ETV Bharat / bharat

ಶಶಿಕಲಾ ಸ್ವ ಪಕ್ಷಕ್ಕೆ ಮರಳುವ ಬಗ್ಗೆ ಪಕ್ಷ ನಿರ್ಧರಿಸುತ್ತದೆ: ಎಐಎಡಿಎಂಕೆ ನಾಯಕ ಓ ಪನ್ನೀರ್​​ ಸೆಲ್ವಂ - ಜಯಲಲಿತಾ ಅವರ ಆಪ್ತರಾದ ವಿ ಕೆ ಶಶಿಕಲಾ

ಶಶಿಕಲಾ, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ತಮ್ಮನ್ನು ತಾವೇ ಘೋಷಿಸಿಕೊಂಡು, ಪಕ್ಷದ ನಿಯಂತ್ರಣವನ್ನು ಮರಳಿ ಪಡೆಯಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ಬೆನ್ನಲ್ಲೇ ಮತ್ತೇ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಓ ಪನ್ನೀರಸೆಲ್ವಂ ಸುಳಿವು ಬಿಟ್ಟುಕೊಟ್ಟಿದ್ದಾರೆ.

ಎಐಎಡಿಎಂಕೆ  ನಾಯಕ  ಓ ಪನ್ನೀರಸೆಲ್ವಂ
ಎಐಎಡಿಎಂಕೆ ನಾಯಕ ಓ ಪನ್ನೀರಸೆಲ್ವಂ
author img

By

Published : Oct 25, 2021, 9:14 PM IST

ಮಧುರೈ: ಜಯಲಲಿತಾ ಅವರ ಆಪ್ತರಾದ ವಿ ಕೆ ಶಶಿಕಲಾ ಅವರನ್ನು ಪಕ್ಷಕ್ಕೆ ಮರು ಸೇರ್ಪಡೆ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ. ಈ ಸಂಬಂಧ ಪಕ್ಷ ಚರ್ಚೆ ನಡೆಸುತ್ತದೆ ಎಂದು ಎಐಎಡಿಎಂಕೆ ಪಕ್ಷದ ನಾಯಕ ಓ ಪನ್ನೀರಸೆಲ್ವಂ ಹೇಳಿದ್ದಾರೆ.

ಶಶಿಕಲಾ ಅವರ ರಾಜಕೀಯ ನಡೆಗಳ ಬಗ್ಗೆ ಪನ್ನೀರಸೆಲ್ವಂ ಅವರನ್ನು ಪ್ರಶ್ನಿಸಿದಾಗ ಈ ರೀತಿ ಹೇಳಿದ್ದಾರೆ. ಯಾರಾದರೂ ಕೂಡ ರಾಜಕೀಯಕ್ಕೆ ಸೇರಬಹುದು. ಆದರೆ, ಅವರನ್ನು ಒಪ್ಪಿಕೊಳ್ಳುವುದು ಅಥವಾ ತಿರಸ್ಕರಿಸುವುದು ಜನರ ಕೈಯಲ್ಲಿದೆ ಎಂದಿದ್ದಾರೆ.

ಪಕ್ಷದ ಸಂಯೋಜಕರೂ ಆಗಿರುವ ಪನ್ನೀರಸೆಲ್ವಂ, ಎಐಎಡಿಎಂಕೆ ಪಕ್ಷದ ಸಂಸ್ಥಾಪಕ ಎಂ ಜಿ ರಾಮಚಂದ್ರನ್ ಅವರ ಕಾಲದಿಂದಲೂ ಕೇಡರ್ ಆಧಾರಿತ ಪಕ್ಷವಾಗಿದೆ ಮತ್ತು ಸಂಯೋಜಕರು ಮತ್ತು ಸಹ ಸಂಯೋಜಕರನ್ನು ಒಳಗೊಂಡ ಸಾಂಸ್ಥಿಕ ರಚನೆಯನ್ನು ಆಧರಿಸಿ ಈಗ ಪಕ್ಷವನ್ನು ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಶಶಿಕಲಾ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ, ಎಐಎಡಿಎಂಕೆ ಹಿರಿಯ ಮತ್ತು ಉನ್ನತ ಮಟ್ಟದ ಪದಾಧಿಕಾರಿಗಳು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.