ETV Bharat / bharat

ಹೇಮಕುಂಡ ಹಿಮ ಕುಸಿತ.. ಐವರ ರಕ್ಷಣೆ, ನಾಪತ್ತೆಯಾದ ಮಹಿಳೆಗಾಗಿ ತೀವ್ರ ಶೋಧ - ಹೇಮಕುಂಡ ಯಾತ್ರೆ ಮಾರ್ಗ

ಹೇಮಕುಂಡ ಯಾತ್ರೆ ಮಾರ್ಗದಲ್ಲಿ ಹಿಮಕುಸಿತ ಸಂಭವಿಸಿದೆ. ಹಿಮ ಕುಸಿತದ ಮಾಹಿತಿ ಪಡೆದ ರಕ್ಷಣಾ ತಂಡ, ಅಪಾಯಕ್ಕೆ ಸಿಲುಕಿದವರನ್ನು ಕಾಪಾಡುವಲ್ಲಿ ಯಶಸ್ವಿಯಾಗಿದೆ.

ಹೇಮಕುಂಡ ಹಿಮ ಕುಸಿತ.. ಐವರ ರಕ್ಷಣೆ, ನಾಪತ್ತೆಯಾದ ಮಹಿಳೆಗಾಗಿ ತೀವ್ರ ಶೋಧ

author img

By

Published : Jun 5, 2023, 9:33 AM IST

ಚಮೋಲಿ (ಉತ್ತರಾಖಂಡ): ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದ ಸಮೀಪದಲ್ಲಿ ಹಿಮ ಕುಸಿತದಿಂದ ಅಪಾಯಕ್ಕೆ ಸಿಲುಕಿದ ಐವರನ್ನು ಕಾಪಾಡುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿದೆ. ಇಲ್ಲಿನ ಹೇಮಕುಂಡ್‌ನಲ್ಲಿ ಮಂಜುಗಡ್ಡೆ ಒಡೆದ ಪರಿಣಾಮ ಐವರು ಪ್ರಯಾಣಿಕರು ಅಪಾಯಕ್ಕೆ ಸಿಲುಕಿಕೊಂಡಿದ್ದರು. ಘಟನೆಯ ಬಗ್ಗೆ ಮಾಹಿತಿ ಪಡೆದ ಎಸ್‌ಡಿಆರ್‌ಎಫ್ ಮತ್ತು ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿತ್ತು.

ರಕ್ಷಣಾ ತಂಡ ಅಪಾಯಕ್ಕೆ ಸಿಲುಕಿದ್ದ ಎಲ್ಲರನ್ನೂ ಸುರಕ್ಷಿತವಾಗಿ ಹೊರಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದೆ. ಅಪಾಯದಿಂದ ರಕ್ಷಿಸಲಾದ ಐವರನ್ನು ಸುರಕ್ಷಿತವಾಗಿ ಘಂಗಾರಿಯಾ ಗುರುದ್ವಾರಕ್ಕೆ ಕಳುಹಿಸಿ ಕೊಡಲಾಗಿದೆ. ಈ ನಡುವೆ ಮಹಿಳಾ ಭಕ್ತೆಯೊಬ್ಬರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ತಡರಾತ್ರಿಯವರೆಗೂ ಶೋಧ ಕಾರ್ಯ ನಡೆದಿದ್ದು, ಕತ್ತಲೆ ಆವರಿಸಿದ್ದರಿಂದ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಇಂದು ಮತ್ತೆ ಶೋಧ ಕಾರ್ಯ ಮುಂದುವರೆಸಲಾಗಿದೆ.

passengers-hit-by-avalanche-on-hemkund-sahib-yatra-route
ಹೇಮಕುಂಡ ಹಿಮ ಕುಸಿತ.. ಐವರ ರಕ್ಷಣೆ, ನಾಪತ್ತೆಯಾದ ಮಹಿಳೆಗಾಗಿ ತೀವ್ರ ಶೋಧ

ಹೇಮಕುಂಡ್ ಸಾಹಿಬ್ ಯಾತ್ರಾ ಮಾರ್ಗದಲ್ಲಿ ಅಟ್ಲಜೋಡಿ ಬಳಿ ಹಿಮಕುಸಿತದಿಂದಾಗಿ ಈ ಘಟನೆ ನಡೆದಿತ್ತು. ಈ ಮಧ್ಯೆ ಹಿಮಕುಸಿತದಲ್ಲಿ ಇನ್ನೂ ಯಾರಾದರೂ ಅಪಾಯಕ್ಕೆ ಸಿಲುಕಿದ್ದರೆ ಅಂತಹವರು ದಯವಿಟ್ಟು ತಿಳಿಸಿ ಎಂದು ರಕ್ಷಣಾ ತಂಡ ಭಕ್ತರಲ್ಲಿ ಹಾಗೂ ಪ್ರವಾಸಿಗರಲ್ಲಿ ಮನವಿ ಮಾಡಿದೆ.

ಇದ್ದಕ್ಕಿದ್ದಂತೆ ಹಿಮಗಡ್ಡೆ ಒಡೆದಿದ್ದರಿಂದ ಐವರು ಪ್ರಯಾಣಿಕರು ಜೀವ ಕಳೆದುಕೊಳ್ಳುವ ಅಪಾಯ ಇತ್ತು. ಆದರೆ ಸರಿಯಾದ ಸಮಯಕ್ಕೆ ಇವರಿಗೆ ರಕ್ಷಣಾ ತಂಡದ ಸಹಾಯ ಸಿಕ್ಕಿದ್ದರಿಂದ ಅವರೆಲ್ಲ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಿಮಪಾತದ ಘಟನೆಯ ನಂತರ, ಎಸ್‌ಡಿಆರ್‌ಎಫ್ ಮತ್ತು ಪೊಲೀಸ್ ಪಡೆ ತರಾತುರಿಯಲ್ಲಿ ಸ್ಥಳಕ್ಕೆ ತಲುಪಿತು. ತಕ್ಷಣವೇ ಕಾರ್ಯಪ್ರವೃತ್ತವಾದ ರಕ್ಷಣಾ ತಂಡ ಐವರನ್ನು ಕಾಪಾಡುವಲ್ಲಿ ಯಶಸ್ವಿಯಾಗಿತ್ತು. ಇನ್ನೂ ಕೆಲವು ಪ್ರಯಾಣಿಕರು ಹಿಮದಡಿಯಲ್ಲಿ ಹೂತು ಹೋಗಿರಬಹುದು ಎಂಬ ಆತಂಕವಿದೆ. ಹೀಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಎನ್​ಡಿಆರ್​ಎಫ್​ ಪಡೆ ಹೇಳಿದೆ.

ಅಲ್ಲಿನ ಎಸ್​​​ಪಿ ಘಟನೆ ಬಗ್ಗೆ ಹೇಳಿದ್ದಿಷ್ಟು: ಹೇಮಕುಂಡ್ ಸಾಹಿಬ್ ಯಾತ್ರೆ ಮಾರ್ಗದ ಅಟ್ಲಕೋಟಿ ಎಂಬಲ್ಲಿ ಹಿಮನದಿ ಪ್ರವಾಹದಿಂದ 5 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಚಮೋಲಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಮೇಂದ್ರ ಡೋಬಲ್ ಮಾಹಿತಿ ನೀಡಿದ್ದಾರೆ. ಇವರೆಲ್ಲರನ್ನು ರಕ್ಷಿಸಲಾಗಿದೆ. SDRF, ITBP ಯೋಧರು ಇನ್ನೂ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ ಎಂದು ಎಸ್​​ಪಿ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ:ಚಾರಣದ ವೇಳೆ ಹಿಮಚ್ಛಾದಿತ ಪರ್ವತದಲ್ಲಿ ಸಿಕ್ಕಿಬಿದ್ದ ಕರ್ನಾಟಕದ ಮಹಿಳೆ: 6 ಗಂಟೆಯ ಕಾರ್ಯಾಚರಣೆ ಮೂಲಕ ರಕ್ಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.