ನವದೆಹಲಿ: ಇಲ್ಲಿನ ಖಾನ್ ಮಾರ್ಕೆಟ್ ಮೆಟ್ರೋ ನಿಲ್ದಾಣದ ಬಳಿ ಆರು ಜನರು "ಪಾಕಿಸ್ತಾನ ಜಿಂದಾಬಾದ್" ಎಂದು ಘೋಷಣೆ ಕೂಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಕೆಲವು ಜನ ಖಾನ್ ಮಾರ್ಕೆಟ್ ಮೆಟ್ರೋ ನಿಲ್ದಾಣದ ಬಳಿ "ಪಾಕಿಸ್ತಾನ ಜಿಂದಾಬಾದ್" (ಲಾಂಗ್ ಲಿವ್ ಪಾಕಿಸ್ತಾನ್) ಎಂದು ಕೂಗಿದ್ದಾರೆ.
ಪೊಲೀಸ್ ತಂಡ ಸ್ಥಳಕ್ಕೆ ತಲುಪಿದಾಗ ನೀಲಿ ಬಣ್ಣದ ಬೈಕ್‌ಗಳಲ್ಲಿ ಮೂವರು ಮಹಿಳೆಯರು, ಇಬ್ಬರು ಪುರುಷರು ಸೇರಿದಂತೆ ಮತ್ತೋರ್ವ ವ್ಯಕ್ತಿ ಇರುವುದು ಕಂಡುಬಂದಿದೆ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ: ನಕಲಿ ಜಿಎಸ್ಟಿ ಇನ್ವಾಯ್ಸ್ ದಂಧೆಯ ಮಾಸ್ಟರ್ ಮೈಂಡ್ ಸೇರಿ ಐವರ ಬಂಧನ
ವಿಚಾರಣೆ ವೇಳೆ ಅವರು ಇಂಡಿಯಾ ಗೇಟ್ ಪ್ರದೇಶಕ್ಕೆ ಬಂದು ಬೈಕ್‌ಗಳನ್ನು ಬಾಡಿಗೆಗೆ ಪಡೆದಿರುವುದು ಬೆಳಕಿಗೆ ಬಂದಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.