ETV Bharat / bharat

ವಿಮಾನ ಹಾರಾಟದ ವೇಳೆ ತುರ್ತು ದ್ವಾರ ತೆರೆಯಲು ಯತ್ನಿಸಿದ ಪ್ರಯಾಣಿಕ.. ಮುಂದೇನಾಯ್ತು?

author img

By

Published : Mar 27, 2021, 10:19 PM IST

ವಿಮಾನದಲ್ಲಿ ಕೋಪಗೊಂಡಿದ್ದ ಆತ ತುರ್ತು ದ್ವಾರ ತೆರೆಯಲು ಮುಂದಾಗಿದ್ದಾನೆ. ತಕ್ಷಣ ಎಚ್ಚೆತ್ತ ಸಿಬ್ಬಂದಿ ಹಾಗೂ ಸಹ ಪ್ರಯಾಣಿಕರು ಸರಿಯಾದ ಸಮಯದಲ್ಲಿ ಆತನನ್ನು ತಡೆದಿದ್ದಾರೆ. ಬಳಿಕ ವಿಮಾನ ಸುರಕ್ಷಿತವಾಗಿ ವಾರಣಾಸಿ ತಲುಪಿದ್ದು, ಆ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿಯ ವಶಕ್ಕೆ ಒಪ್ಪಿಸಲಾಗಿದೆ.

passenger-attempts-to-open-emergency-door-mid-flight
ವಿಮಾನ ಹಾರಾಟ ವೇಳೆ ತುರ್ತು ದ್ವಾರ ತೆರೆಯಲು ಯತ್ನಿಸಿದ ಪ್ರಯಾಣಿಕ..ತಪ್ಪಿದ ಭಾರೀ ದುರಂತ

ವಾರಣಾಸಿ(ಉತ್ತರ ಪ್ರದೇಶ): ದೆಹಲಿಯಿಂದ ವಾರಣಾಸಿಗೆ ತೆರಳುತ್ತಿದ್ದ ಸ್ಪೈಸ್​ ಜೆಟ್​​ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿವೋರ್ವ ತುರ್ತು ದ್ವಾರ​ ತೆಗೆಯಲು ಮುಂದಾಗಿ ಆತಂಕ ಸೃಷ್ಟಿಸಿದ್ದ ಘಟನೆ ನಡೆದಿದೆ. ಈ ವೇಳೆ ಸಿಬ್ಬಂದಿ ಹಾಗೂ ಸಹ ಪ್ರಯಾಣಿಕರು ಆತನನ್ನು ಬದಿಗೆಳೆದು ಸಂಭವಿಸಲಿದ್ದ ಬಹುದೊಡ್ಡ ದುರಂತವನ್ನು ತಪ್ಪಿಸಿದ್ದಾರೆ.

ಬಳಿಕ ಭದ್ರತಾ ಸಿಬ್ಬಂದಿ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ಆರಂಭಿಸಿದ್ದಾರೆ. ಈ ಸಂಪೂರ್ಣ ಘಟನೆಯನ್ನು ವಿಮಾನದಲ್ಲಿ ಕುಳಿತಿದ್ದ ಪ್ರಯಾಣಿಕರೊಬ್ಬರು ಮೊಬೈಲ್​​​ನಲ್ಲಿ ಸೆರೆಹಿಡಿದಿದ್ದು, ವೈರಲ್ ಆಗುತ್ತಿದೆ.

ವಿಮಾನ ಹಾರಾಟ ವೇಳೆ ತುರ್ತು ದ್ವಾರ ತೆರೆಯಲು ಯತ್ನಿಸಿದ ಪ್ರಯಾಣಿಕ

ಸ್ಪೈಸ್​​​ಜೆಟ್​​ ಸಂಸ್ಥೆಯ ವಿಮಾನ ದೆಹಲಿಯ ವಿಮಾನ ನಿಲ್ದಾಣದಿಂದ ಶನಿವಾರ ಮಧ್ಯಾಹ್ನ 2:15ಕ್ಕೆ ಹೊರಟು ವಾರಣಾಸಿಗೆ ಆಗಮಿಸುತ್ತಿತ್ತು. ವಿಮಾನದಲ್ಲಿ ಒಟ್ಟು 89 ಪ್ರಯಾಣಿಕರಿದ್ದರು. ಸದ್ಯ ತುರ್ತು ದ್ವಾರ ತೆಗೆಯಲು ಯತ್ನಿಸಿದಾತನನ್ನು ಹರಿಯಾಣದ ಗುರಗಾಂವ್ ನಿವಾಸಿ ಗೌರವ್ ಖನ್ನಾ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ವಿಮಾನದಲ್ಲಿ ಕೋಪಗೊಂಡಿದ್ದ ಆತ ತುರ್ತು ದ್ವಾರ ತೆರೆಯಲು ಮುಂದಾಗಿದ್ದಾನೆ. ತಕ್ಷಣ ಎಚ್ಚೆತ್ತ ಸಿಬ್ಬಂದಿ ಹಾಗೂ ಸಹ ಪ್ರಯಾಣಿಕರು ಸರಿಯಾದ ಸಮಯದಲ್ಲಿ ಆತನನ್ನು ತಡೆದಿದ್ದಾರೆ. ಅಲ್ಲದೆ ಸುಮಾರು 40 ನಿಮಿಷಕ್ಕೂ ಹೆಚ್ಚು ಹೊತ್ತು ಖನ್ನಾನನ್ನು ಹಿಡಿದುಕೊಂಡೇ ಕುಳಿತಿದ್ದಾರೆ.

ಬಳಿಕ ವಿಮಾನ ನಿಗದಿಯಂತೆ ವಾರಣಾಸಿ ನಿಲ್ದಾಣಕ್ಕೆ ಬಂದಿಳಿದಿದ್ದು, ಅಲ್ಲಿದ್ದ ಭದ್ರತಾ ಸಿಬ್ಬಂದಿಗೆ ಗೌರವ್​ ಖನ್ನಾನನ್ನು ಒಪ್ಪಿಸಲಾಗಿದೆ.

ಇದನ್ನೂ ಓದಿ: ಪಂಜಾಬ್​ ಬಿಜೆಪಿ ಶಾಸಕನ ಮೇಲೆ ಹಲ್ಲೆ ನಡೆಸಿ ಬೆತ್ತಲೆಗೊಳಿಸಿದ ರೈತರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.