ಮುಂಬೈ (ಮಹಾರಾಷ್ಟ್ರ): ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಶಿವಸೇನೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದ ರಿಮೋಟ್ ಕಂಟ್ರೋಲ್ ಎಂದು ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಹೇಳಿದ್ದಾರೆ. ಮಹಾರಾಷ್ಟ್ರ ರಾಜಕೀಯ ಒಕ್ಕೂಟದಲ್ಲಿ ಎರಡನೇ ಅತಿ ದೊಡ್ಡ ಪಕ್ಷ ಎನ್ಸಿಪಿಯಾಗಿದ್ದು, ಶಿವಸೇನೆ, ಕಾಂಗ್ರೆಸ್, ಎನ್ಸಿಪಿ ಮೈತ್ರಿಯನ್ನು ನಿಯಂತ್ರಿಸುತ್ತದೆ.
ಈ ಕುರಿತು ಪ್ರತಿಕ್ರಿಯಿಸಿದ ನಾನಾ ಪಟೋಲೆ, ಪವಾರ್ ಈ ಎಂವಿಎ ಸರ್ಕಾರದ ರಿಮೋಟ್ ಕಂಟ್ರೋಲ್. ನವೆಂಬರ್ನಲ್ಲಿ ಅಧಿಕಾರಕ್ಕೆ ಬಂದ ಈ ಸರ್ಕಾರದ ಕರ್ತೃ ಅವರೇ ಎಂದು ಪರಿಗಣಿಸಲಾಗಿದೆ ಎಂದರು.
ಈ ಹಿಂದೆ ಪಟೋಲೆ, ಶರದ್ ಪವಾರ್ ನೇತೃತ್ವದ ಎನ್ಸಿಪಿಯನ್ನು ದೂಷಿಸಿದ್ದರು. ಅಲ್ಲದೇ ನಾವೀಗಾಗಲೇ ಮೋಸ ಹೋಗಿದ್ದೇವೆ. ಮುಂದಿನ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಇದೀಗ ಶರದ್ ಪವಾರ್ ಅವರನ್ನೇ ಹೊಗಳಿ ಅಚ್ಚರಿಗೆ ಕಾರಣವಾಗಿದ್ದಾರೆ.
ಯಾವುದೇ ಸಾಂವಿಧಾನಿಕ ಹುದ್ದೆ ಹೊಂದಿರುವ ವ್ಯಕ್ತಿಯ ಪ್ರಭಾವವನ್ನು ಒತ್ತಿ ಹೇಳಲು ಈ ರಿಮೋಟ್ ಕಂಟ್ರೋಲ್ ಎಂಬ ಪದ ಬಳಸಲಾಗುತ್ತಿದೆ. 1995-99 ರ ಅವಧಿಯಲ್ಲಿ ಶಿವಸೇನಾ ಸಂಸ್ಥಾಪಕ, ದಿವಂಗತ ಬಾಲ್ ಠಾಕ್ರೆಗೆ ಮೊದಲ ಬಾರಿಗೆ ಈ ಪದ ಬಳಸಲಾಗಿತ್ತು.
ಇದನ್ನೂ ಓದಿ:ಪಂಜಾಬ್ ಕಾಂಗ್ರೆಸ್ ಸಾರಥ್ಯ ವಹಿಸಲಿದ್ದಾರಾ ನವಜೋತ್ ಸಿಂಗ್ ಸಿಧು?