ಕೋಲ್ಕತ್ತಾ(ಪಶ್ಚಿಮ ಬಂಗಾಳ): ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ, ಸಹಚರೆ ಅರ್ಪಿತಾ ಮುಖರ್ಜಿ ಬಂಧನವಾಗಿದ್ದು, 20 ಕೋಟಿಗೂ ಅಧಿಕ ಮೊತ್ತ ಹಾಗೂ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳಲಾಗಿದೆ. ಇದರ ಬೆನ್ನಲ್ಲೇ ಕೆಲ ಮಹತ್ವದ ದಾಖಲೆ ವಶಕ್ಕೆ ಪಡೆದುಕೊಳ್ಳುವಲ್ಲಿ ಜಾರಿ ನಿರ್ದೇಶನಾಲಯ ಯಶಸ್ವಿಯಾಗಿದೆ.
ಇತ್ತೀಚಿನ ಮಾಹಿತಿ ಪ್ರಕಾರ ಪಾರ್ಥ ಚಟರ್ಜಿ ತಮ್ಮ ಸಾಕು ನಾಯಿಗಳಿಗೋಸ್ಕರ 24X7 ಹವಾನಿಯಂತ್ರಿತ ಮನೆ ನಿರ್ಮಾಣ ಮಾಡಿದ್ದರು ಎಂದು ತಿಳಿದು ಬಂದಿದೆ. ದಕ್ಷಿಣ ಕೋಲ್ಕತ್ತಾದ ನಕ್ತಾಲಾದಲ್ಲಿರುವ ಅವರ ಸ್ವತಃ ಮನೆಯಿಂದ ಕೆಲ ಮೀಟರ್ ದೂರದಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಸಾಕು ನಾಯಿ ಇಡಲಾಗಿದೆ. ಫ್ಲಾಟ್ವೊಂದರಲ್ಲಿ ನಾಲ್ಕು ವಿವಿಧ ತಳಿಯ ಶ್ವಾನಗಳಿದ್ದು, ಅವುಗಳಿಗೋಸ್ಕರ ದಿನದ 24 ಗಂಟೆ ಎಸಿ ಅಳವಡಿಕೆ ಮಾಡಲಾಗಿದೆ.ಶ್ವಾನ ನೋಡಿಕೊಳ್ಳಲು ಮೂವರು ಸಿಬ್ಬಂದಿ ಸಹ ನೇಮಕ ಮಾಡಲಾಗಿದೆ.
ಈ ಹಿಂದೆ ಪಶ್ಚಿಮ ಬಂಗಾಳದ ಶಿಕ್ಷಣ ಸಚಿವರಾಗಿದ್ದ ಪಾರ್ಥ ಚಟರ್ಜಿ ಅವರ ಮೃತ ಪತ್ನಿಯ ಸ್ಮರಣಾರ್ಥವಾಗಿ ಕೋಲ್ಕತ್ತಾದಲ್ಲಿ ಶ್ವಾನ ಆಸ್ಪತ್ರೆ ತೆರೆಯಲು ನಿರ್ಧರಿಸಿದ್ದರು. 2018ರ ಜುಲೈ ತಿಂಗಳಲ್ಲಿ ಪಾರ್ಥ ಚಟರ್ಜಿ ಅವರ ಪತ್ನಿ ಬಬ್ಲಿ ನಿಧನರಾಗಿದ್ದು, ಅವರ ನೆನಪಿಗೋಸ್ಕರ ಬಬ್ಲಿ ಚಟರ್ಜಿ ಪೆಟ್ ಆಸ್ಪತ್ರೆ ಓಪನ್ ಮಾಡಲು ಮುಂದಾಗಿದ್ದರು. ಇದಕ್ಕೆ ಮುಖ್ಯ ಕಾರಣ ಅವರ ಪತ್ನಿ ಶ್ವಾನಗಳ ಮೇಲೆ ಹೆಚ್ಚಿನ ಪ್ರೀತಿ ಇಟ್ಟುಕೊಂಡಿದ್ದರು.
ಇದನ್ನೂ ಓದಿರಿ: ನಟಿ ಮನೆಯಲ್ಲಿ ಕೋಟಿ - ಕೋಟಿ ಹಣ ಜಪ್ತಿ: ಇಡಿಯಿಂದ ಅರ್ಪಿತಾ ಮುಖರ್ಜಿ ಬಂಧನ