಗೆ ತರಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಅತಿ ಅವಶ್ಯವಾಗಿದೆ ಎಂದು ಹೇಳಿದರು. ಇದೇ ವೇಳೆ, ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಇಂಗ್ಲೆಂಡ್ ಪರಿಸ್ಥಿತಿ ವಿರುದ್ಧವಾಗಿ ಕಾಣಿಸುತ್ತಿತ್ತು. ಆದರೂ ಅವರು ತಮ್ಮ ಧೈರ್ಯ ಕಳೆದುಕೊಳ್ಳಲಿಲ್ಲ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.