ETV Bharat / bharat

ಬಂಧನದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್‌ ನಾಯಕ ಪವನ್​ ಖೇರಾಗೆ ಮಧ್ಯಂತರ ಜಾಮೀನು

author img

By

Published : Feb 23, 2023, 7:43 PM IST

ಪವನ್ ಖೇರಾ ಅವರಿಗೆ ಮಧ್ಯಂತರ ಜಾಮೀನು ನೀಡಿರುವ ಸುಪ್ರೀಂ ಕೋರ್ಟ್ ಫೆಬ್ರವರಿ 28 ರಂದು ಮುಂದಿನ ವಿಚಾರಣೆ ನಡೆಸಲಿದೆ.

Pawan Khera was granted interim bail
ಬಂಧನವಾದ ಕೆಲವೇ ಗಂಟೆಗಳಲ್ಲಿ ಪವನ್​ ಖೇರಾಗೆ ಮಧ್ಯಂತರ ಜಾಮೀನು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಮಾನಿಸಿದ ಪ್ರಕರಣದಲ್ಲಿ ಇಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾದ ಕೆಲವೇ ಗಂಟೆಗಳ ನಂತರ ಕಾಂಗ್ರೆಸ್​ ನಾಯಕ ಪವನ್​ ಖೇರಾ ಅವರಿಗೆ ಸುಪ್ರೀಂ ಕೋರ್ಟ್​ ಮಧ್ಯಂತರ ಜಾಮೀನು ನೀಡಿದೆ. ಜಾಮೀನು ಕೋರಿ ಅರ್ಜಿ ಸಲ್ಲಿಸುವವರೆಗೂ ಮಧ್ಯಂತರ ಜಾಮೀನು ನೀಡುವಂತೆ ದ್ವಾರಕ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್​ ಆದೇಶ ನೀಡಿದೆ. ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠವು ಮುಂದಿನ ಮಂಗಳವಾರ ಫೆಬ್ರವರಿ 28 ರಂದು ಪ್ರಕರಣದ ವಿಚಾರಣೆ ನಡೆಸಲಿದೆ.

"ಮಾತುಕತೆಯ ಅವಶ್ಯಕತೆ ಇದೆ, ನಾವು ನಿಮ್ಮನ್ನು ರಕ್ಷಿಸುತ್ತಿದ್ದೇವೆ" ಎಂದು ಪವನ್​ ಖೇರ್ ಅವರಿಗೆ ಮುಂದಿನ ವಿಚಾರಣೆಯವರೆಗೆ ಅಂದರೆ ಮಂಗಳವಾರದವರೆಗೆ ಮಧ್ಯಂತರ ಜಾಮೀನು ನೀಡುವ ವೇಳೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್​ ಹೇಳಿದರು. ಉತ್ತರ ಪ್ರದೇಶ ಮತ್ತು ಅಸ್ಸಾಂನಲ್ಲಿ ಖೇರಾ ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಕ್ಲಬ್ ಮಾಡುವಂತೆ ಕಾಂಗ್ರೆಸ್ ಸಲ್ಲಿಸಿದ ಮನವಿಗೆ ನ್ಯಾಯಾಲಯ ಸಮ್ಮತಿ ಸೂಚಿಸಿದೆ.

ಸಿಜೆಐ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಪಿ.ವಿ.ನರಸಿಂಹ ಅವರನ್ನೊಳಗೊಂಡ ತ್ರಿಸದಸ್ಯ ಪೀಠದ ಮುಂದೆ ಪ್ರಕರಣ ಮಂಡಿಸಿ, ಖೇರಾ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ, ಕಾಂಗ್ರೆಸ್ ವಕ್ತಾರರು ತಾವಯ ಆಡಿರುವ ಮಾತುಗಳಿಗೆ ಈಗಾಗಲೇ ಬೇಷರತ್ ಕ್ಷಮೆ ಯಾಚಿಸಿದ್ದಾರೆ ಮತ್ತು ಭಾಷೆಯ ಬಳಕೆ ತಪ್ಪಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ವಾದ ಮಂಡಿಸಿದರು.

ದೇಶಾದ್ಯಂತ ಅನೇಕ ಎಫ್‌ಐಆರ್‌ಗಳು ದಾಖಲಾಗಿರುವ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಾಂಘ್ವಿ, "ಅಸ್ಸಾಂ ಪೊಲೀಸರು ದೆಹಲಿ ವಿಮಾನ ನಿಲ್ದಾಣದಲ್ಲಿ ಪವನ್​ ಖೇರಾ ಅವರನ್ನು ಬೆಳಗ್ಗೆ 11 ಗಂಟೆ ಸುಮಾರಿಗೆ ಬಂಧಿಸಿದರು. ಹೇಳಿಕೆಗಳು ಏನೇ ಇರಲಿ, ಆದರೆ ಅದು ಬಂಧನಕ್ಕೆ ಕಾರಣವಾಗಬಾರದು" ಎಂದು ಇಂದು ನಡೆದ ವಿಚಾರಣೆಯಲ್ಲಿ ತ್ರಿಸದಸ್ಯ ಪೀಠಕ್ಕೆ ಹೇಳಿದರು.

ಪವನ್​ ಖೇರಾ ಅವರು ದೆಹಲಿ ವಿಮಾನ ನಿಲ್ದಾಣದಿಂದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಸಭೆಗಾಗಿ ರಾಯ್‌ಪುರಕ್ಕೆ ಹೋಗಲು ವಿಮಾನವೇರಲು ಹೋಗುತ್ತಿದ್ದಾಗ ಅಸ್ಸಾಂ ಪೊಲೀಸರು ಅವರನ್ನು ಬಂಧಿಸಿದ್ದರು. ಖೇರಾ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ ನಂತರ ಸುಮಾರು 50 ಕಾಂಗ್ರೆಸ್​ ನಾಯಕರು ವಿಮಾನ ನಿಲ್ದಾಣದ ಟಾರ್ಮ್ಯಾಕ್​ನಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದರು.

ಇತ್ತೀಚಿನ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್​ ವಕ್ತಾರ ಪವನ್​ ಖೇರಾ, ಅದಾನಿ-ಹಿಂಡೆನ್‌ಬರ್ಗ್ ಗಲಭೆ ಕುರಿತು ಸಂಸದೀಯ ತನಿಖೆಗೆ ಒತ್ತಾಯಿಸುವ ಭರದಲ್ಲಿ ಪ್ರಧಾನಿ ಮೋದಿಯವರ ಹೆಸರನ್ನು ಪ್ರಸ್ತಾಪಿಸಿದ್ದರು. "ನರಸಿಂಹರಾವ್ ಅವರು ಜೆಪಿಸಿ (ಜಂಟಿ ಸಂಸದೀಯ ಸಮಿತಿ) ರಚಿಸಬಹುದಾದರೆ, ಅಟಲ್ ಬಿಹಾರಿ ವಾಜಪೇಯಿ ಅವರು ಜೆಪಿಸಿ ರಚಿಸಬಹುದಾದರೆ, ನರೇಂದ್ರ ಗೌತಮ್ ದಾಸ್.. ಕ್ಷಮಿಸಿ ದಾಮೋದರದಾಸ್.. ಮೋದಿಗೆ ಏನು ಸಮಸ್ಯೆ?" ಎಂದು ಕೇಳಿದ್ದರು. ಅದು ಅವರು ಬಾಯಿ ತಪ್ಪಿ ಆಡಿದ ಮಾತುಗಳು. ತಪ್ಪಾಗಿರುವ ಬಗ್ಗೆ ಅವರು ಈಗಾಗಲೇ ಕ್ಷಮೆಯಾಚಿಸಿದ್ದಾರೆ" ಎಂದು ಖೇರಾ ವಕೀಲರು ಪೀಠಕ್ಕೆ ವಿವರಿಸಿದರು. ಪವನ್​ ಖೇರಾ ಅವರು ಮಾತನಾಡಿರುವ ವೀಡಿಯೋವನ್ನು ಪದೇ ಪದೇ ನೋಡಿದ ಮುಖ್ಯ ನ್ಯಾಯಮೂರ್ತಿಗಳು, ಇದು ಹೇಗೆ ‘ಧಾರ್ಮಿಕ ಅಸಂಗತ’ ಪ್ರಕರಣ ಎಂದು ಪ್ರಶ್ನಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ಮೋದಿ ಹೆಸರನ್ನು ತಪ್ಪಾಗಿ ಉಚ್ಛರಿಸಿರುವುದು ಮಾತ್ರವಲ್ಲದೆ ಅದನ್ನೇ ಟ್ವೀಟ್​ನಲ್ಲಿ ಕೂಡ ಬರೆದುಕೊಂಡಿದ್ದ ಪವನ್​ ಖೇರಾ ಕೆಲವು ದಿನಗಳಿಂದ ವಿವಾದ ಕೇಂದ್ರವಾಗಿದ್ದಾರೆ. ಅಂದಿನಿಂದ ಕೇಸರಿಪಡೆ ಪವನ್​ ಖೇರಾ ಬಂಧನಕ್ಕೆ ಒತ್ತಾಯಿಸುತ್ತಲೇ ಬಂದಿತ್ತು. ಫೆಬ್ರವರಿ 20 ರಂದು ಲಕ್ನೋದ ಹಜರತ್‌ಗಂಜ್‌ನಲ್ಲಿ ದೂರು ದಾಖಲಾಗಿದ್ದು, 153ಎ, 500, 504 ಐಪಿಸಿ ಅಪರಾಧಗಳಿಗೆ ಅದನ್ನು ಎಫ್‌ಐಆರ್ ಆಗಿ ಪರಿವರ್ತಿಸಲಾಗಿದೆ. ವಾರಣಾಸಿಯಲ್ಲಿ ಮತ್ತೊಂದು ಎಫ್‌ಐಆರ್ ದಾಖಲಿಸಲಾಗಿದೆ.

ಇದನ್ನೂ ಓದಿ: ಅದಾನಿ ವಿಚಾರದಲ್ಲಿ ಪ್ರಧಾನಿಗಳೇ ನೀವು ಮೌನಿ ಬಾಬಾ ಆಗಿದ್ದೇಕೆ?: ಮೋದಿ ಪ್ರಶ್ನಿಸಿದ ಮಲ್ಲಿಕಾರ್ಜುನ ಖರ್ಗೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.