ETV Bharat / bharat

ಈ ದೇವಸ್ಥಾನದಲ್ಲಿ ಅರ್ಚಕರೇ ದೇವರು! ನಾಟಿ ವೈದ್ಯನ ನೆನಪಿಗೆ ಗುಡಿ ಕಟ್ಟಿದ ಗ್ರಾಮಸ್ಥರು - telangana news

ಪ್ರೀತಿ, ಗೌರವ ಅಂದ್ರೇನೆ ಹಾಗೆ. ಅದಕ್ಕೆ ಪಾರವೇ ಇರುವುದಿಲ್ಲ. ತೆಲಂಗಾಣದಲ್ಲಿ ಮೃತಪಟ್ಟಿರುವ ನಾಟಿ ವೈದ್ಯರೊಬ್ಬರಿಗೆ ಜನರು ದೇವಸ್ಥಾನವನ್ನೇ ಕಟ್ಟಿದ್ದಾರೆ.

ಅರ್ಚಕರೇ ದೇವರು
ಅರ್ಚಕರೇ ದೇವರು
author img

By ETV Bharat Karnataka Team

Published : Jan 2, 2024, 11:06 AM IST

ಹೈದರಾಬಾದ್​: ಯಾರಾದರೂ ಸಮಾಜಕ್ಕೆ ಒಳ್ಳೆಯದು ಮಾಡಿದರೆ, ಜನರ ಮನಸ್ಸಿನಲ್ಲಿ ಸ್ಥಾನ ಪಡೆದರೆ ಅಂಥವರ ದೇವಸ್ಥಾನವನ್ನೇ ಕಟ್ಟುವ ಪರಿಪಾಠ ನಮ್ಮ ಜನರಲ್ಲಿದೆ. ಅಂಥದ್ದೇ ಒಂದು ಉದಾಹರಣೆ ತೆಲಂಗಾಣದಲ್ಲಿ ಸಿಕ್ಕಿದೆ. ಅರ್ಚಕರಾಗಿ, ಆಯುರ್ವೇದ ವೈದ್ಯರಾಗಿ ಸೇವೆ ಸಲ್ಲಿಸಿದ ಮೃತ ವ್ಯಕ್ತಿಯೊಬ್ಬರಿಗೆ 6 ಲಕ್ಷ ರೂಪಾಯಿ ವೆಚ್ಚದ ದೇವಸ್ಥಾನ ನಿರ್ಮಿಸಿದ್ದಾರೆ.

ಜನಗಂ ಜಿಲ್ಲೆಯ ಸ್ಟೇಷನ್‌ಘನಪುರ ಮಂಡಲದ ತಾಟಿಕೊಂಡ ಗ್ರಾಮದ ಸೌಮಿತ್ರಿ ಶ್ರೀರಂಗಾಚಾರ್ಯುಲು (68) ಅವರ ನೆನಪಿನಲ್ಲಿ ಗ್ರಾಮಸ್ಥರು ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. ಜನವರಿ 4ರಂದು ಉದ್ಘಾಟನೆಯಾಗಲಿದೆ. ಸುತ್ತಮುತ್ತಲ ಜನರಿಗೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.

ಶ್ರೀರಂಗಾಚಾರ್ಯುಲು ಅವರು 50 ವರ್ಷಗಳಿಂದ ತಾಟಿಕೊಂಡ ಗ್ರಾಮದ ಸೀತಾರಾಮಚಂದ್ರಸ್ವಾಮಿ ದೇವಸ್ಥಾನದ ಅರ್ಚಕರಾಗಿದ್ದರು. ಇದರ ಜೊತೆಗೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪೌರೋಹಿತ್ಯ ನಡೆಸುತ್ತಿದ್ದರು. ನಾಟಿ ಔಷಧಿ ವೈದ್ಯರೂ ಆಗಿದ್ದರು. ಅನಾರೋಗ್ಯಪೀಡಿತರಿಗೆ ಉಚಿತವಾಗಿಯೇ ಔಷಧಿ ನೀಡುತ್ತಿದ್ದರು. ಅವರ ಕೈಗುಣವೆಂಬಂತೆ ರೋಗ ವಾಸಿಯಾಗುತ್ತಿತ್ತು. ಇದರಿಂದ ಅವರನ್ನು ಜನರು ದೇವರಂತೆ ಕಾಣುತ್ತಿದ್ದರು.

ಊರ ಜನರಿಂದ ಹಣ ಸಂಗ್ರಹ: ಜನರ ಪ್ರೀತಿಗೆ ಪಾತ್ರವಾಗಿದ್ದ ಶ್ರೀರಂಗಾಚಾರ್ಯರು ಕಳೆದ ವರ್ಷ ನಿಧನರಾಗಿದ್ದರು. ಇದು ಜನರಲ್ಲಿ ದು:ಖ ತರಿಸಿದ್ದಲ್ಲದೇ, ಅವರ ನೆನಪು ಕಾಡುತ್ತಿತ್ತು. ಇದಕ್ಕಾಗಿ ಗ್ರಾಮಸ್ಥರು ಒಗ್ಗೂಡಿ, ಬದುಕಿರುವಾಗ ಅವರು ಮಾಡಿದ ಸೇವೆಯನ್ನು ಅಜರಾಮರಗೊಳಿಸುವ ಸಲುವಾಗಿ ಗ್ರಾಮದಲ್ಲಿ ಅವರ ಹೆಸರಿನಲ್ಲಿ ದೇವಸ್ಥಾನ ನಿರ್ಮಿಸಲು ನಿರ್ಣಯಿಸಿದರು. ಅದರಂತೆ ಊರಿನವರಿಂದ ಹಣ ಸಂಗ್ರಹಿಸಿ 6 ಲಕ್ಷ ರೂಪಾಯಿ ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. ಅದರಲ್ಲಿ ಅವರ ಪುತ್ಥಳಿ ಅಳವಡಿಸಲಿದ್ದಾರೆ.

"ದೇವಸ್ಥಾನ ನಿರ್ಮಾಣ ಕೆಲಸ ಪೂರ್ಣಗೊಂಡಿದೆ. ಜನವರಿ 4ರಂದು ಅದರಲ್ಲಿ ಶ್ರೀರಂಗಾಚಾರ್ಯರ ಮೂರ್ತಿ ಪ್ರತಿಷ್ಠಾಪನೆ ಮಾಡಿ ಉದ್ಘಾಟನೆ ಮಾಡಲಿದ್ದಾರೆ" ಎಂದು ಶ್ರೀರಂಗಾಚಾರ್ಯರ ಮೊಮ್ಮಗ ವರುಣಾಚಾರ್ಯ ತಿಳಿಸಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದಲ್ಲಿ ಶಿಲೆಯಾಗಿ ನಿಲ್ಲಲಿವೆ ಮೈಸೂರಿನ ಐದು ಕಲ್ಲುಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.