ಹೈದರಾಬಾದ್: ಸೂಪರ್‌ಸ್ಟಾರ್ ಶಾರುಖ್ ಖಾನ್ ಅಭಿನಯದ ಪಠಾಣ್ ಚಿತ್ರದ ಓಟದ ಅಬ್ಬರ ಮುಂದುವರಿದಿದೆ. ಬಾಹುಬಲಿ 2 ಚಿತ್ರದ ಬಾಕ್ಸ್ ಆಫೀಸ್ ದಾಖಲೆ ಛಿದ್ರ ಮಾಡಿ, ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಪಠಾಣ್ ಅತಿಹೆಚ್ಚು ಗಳಿಕೆ ಮಾಡಿದ ಹಿಂದಿ ಚಿತ್ರವಾಗಿ ಹೊರಹೊಮ್ಮಿದೆ.
ಭಾರತೀಯ ಚಿತ್ರರಂಗದಲ್ಲಿ ಎಸ್ ಎಸ್ ರಾಜಮೌಳಿ ಅವರು ನಿರ್ಮಿಸಿದ ಬಾಹುಬಲಿ ದಿ ಕನ್‌ಕ್ಲೂಷನ್‌ನ ಡಬ್ಬಿಂಗ್ ಹಿಂದಿ ಆವೃತ್ತಿಯು ಒಟ್ಟು ರೂ 510.99 ಕೋಟಿ ಸಂಗ್ರಹದೊಂದಿಗೆ ಅಗ್ರಸ್ಥಾನ ಪಡೆದಿತ್ತು. ಆದರೆ ಪಠಾಣ್ ಚಿತ್ರ 511.22 ಕೋಟಿ ರೂ ಗಳಿಕೆ ಮಾಡುವುದರೊಂದಿಗೆ ದಾಖಲೆಯನ್ನು ಬ್ರೇಕ್ ಮಾಡಿದೆ.
ನಾಲ್ಕನೇ ಶನಿವಾರವೂ ಬಾಕ್ಸ್ ಆಫೀಸ್‌ನಲ್ಲಿ ಪಠಾಣ್ ಚಿತ್ರದ ಹವಾ ಇನ್ನೂ ಕಡಿಮೆ ಆಗಿಲ್ಲ ಅನಿಸುತ್ತಿದೆ. ಸಿನಿಮಾ ನಿರ್ಮಾಪಕರು ಶುಕ್ರವಾರ ಮತ್ತು ಶನಿವಾರ ದಿನ ಟಿಕೆಟ್ ದರದಲ್ಲಿ ಇಳಿಕೆ ಮಾಡಿದ್ದರ ತಂತ್ರದ ಪರಿಣಾಮ ಪಠಾಣ್ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಬರುತ್ತಿದ್ದು, ಸಿನಿಮಾ ತಂಡಕ್ಕೆ ಸಕಾರಾತ್ಮಕ ಫಲಿತಾಂಶಗಳು ಗೋಚರಿಸುತ್ತಿವೆ. ಸಿದ್ಧಾರ್ಥ್ ಆನಂದ್ ಅವರ ನಿರ್ದೇಶನದ ಪಠಾಣ್ ಚಿತ್ರ ಬಿಡುಗಡೆಗೊಂಡು 25 ನೇ ದಿನಕ್ಕೆ 988 ಕೋಟಿ ರೂ.ಗಳನ್ನು ಗಳಿಕೆ ಮಾಡಿ, ಹೊಸ ದಾಖಲೆ ಸೃಷ್ಟಿಸಿದೆ.
ಬಾಲಿವುಡ್ ಹಿಂದಿ ಅವತರಣಿಕೆಯಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ್ದ ತೆಲುಗು ಮೂಲ ಬಾಹುಬಲಿ 2 ಚಿತ್ರವನ್ನೂ ಸಹ ಹಿಂದಿಕ್ಕಿದ ಪಠಾಣ್ ಅತಿ ಹೆಚ್ಚು ಗಳಿಕೆ ಮಾಡುವುದರೊಂದಿಗೆ ಮುನ್ನುಗ್ಗಿದೆ ಎಂದು ಪಠಾಣ್ ಬಾಕ್ಸ್ ಆಫೀಸ್ ಅಪ್ಡೇಟ್ನ್ನೂ ಯಶ್ ರಾಜ್ ಫಿಲ್ಮ್ಸ್ (YRF) ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ನಾಲ್ಕನೇ ವಾರಾಂತ್ಯದಲ್ಲೂ ಈ ಚಿತ್ರವು ವಿಶ್ವದಾದ್ಯಂತ ರೂ 988 ಕೋಟಿ ಗಳಿಕೆ ಮಾಡಿದೆ ಎಂದು ಹೇಳಿಕೊಂಡಿದೆ.
- " class="align-text-top noRightClick twitterSection" data="
">
ಚಿತ್ರದ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಪ್ರಕಾರ, ಪಠಾಣ್ ಚಿತ್ರ ಇನ್ನೂ ವೀಕ್ಷಕರ ಮನಸ್ಸನ್ನು ಕದಿಯುವ ಜತೆಗೆ ಅಬ್ಬರದ ನಾಗಾಲೋಟದಲ್ಲಿ ಮುಂದುವರೆದಿದೆ. ಪಠಾಣ್ ತನ್ನ 25 ನೇ ದಿನದಲ್ಲಿ ಭಾರತದಲ್ಲಿ ರೂ 511.22 ಕೋಟಿ ನಿವ್ವಳ ದಾಖಲಿಸಿದರೆ, ದೇಶಿಯ ಒಟ್ಟು ಬಾಕ್ಸ್ ಆಫೀಸ್ ರೂ 616 ಕೋಟಿಯ ಆಜುಬಾಜಿನಲ್ಲಿದೆ. ಇನ್ನು ಸಾಗರೋತ್ತರ ಪ್ರದೇಶಗಳಲ್ಲಿ 372 ಕೋಟಿ ರೂ.ಗಳಿಕೆ ಮಾಡಿದೆ ಎಂದು ತಿಳಿಸಿದ್ದಾರೆ.
ಫ್ಯಾಮಿಲಿ ಎಂಟರ್ಟೈನರ್ ಶೆಹಜಾದಾ ಮತ್ತು ಹಾಲಿವುಡ್ ಚಲನಚಿತ್ರ ಆಂಟ್-ಮ್ಯಾನ್ ಅಂಡ್ ದಿ ವಾಸ್ಪ್: ಕ್ವಾಂಟುಮೇನಿಯಾ ಚಿತ್ರ ಬಿಡುಗಡೆಗೊಂಡು ತೆರೆಗೆ ಬಂದರೂ, ಗಲ್ಲಾಪೆಟ್ಟಿಗೆಯಲ್ಲಿ ಪಠಾಣ್‌ನ ಹಿಡಿತವು ಇನ್ನೂ ಕುಸಿಯುತ್ತಿಲ್ಲ. ಆದಾಗ್ಯೂ ಪ್ರದರ್ಶಕರು ಟಿಕೆಟ್ ದರಗಳನ್ನು ಕಡಿತಗೊಳಿಸಿದ ಬಳಿಕವಂತೂ ಪ್ರೇಕ್ಷಕರ ಬೇಡಿಕೆಯ ಮೇರೆಗೆ ಪಠಾಣ್ ಪ್ರದರ್ಶನಗಳನ್ನು ಸಹ ಹೆಚ್ಚಿಸಲಾಗಿದೆ. ಪಠಾಣ್ ಓಟ ದಿಗ್ಭ್ರಮೆಗೊಳಿಸುವ ರೀತಿ ಶರವೇಗದಲ್ಲಿ ಹೋಗುವಾಗ , SRK ತನ್ನ ಲಯಕ್ಕೆ ಮರಳಿದ್ದಾರೆ ಅನಿಸುತ್ತಿದೆ.
ಪಠಾಣ್ ವಿವಾದ: ಸಿನಿಮಾ ಬಿಡುಗಡೆ ಆದ ಹೊತ್ತಲ್ಲೂ ಹಲವೆಡೆ ಆಕ್ರೋಶ ಪ್ರತಿಭಟನೆಗಳು ಪಠಾಣ್ಗೆ ಮುಳುವಾಗಿದ್ದವು. ಆರಂಭದಿಂದ ಆದ್ರೆ ಚಿತ್ರದ ಯಶಸ್ಸು ಮಾತ್ರ ಅಭೂತಪೂರ್ವ ದಾಖಲೆಯತ್ತ ಸಾಗಿದೆ. ಪಠಾಣ್ ಕಲೆಕ್ಷನ್ ಕೇಳಿ ಅಭಿಮಾನಿಗಳು ಸೇರಿದಂತೆ ಚಿತ್ರರಂಗದವರೂ ಹುಬ್ಬೇರಿಸಿದ್ದಾರೆ. ಜನವರಿ 25ರಂದು ತೆರೆಕಂಡ ಈ ಸಿನಿಮಾ ಈವರೆಗೆ ಜಗತ್ತಿನಾದ್ಯಂತ 988 ಕೋಟಿ ಗಳಿಕೆ ಮಾಡಿ ಬಾಹುಬಲಿ 2 ದಾಖಲೆಯನ್ನೂ ಅಳಿಸಿಹಾಕಿದೆ.
ಇದನ್ನೂಓದಿ:'ವೇಶ್ಯೆಯರು ರಾಣಿಯರಾಗಿದ್ದ ಜಗತ್ತು..': ಹೀರಾಮಂಡಿಯಲ್ಲಿ ಮಿನುಗಿದ ಸೋನಾಕ್ಷಿ, ಕೊಯಿರಾಲಾ