ನವದೆಹಲಿ: ಪೆಗಾಸಸ್ ಸ್ಪೈವೇರ್ ಬಗ್ಗೆ ಚರ್ಚಿಸಲು ಮತ್ತು ತನಿಖೆ ನಡೆಸಲು ಒತ್ತಾಯಿಸುತ್ತಿರುವ ವಿರೋಧ ಪಕ್ಷಗಳು ಇಂದು ನಡೆಯಲಿರುವ ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ದನಿ ಎತ್ತಲು ನಿರ್ಧರಿಸಿವೆ.
ಇನ್ನು ಈ ಬಗ್ಗೆ ಕಾಂಗ್ರೆಸ್ ಲೋಕಸಭಾ ಸಂಸದ ಕೆ.ಸುರೇಶ್ ಮಾತನಾಡಿ, "ಪೆಗಾಸಸ್ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಾಗಿಲ್ಲ. ಆದರೆ ನಾವು ಲೋಕಸಭೆಯಲ್ಲಿ ಈ ಬಗ್ಗೆ ಚರ್ಚಿಸಲು ಸಿದ್ಧರಿದ್ದೇವೆ. ಆದರೆ ಅವರು ಆ ಸಂದರ್ಭದಲ್ಲಿ ವಿಷಯ ಮರೆಮಾಚಲು ಯತ್ನಿಸುತ್ತಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೆಗಾಸಸ್ ವಿಷಯದ ಕುರಿತು ಇಂದು ಮುಂದೂಡುವ ನಿರ್ಣಯವನ್ನು ಒಟ್ಟಾಗಿ ಮಂಡಿಸಲು ವಿರೋಧ ಪಕ್ಷಗಳು ನಿರ್ಧರಿಸಿವೆ.