ETV Bharat / bharat

ಪರ್ಭಾನಿ: ಬೆಣಚುಕಲ್ಲಿಗೆ ಜೀವ ತುಂಬುವ ಕಲೆಗಾರ

ಸಣ್ಣ-ಸಣ್ಣ ಬೆಣಚು ಕಲ್ಲುಗಳಿಗೆ ಚೈತನ್ಯವನ್ನು ತರುವ ಮತ್ತು ಅವುಗಳ ಮೂಲಕ ವಿವಿಧ ಸಂದೇಶಗಳನ್ನು ರವಾನಿಸುವ ಕಲೆ ವಿದೇಶದಲ್ಲಿ ವ್ಯಾಪಕವಾಗಿ ಅಭಿವೃದ್ಧಿ ಹೊಂದಿದೆ. ಭಾರತದ ಕೆಲವು ಭಾಗಗಳಲ್ಲಿಯೂ ಕೆಲವು ಕಲಾವಿದರು ಪೆಬೆಲ್ ಆರ್ಟ್​ ಮೂಲಕ ಜನರ ಮನಸೆಳೆಯುತ್ತಿದ್ದಾರೆ. ಬೆಣಚು ಕಲ್ಲುಗಳನ್ನು ಬಳಸಿಕೊಂಡು ಪ್ರಹ್ಲಾದ್​ ಕೊರೊನಾ ಜಾಗೃತಿ ಮೂಡಿಸುವ ಕಲಾಕೃತಿಗಳನ್ನು ರಚಿಸಿದ್ದಾರೆ.

pebble art
ಪೆಬೆಲ್ ಆರ್ಟ್
author img

By

Published : Dec 27, 2020, 6:04 AM IST

ಪರ್ಭಾನಿ (ಮಹಾರಾಷ್ಟ್ರ): ಕೊರೊನಾದಿಂದ ಹೇರಿದ ಲಾಕ್​ಡೌನ್​ ಪರಿಣಾಮ ಅನೇಕ ವಿದ್ಯಾವಂತರು ತಮ್ಮ ಕೆಲಸಕಳೆದುಕೊಂಡು ನಿರುದ್ಯೋಗಿಗಳಾದರು. ವಿವಿಧ ವ್ಯವಹಾರಗಳಲ್ಲಿ ಕುಸಿತ ಕಂಡ ಪರಿಣಾಮ ಕಾರ್ಮಿಕ ವರ್ಗಕ್ಕೆ ದೊಡ್ಡ ಹೊಡೆತ ನೀಡಿತು. ಅಲ್ಲದೇ ಅನೇಕ ವ್ಯಾಪಾರಿಗಳ ಜೀವನ ಸಂಕಷ್ಟಕ್ಕೆ ಸಿಲುಕಿತು. ಆದರೆ ಇಲ್ಲೊಬ್ಬ ಯುವಕ ಇದೇ ಲಾಕ್​ಡೌನ್​ ಅನ್ನು ಒಂದು ಅವಕಾಶವಾಗಿ ತೆಗೆದುಕೊಂಡರು. ತಮ್ಮ ಬಾಲ್ಯದ ಹವ್ಯಾಸವನ್ನೇ ಉದ್ಯೋಗವಾಗಿ ಪರಿವರ್ತಿಸಿಕೊಂಡರು.

ಪರ್ಭಾನಿ: ಬೆಣಚುಕಲ್ಲಿಗೆ ಜೀವ ತುಂಬುವ ಕಲೆಗಾರ

ಸಣ್ಣ-ಸಣ್ಣ ಬೆಣಚು ಕಲ್ಲುಗಳಿಗೆ ಚೈತನ್ಯವನ್ನು ತರುವ ಮತ್ತು ಅವುಗಳ ಮೂಲಕ ವಿವಿಧ ಸಂದೇಶಗಳನ್ನು ರವಾನಿಸುವ ಕಲೆ ವಿದೇಶದಲ್ಲಿ ವ್ಯಾಪಕವಾಗಿ ಅಭಿವೃದ್ಧಿ ಹೊಂದಿದೆ. ಭಾರತದ ಕೆಲವು ಭಾಗಗಳಲ್ಲಿಯೂ ಕೆಲವು ಕಲಾವಿದರು ಪೆಬೆಲ್ ಆರ್ಟ್​ ಮೂಲಕ ಜನರ ಮನಸೆಳೆಯುತ್ತಿದ್ದಾರೆ. ಬೆಣಚು ಕಲ್ಲುಗಳನ್ನು ಬಳಸಿಕೊಂಡು ಪ್ರಹ್ಲಾದ್​ ಕೊರೊನಾ ಜಾಗೃತಿ ಮೂಡಿಸುವ ಕಲಾಕೃತಿಗಳನ್ನು ರಚಿಸಿದ್ದಾರೆ. ಪ್ರಹ್ಲಾದ್​ ಅವರ ಕಲಾಕೃತಿಗಳಿಗೆ ಅನೇಕ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಾಗತಿಕ ಮಾರುಕಟ್ಟೆಯು ಆರ್ಥಿಕ ಹಿಂಜರಿತದಲ್ಲಿಯೇ ಸಾಗುತ್ತಿದೆ. ಭಾರತದಲ್ಲಿ ನಿರುದ್ಯೋಗ ಏರಿಕೆಯಾಗುತ್ತಿದೆ. ಆದರೆ ಕಲೆಯ ಮೂಲಕ ಜೀವನೋಪಾಯ ಕಂಡುಕೊಂಡ ಪ್ರಹ್ಲಾದ್​ ಅವರಿಗೆ ವ್ಯಾಪಾರೋದ್ಯಮವು ಪ್ರಹ್ಲಾದ್‌ಗೆ ಆರ್ಥಿಕವಾಗಿ ಬೆಳೆಯಲು ಸಹಾಯ ಮಾಡುತ್ತಿದೆ. ಇದು ಸ್ವಯಂ ಉದ್ಯೋಗಕ್ಕೆ ಅಡಿಪಾಯ ಹಾಕಿದೆ.

ಹವ್ಯಾಸಗಳು ಉದ್ಯೋಗ ಮತ್ತು ಕಲೆಯನ್ನು ಹೇಗೆ ಒಟ್ಟಿಗೆ ತರಬಹುದು ಎಂಬುದಕ್ಕೆ ಪ್ರಹ್ಲಾದ್​ ಅವರೇ ಸಾಕ್ಷಿ. 'ಬೆಣಚುಕಲ್ಲು-ಕಲೆ' ಯ ಮೂಲಕವೇ ಅವರು ವಿವಿಧ ಕಲಾಕೃತಿಗಳನ್ನು ರಚಿಸಿ ಉದ್ಯೋಗ ಆರಂಭಿಸಿದರು. ಗ್ರಾಮೀಣ ಪ್ರದೇಶದ ಯುವಜನರು ಹೆಚ್ಚಾಗಿ ನಗರಗಳತ್ತ ಆಕರ್ಷಿತರಾಗುತ್ತಾರೆ. ಆದರೆ ಭವಿಷ್ಯದಲ್ಲಿ, ಅಂತಹ ಯುವಕರು ಹಳ್ಳಿಯಲ್ಲಿ ವಿವಿಧ ಕಲೆಗಳಲ್ಲಿ ತರಬೇತಿ ಪಡೆದರೆ, ಅವರು ಇದರಿಂದ ಒಂದು ದೊಡ್ಡ ಉದ್ಯಮವನ್ನೇ ಸೃಷ್ಟಿಸಿ ಸಾಕಷ್ಟು ಆದಾಯವನ್ನು ಗಳಿಸುವಲ್ಲಿ ಯಶಸ್ವಿಯಾಗಬಹುದು ಅಂತಾರೆ ಪ್ರಹ್ಲಾದ್ .

ETV Bharat Logo

Copyright © 2024 Ushodaya Enterprises Pvt. Ltd., All Rights Reserved.