ETV Bharat / bharat

ಮುಸ್ಲಿಮರ ವಿರುದ್ಧ ದ್ವೇಷ ಭಾಷಣ: ಕೇರಳ ಮಾಜಿ ಶಾಸಕ ಪಿ.ಸಿ.ಜಾರ್ಜ್‌ ಪೊಲೀಸ್ ವಶಕ್ಕೆ

author img

By

Published : May 1, 2022, 9:53 AM IST

ಕೇರಳದಲ್ಲಿರುವ ಮುಸ್ಲಿಮೇತರರು ಮುಸ್ಲಿಂ ಸಮುದಾಯದವರು ನಡೆಸುತ್ತಿರುವ ರೆಸ್ಟೋರೆಂಟ್‌ಗಳು, ಮಾಲ್‌ಗಳಿಗೆ ತೆರಳದಂತೆ ಭಾಷಣವೊಂದರಲ್ಲಿ ಮನವಿ ಮಾಡಿದ್ದ ಕೇರಳದ ಮಾಜಿ ಶಾಸಕ ಪಿ.ಸಿ.ಜಾರ್ಜ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

PC George taken into custody for hate speech against Muslim community
ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಭಾಷಣ: ಕೇರಳದ ಮಾಜಿ ಶಾಸಕ ಪೊಲೀಸರ ವಶಕ್ಕೆ

ತಿರುವನಂತಪುರಂ(ಕೇರಳ): ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಮಾಜಿ ಶಾಸಕ ಮತ್ತು ಜಾತ್ಯತೀತ ಜನಪಕ್ಷಂ ನಾಯಕ ಪಿ.ಸಿ.ಜಾರ್ಜ್ ಅವರನ್ನು ತಿರುವನಂತಪುರ ಪೋರ್ಟ್ ಪೊಲೀಸರು ವಶಕ್ಕೆ ಪಡೆದರು. ಶುಕ್ರವಾರ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುವಾಗ ಮುಸ್ಲಿಂ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಭಾಷಣ ಮಾಡಿದ್ದು, ಈ ಕುರಿತು ಪ್ರಕರಣ ದಾಖಲಾಗಿತ್ತು.

ಇಂದು ಮುಂಜಾನೆ 5 ಗಂಟೆಗೆ ಎರಟ್ಟುಪೆಟ್ಟದಲ್ಲಿರುವ ತಮ್ಮ ನಿವಾಸದಲ್ಲಿ ಪಿ.ಸಿ.ಜಾರ್ಜ್ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಡಿಜಿಪಿ ಅನಿಲ್ ಕಾಂತ್ ಸೂಚನೆಯನ್ವಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಆರೋಪಿ ಶಾಸಕರ ವಿರುದ್ಧ ಹಲವು ಸಂಘಟನೆಗಳು ದೂರು ನೀಡಿದ್ದವು.

ಹೇಳಿದ್ದೇನು?: ಶುಕ್ರವಾರ ನಡೆದ ಅನಂತಪುರಿ ಹಿಂದೂ ಮಹಾ ಸಮ್ಮೇಳನದ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ್ದ ಜಾರ್ಜ್, 'ಕೇರಳದಲ್ಲಿರುವ ಮುಸ್ಲಿಮೇತರರು ಮುಸ್ಲಿಂ ಸಮುದಾಯದವರು ನಡೆಸುತ್ತಿರುವ ರೆಸ್ಟೋರೆಂಟ್‌ಗಳಿಗೆ ತೆರಳಬೇಡಿ. ತಿರುವನಂತಪುರಂನಲ್ಲಿರುವ ಎಂ.ಎ.ಯೂಸಫಲಿ ಅವರ ಮಾಲ್‌ಗೆ ಹಿಂದೂಗಳು ಹೋಗಬೇಡಿ' ಎಂದಿದ್ದರು.

ಯೂತ್ ಲೀಗ್, ಡಿವೈಎಫ್‌ಐ, ವೆಲ್ಫೇರ್ ಪಾರ್ಟಿ ಮತ್ತು ಪಾಪ್ಯುಲರ್ ಫ್ರಂಟ್‌ನಂತಹ ಸಂಘಟನೆಗಳು ಪಿ.ಸಿ.ಜಾರ್ಜ್ ವಿರುದ್ಧ ದೂರು ದಾಖಲಿಸಿದ್ದವು. ಜಾರ್ಜ್ ರಾಜ್ಯದ ಧಾರ್ಮಿಕ-ಕೋಮು ಸೌಹಾರ್ದತೆಯನ್ನು ಕಲುಷಿತಗೊಳಿಸುವ ಭಾಷಣ ಮಾಡಿದ್ದಾರೆ. ಧಾರ್ಮಿಕ ವೈಷಮ್ಯ ಹರಡಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಮಾಜಿಗಳಿಗೆ ಚಾಟಿ ಬೀಸಿದ ಮಾಜಿಗಳು: ಪ್ರಧಾನಿ ಮೋದಿ ಆಡಳಿತಕ್ಕೆ ಸಮರ್ಥನೆ ಹೀಗಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.