ETV Bharat / bharat

ಎನ್​ಡಿಎ ಮೈತ್ರಿಕೂಟದಿಂದ ಜನಸೇನಾ ಹೊರಬರುವ ಬಗ್ಗೆ ವೈಎಸ್​ಆರ್​ ಕಾಂಗ್ರೆಸ್​ನಿಂದ ಅಪಪ್ರಚಾರ: ಪವನ್​ ಕಲ್ಯಾಣ್ - ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ

Pawan Kalyan on NDA Alliance: ಎನ್‌ಡಿಎ ಮೈತ್ರಿಕೂಟದಿಂದ ಹೊರಬರುವ ಅಗತ್ಯ ಬಿದ್ದರೆ, ಅದನ್ನು ನಾನೇ ತಿಳಿಸುತ್ತೇನೆ ಎಂದು ಆಂಧ್ರಪ್ರದೇಶದ ಜನಸೇನಾ ಪಕ್ಷದ ಅಧ್ಯಕ್ಷ, ನಟ ಪವನ್​ ಕಲ್ಯಾಣ್ ತಿಳಿಸಿದ್ದಾರೆ.

Etv Bharat
Etv Bharat
author img

By ETV Bharat Karnataka Team

Published : Oct 6, 2023, 12:43 PM IST

ಕೃಷ್ಣಾ (ಆಂಧ್ರ ಪ್ರದೇಶ): ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟದಿಂದ ಜನಸೇನಾ ಪಕ್ಷ ಹೊರ ಬರಲು ನಿರ್ಧರಿಸಿದೆ ಎಂಬ ಊಹಾಪೋಹಗಳ ಬಗ್ಗೆ ಸ್ವತಃ ಪಕ್ಷದ ಅಧ್ಯಕ್ಷ, ನಟ ಪವನ್​ ಕಲ್ಯಾಣ್ ಸ್ಪಷ್ಟನೆ ನೀಡಿದ್ದಾರೆ. ನಾವು ಎನ್​ಡಿಎ ಮೈತ್ರಿಕೂಟದಿಂದ ನಾವು ಹೊರಬಂದಿದ್ದೇವೆ ಎಂದು ಆಡಳಿತಾರೂಢ ವೈಎಸ್​ಆರ್​ ಕಾಂಗ್ರೆಸ್​ ಪಕ್ಷದ ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಮುದಿನೆಪಲ್ಲಿ ಮಂಡಲದಲ್ಲಿ ಗುರುವಾರ ನಡೆದ 'ವರಾಹಿ ಯಾತ್ರೆ'ಯಲ್ಲಿ ಮಾತನಾಡಿದ ಪವನ್ ಕಲ್ಯಾಣ್​, ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿರುದ್ಧ ತಮ್ಮ ವಾಗ್ದಾಳಿ ಮುಂದುವರೆಸಿದರು. ಸರಿಯಾಗಿ ಒಂದು ರಸ್ತೆಯನ್ನೂ ಮಾಡಿಸಲಾಗದ ಸಿಎಂ ಜಗನ್​ ಮತ್ತೊಮ್ಮೆ ತಮಗೆ ಅಧಿಕಾರ ನೀಡಬೇಕೆಂದು ಹೇಗೆ ಕೇಳುತ್ತಾರೆ?. 2024ರಲ್ಲಿ ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ ಪಕ್ಷ (ಟಿಡಿಪಿ) ಹಾಗೂ ಜನಸೇನಾ ಪಕ್ಷದ ಸರ್ಕಾರದ ಅಧಿಕಾರಕ್ಕೆ ಬರುತ್ತದೆ ಎಂದು ಪವನ್​ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: Janasena and TDP alliance: ಆಂಧ್ರ ಪ್ರದೇಶದ ಚುನಾವಣೆಗೆ ಜನಸೇನಾ-ಟಿಡಿಪಿ ಮೈತ್ರಿ.. ಪವನ್ ಕಲ್ಯಾಣ್ ಘೋಷಣೆ

ಇದೇ ವೇಳೆ, ನಾವು (ಜನಸೇನಾ) ಎನ್‌ಡಿಎ ಮೈತ್ರಿಕೂಟದಿಂದ ಹೊರಬರುವ ಅಗತ್ಯ ಬಿದ್ದರೆ, ಇದನ್ನು ಮೊದಲಿಗೆ ಜಗನ್ ಮತ್ತು ಇತರ ವೈಎಸ್‌ಆರ್‌ಸಿಪಿ ನಾಯಕರಿಗೆ ತಿಳಿಸುತ್ತೇನೆ. ನಾವು ಎನ್‌ಡಿಎ ಜೊತೆ ಇದ್ದರೆ ನಿಮಗೇನು?... ಅದರಿಂದ ಹೊರ ಬಂದರೆ ನಿಮಗೇನು?. ನೀವು ನಿಮ್ಮ ಪಕ್ಷದ ಬಗ್ಗೆ ಕಾಳಜಿ ವಹಿಸಿ. ನಮ್ಮ ಬಗ್ಗೆ ನಿಮಗೆ ಭಯವೇಕೆ ಹೇಳಿ. ನಮ್ಮನ್ನು ಕಂಡು ನೀವು ಭಯಪಡುತ್ತೀರಿ ಎಂದರೆ, ನೀವು ದುರ್ಬಲಗೊಳ್ಳುತ್ತಿದ್ದೀರಿ ಎಂದೇ ಅರ್ಥ ಎಂದು ಜನಸೇನಾ ನಾಯಕ ವಾಗ್ಬಾಣ ಬಿಟ್ಟರು.

ಮುಂದುವರೆದು ಮಾತನಾಡಿದ ಪವನ್ ಕಲ್ಯಾಣ್, ಮುಂಬರುವ ಚುನಾವಣೆಯಲ್ಲಿ ನೀವು (ವೈಎಸ್​ಆರ್​ ಕಾಂಗ್ರೆಸ್​ ಪಕ್ಷ) ಗೆಲುವು ಸಾಧಿಸುವ ಬಗ್ಗೆ ನಮಗೆ ನಂಬಿಕೆ ಏನಿದೆ?. 175ಕ್ಕೆ 175 ಸ್ಥಾನಗಳನ್ನು ಗಳಿಸುವುದು ಹೇಗೆ ಎಂದು ಯೋಚಿಸಿ. ನಾವು ಅಧಿಕಾರಕ್ಕೆ ಬಂದು ಬಳಿಕ ನೀವು ಓಡಿ ಹೋಗುವ ಬದಲು ನಮ್ಮ ಪಕ್ಷದ ಕಚೇರಿಯಲ್ಲಿ ಇದ್ದರೆ ಸಾಕು ಎಂದು ಕುಟುಕಿದರು.

ಕೌಶಲ್ಯಾಭಿವೃದ್ಧಿ ಹಗರಣ ಪ್ರಕರಣದಲ್ಲಿ ಟಿಡಿಪಿ ಅಧ್ಯಕ್ಷ, ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಲಾಗಿದೆ. ಈ ಬೆಳವಣಿಗೆ ನಂತರ ಟಿಡಿಪಿ ಹಾಗೂ ಜನಸೇನಾ ಜಂಟಿಯಾಗಿ ವೈಎಸ್​ಆರ್​ ಕಾಂಗ್ರೆಸ್​ ಪಕ್ಷ ವಿರುದ್ಧ ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿವೆ. ಇದರ ಭಾಗವಾಗಿಯೇ ಮುಂಬರುವ ಚುನಾವಣೆಯಲ್ಲಿ ಒಟ್ಟಿಗೆ ಸ್ಪರ್ಧೆ ಮಾಡುವ ನಿರ್ಧಾರವನ್ನು ಪವನ್​ ಪ್ರಕಟಿಸಿದ್ದರು.

ಇದರ ನಡುವೆ ಇತ್ತೀಚೆಗೆ ಟಿಡಿಪಿ ಮತ್ತು ಚಂದ್ರಬಾಬು ನಾಯ್ಡು ಅವರನ್ನು ಬೆಂಬಲಿಸುವ ಸಲುವಾಗಿ ಎನ್​ಡಿಎ ಮೈತ್ರಿಕೂಟದಿಂದ ಜನಸೇನಾ ಪಕ್ಷದ ಹೊರ ಬರಲು ನಿರ್ಧರಿಸಿದೆ ಎಂದು ಹೇಳಲಾಗಿತ್ತು. ಇದರ ಬೆನ್ನಲ್ಲೇ, ಪವನ್​ ಕಲ್ಯಾಣ್ ಅವರಿಂದ ಹೇಳಿಕೆ ಹೊರ ಬಂದಿದೆ. ಈ ಹಿಂದೆ ಜುಲೈ 18ರಂದು ದೆಹಲಿಯಲ್ಲಿ ನಡೆದ ಎನ್‌ಡಿಎ ಮೈತ್ರಿಕೂಟದ ನಾಯಕರ ಸಭೆಯಲ್ಲಿ ಪವನ್ ಕಲ್ಯಾಣ್ ಕೂಡ ಭಾಗವಹಿಸಿದ್ದರು.

ಇದನ್ನೂ ಓದಿ: ಟಿಡಿಪಿ ಬೆಂಬಲಿಸಲು ಎನ್‌ಡಿಎಯಿಂದ ಹೊರ ಬಂದಿದ್ದೇನೆ: ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.