ETV Bharat / bharat

ಪಿಂಚಣಿಗಾಗಿ 56 ವರ್ಷ ಹೋರಾಡಿ ಕೊನೆಗೂ ಗೆದ್ದ ಹುತಾತ್ಮ ಯೋಧನ ಪತ್ನಿ!

1992ರಲ್ಲಿ ನಡೆದ ಚೀನಾ- ಭಾರತ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧನ ಕುಟುಂಬಕ್ಕೆ ಸಲ್ಲಬೇಕಾಗಿದ್ದ ಪಿಂಚಣಿಯನ್ನು ಕೇಂದ್ರ ಸರ್ಕಾರ ತಡೆಹಿಡಿದಿತ್ತು. ಇದರ ಹೋರಾಡಿದ ಮಹಿಳೆ 56 ವರ್ಷಗಳ ತರುವಾಯ ತನಗೆ ಧಕ್ಕಬೇಕಾದ ನ್ಯಾಯವನ್ನು ಪಡೆದುಕೊಂಡಿದ್ದಾಳೆ.

pension-stopped
ಹುತಾತ್ಮ ಯೋಧನ ಪತ್ನಿ
author img

By

Published : Apr 12, 2022, 7:40 PM IST

ಚಂಡೀಗಢ: ಭಾರತ- ಚೀನಾ ಯುದ್ಧದಲ್ಲಿ ಹುತಾತ್ಮರಾದ ಸಿಆರ್‌ಪಿಎಫ್ ಯೋಧನ ಪತ್ನಿಗೆ ತಡೆಹಿಡಿಯಲಾಗಿದ್ದ ಪಿಂಚಣಿಯನ್ನು ಆಕೆ 56 ವರ್ಷಗಳ ಬಳಿಕ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ. ಈ ಪ್ರಕರಣ ನಮ್ಮ ನ್ಯಾಯಾಂಗ ಮತ್ತು ಆಡಳಿತ ವ್ಯವಸ್ಥೆ ಎಷ್ಟು ವೇಗವಾಗಿದೆ ಎಂಬುದರ ದ್ಯೋತಕವೂ ಆಗಬಹುದು.

1992ರಲ್ಲಿ ನಡೆದ ಚೀನಾ- ಭಾರತ ಯುದ್ಧದಲ್ಲಿ ಹುತಾತ್ಮರಾಗಿದ್ದ ಪ್ರತಾಪ್ ಸಿಂಗ್ ಎಂಬುವರ ಪತ್ನಿ ಧರ್ಮೋದೇವಿ ಅವರಿಗೆ 4 ವರ್ಷಗಳು ಪಿಂಚಣಿ ನೀಡಿ ಬಳಿಕ ಅದನ್ನು ತಡೆಹಿಡಿಯಲಾಗಿತ್ತು. ಇದರ ವಿರುದ್ಧ ಆಕೆ ಪಂಜಾಬ್​ ಮತ್ತು ಹರಿಯಾಣ ಹೈಕೋರ್ಟ್​ ಮೆಟ್ಟಿಲೇರಿದ್ದರು. ಪ್ರಕರಣ 56 ವರ್ಷಗಳ ಸುದೀರ್ಘ ಕಾಲದ ಬಳಿಕ ಇದೀಗ ಹೈಕೋರ್ಟ್​ ಆಕೆ ಪಿಂಚಣಿ ಪಡೆಯಲು ಅರ್ಹಳಾಗಿದ್ದಾಳೆ. ಸರ್ಕಾರ ಅಷ್ಟು ವರ್ಷಗಳ(56) ಪಿಂಚಣಿಯನ್ನು ಶೇ.6ರ ಬಡ್ಡಿ ದರದ ಸಮೇತ ಪಾವತಿಸಬೇಕು ಎಂದು ತೀರ್ಪು ನೀಡಿದೆ.

ಪ್ರಕರಣದ ಹಿನ್ನೆಲೆ: ಪ್ರತಾಪ್ ಸಿಂಗ್ ಅವರು ಸಿಆರ್​ಪಿಎಫ್​ನ 9ನೇ ಬೆಟಾಲಿಯನ್‌ನಲ್ಲಿ ನಿಯೋಜನೆಗೊಂಡಿದ್ದರು. 1962 ರ ಇಂಡೋ-ಚೀನಾ ಯುದ್ಧದ ವೇಳೆ ಹುತಾತ್ಮರಾಗಿದ್ದರು. ಹುತಾತ್ಮ ಯೋಧನ ಪತ್ನಿಗೆ ವಿಶೇಷ ಪಿಂಚಣಿಯನ್ನು ಸರ್ಕಾರ ಮಂಜೂರು ಮಾಡಿತ್ತು. 4 ವರ್ಷಗಳ ಕಾಳ ನೀಡಿದ ಬಳಿಕ 3 ಆಗಸ್ಟ್ 1966 ರಂದು ಕಾರಣ ತಿಳಿಸದೇ ಕೇಂದ್ರ ಸರ್ಕಾರ ಪಿಂಚಣಿಯನ್ನು ಸ್ಥಗಿತಗೊಳಿಸಿತ್ತು.

ಬಳಿಕ ಈ ಕುರಿತು ಹಲವು ಬಾರಿ ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗದ್ದರಿಂದ ಸಂತ್ರಸ್ತ ಮಹಿಳೆ ಹೈಕೋರ್ಟ್​ ಮೊರೆ ಹೋಗಿದ್ದಳು. ಇದೀಗ ಹೈಕೋರ್ಟ್ ನ್ಯಾಯಮೂರ್ತಿ ಹರ್ಸಿಮ್ರಾನ್ ಸಿಂಗ್ ಸೇಥಿ ಅವರ ಪೀಠ ಪ್ರಕರಣದ ಸುದೀರ್ಘ ವಿಚಾರಣೆಯ ಬಳಿಕ ಹುತಾತ್ಮ ಯೋಧನ ಮಹಿಳೆಗಾದ ಅನ್ಯಾಯವನ್ನು ಎತ್ತಿ ಹಿಡಿದು 1966 ರಿಂದ ತಡೆಹಿಡಿಯಲಾದ ಪಿಂಚಣಿ ಹಣವನ್ನು ಬಡ್ಡಿ ಸಮೇತ ಪಾವತಿಸುವಂತೆ ಆದೇಶಿಸಿದೆ.

ಕೇಂದ್ರಕ್ಕೆ ಹೈಕೋರ್ಟ್​ ನೋಟಿಸ್​: ಪಿಂಚಣಿ ಸ್ಥಗಿತಗೊಳಿಸಿದ ಕುರಿತು ಸ್ಪಷ್ಟನೆ ನೀಡುವಂತೆ ಹೈಕೋರ್ಟ್​ ಕೇಂದ್ರ ಸರ್ಕಾರಕ್ಕೆ ನೋಟಿಸ್​ ಜಾರಿ ಮಾಡಿತ್ತು. ಇದಕ್ಕೆ ಉತ್ತರ ನೀಡಿದ ಸರ್ಕಾರ ಸಂತ್ರಸ್ತ ಮಹಿಳೆಗೆ ಬರಬೇಕಿದ್ದ ಪಿಂಚಣಿ ತಪ್ಪಾದ ಗ್ರಹಿಕೆಯಿಂದ ತಡೆಹಿಡಿಯಲಾಗಿದೆ ಎಂದು ಸಮಜಾಯಿಸಿ ನೀಡಿತ್ತು. ಅಲ್ಲದೇ ಕೋರ್ಟ್​ನಲ್ಲಿ ಮಹಿಳೆಯ ಪರವಾಗಿ ಸಿಆರ್​ಪಿಎಫ್​ ಅಧಿಕಾರಿಗಳು ಕೂಡ ವಾದ ಮಂಡಿಸಿದ್ದರು. ಸಂವಹನದ ಕೊರತೆಯಿಂದಾಗಿ ಈ ಘಟನೆ ನಡೆದಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಇದನ್ನೂ ಓದಿ: ಮುಂಬೈ ಷೇರು ಸೂಚ್ಯಂಕ 2ನೇ ದಿನವೂ ಕುಸಿತ: ದೈತ್ಯ ಕಂಪನಿಗಳಿಗೆ ನಷ್ಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.