ETV Bharat / bharat

'Enough is enough' ಪೆಗಾಸಸ್​ ಅಪರಾಧ ಮಾಡಿದ್ರೆ ತನಿಖೆಗೊಳಪಡಲು ಸಿದ್ಧ ಎಂದ ಕಂಪನಿ!

ಪೆಗಾಸಸ್​ ಸ್ಫೈವೇರ್ ಕಂಪನಿ ಮೇಲೆ ಗೂಢಾಚಾರದ ಗಂಭೀರ ಆರೋಪ ಕೇಳಿ ಬಂದಿದ್ದು, ಅದಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಸಲ ಕಂಪನಿ ಪ್ರತಿಕ್ರಿಯಿಸಿದೆ.

author img

By

Published : Jul 21, 2021, 10:02 PM IST

Pegasus NSO
Pegasus NSO

ನವದೆಹಲಿ: ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಪೆಗಾಸಸ್​​ ಪ್ರಕರಣ ಹೆಚ್ಚಿನ ಚರ್ಚೆಗೆ ಗ್ರಾಸವಾಗಿದ್ದು, ಇಸ್ರೇಲ್ ಮೂಲಕ ಸ್ಪೈವೇರ್​​ ಪೆಗಾಸಸ್​ ಅಪ್ಲಿಕೇಶನ್​ ವಿರುದ್ಧ ಇನ್ನಿಲ್ಲದ ಟೀಕೆಗಳ ಸುರಿಮಳೆಯಾಗುತ್ತಿದೆ. ಈ ಅಪ್ಲಿಕೇಶನ್ ಮೂಲಕ ಕೇಂದ್ರ ಸರ್ಕಾರ ದೇಶದ ಅನೇಕ ಪತ್ರಕರ್ತರು, ರಾಜಕೀಯ ಮುಖಂಡರುಗಳ ಮೊಬೈಲ್ ನಂಬರ್ ಹ್ಯಾಕ್​ ಮಾಡಿದೆ ಎಂದು ಆರೋಪಿಸಲಾಗಿತ್ತು.

ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಇಸ್ರೇಲ್​ನ NSO ಪ್ರತಿಕ್ರಿಯೆ ನೀಡಿದ್ದು, ನಾವು ಯಾವುದೇ ರೀತಿಯ ತನಿಖೆಗೊಳಪಡಲು ಸಿದ್ಧ ಎಂದಿದೆ. ಮಿಲಿಟರಿ ದರ್ಜೆಯ ಸ್ಪೈವೇರ್​ ಪೆಗಾಸಸ್​​ ಅಭಿವೃದ್ಧಿ ಮಾಡಿರುವ ಇಸ್ರೇಲ್​ನ ಎನ್​ಎಸ್​ಒ ಪ್ರಕಾರ, ಯಾವುದೇ ಕಾರಣಕ್ಕೂ ತಂತ್ರಜ್ಞಾನದ ದುರುಪಯೋಗ ಮಾಡಿಲ್ಲ. ಇದರ ಬಗ್ಗೆ ಕೂಲಂಕಷವಾಗಿ ತನಿಖೆ ಮಾಡಿ, ಇನ್ಮುಂದೆ ಮಾಧ್ಯಮಗಳಿಗೆ ನಾವು ಇದರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದಿದೆ.

ಪೆಗಾಸಸ್​​​ ಸ್ಫೈವೇರ್​ಗೆ ಭಾರತ ಸೇರಿದಂತೆ​ ಜೆರ್ಬೈಜಾನ್​, ಬಹ್ರೇನ್​, ಹಂಗೇರಿ, ಕಜಕಿಸ್ಥಾನ್​, ಮೆಕ್ಸಿಕೊ, ಮೊರಾಕ್ಕೋ, ರುವಾಂಡಾ ಮತ್ತು ಯುಎಇ ಸೇರಿದಂತೆ ಅನೇಕ ದೇಶಗಳು ಗೂಢಚರ್ಯೆಗೆ ಒಳಗಾಗಿವೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: 'ಆನ್‌ಲೈನ್‌ ಹುಡುಗಿ' ಜೊತೆ 'ಚಾಟ್‌ ಮಸಾಲ': 11 ಲಕ್ಷ ರೂಪಾಯಿ ಕಳ್ಕೊಂಡ 77ರ ವೃದ್ಧ!

ಭಯೋತ್ಪಾದನೆ ಮತ್ತು ಅಪರಾಧ ನಿಯಂತ್ರಣಕ್ಕಾಗಿ ಮಾತ್ರ ಪೆಗಾಸಸ್ ಬಳಕೆಯಾಗುತ್ತಿದ್ದು, ಇದೀಗ ರಾಜಕಾರಣಿಗಳು, ನ್ಯಾಯಾಧೀಶರು, ಪತ್ರಕರ್ತರು ಹಾಗೂ ಅಧಿಕಾರಿಗಳ ಪೋನ್ ಹ್ಯಾಕಿಂಗ್​​ನಲ್ಲಿ ನಮ್ಮ ಕೈವಾಡವಿಲ್ಲ ಎಂದು ತಿಳಿಸಿದೆ. ಕಂಪನಿಯ ಅಪಪ್ರಚಾರದ ವಿರುದ್ಧ ಅಭಿಯಾನ ಮಾಡುವುದು ಸರಿಯಲ್ಲ. ಪೆಗಾಸಸ್ ಮೇಲೆ ಕೇಳಿ ಬಂದಿರುವ ಆರೋಪದ ತನಿಖೆ ನಡೆಸಲು ಇಸ್ರೆಲ್​ ಸರ್ಕಾರ ಹೊಸದೊಂದು ತನಿಖಾ ತಂಡ ರಚನೆ ಮಾಡಿದೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.