ETV Bharat / bharat

ಬಿಜೆಪಿ ಸಂಸದೀಯ ಮಂಡಳಿ, ಕೇಂದ್ರ ಚುನಾವಣಾ ಸಮಿತಿಯಲ್ಲಿ ಸ್ಥಾನ ಪಡೆದ ಬಿಎಸ್‌ವೈ - ಕೇಂದ್ರ ಚುನಾವಣಾ ಸಮಿತಿ

ಭಾರತೀಯ ಜನತಾ ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಸಮಿತಿಯಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ. ಸಂಸದೀಯ ಮಂಡಳಿಯಲ್ಲಿ 11 ಸದಸ್ಯರಿದ್ದರೆ, ಚುನಾವಾಣಾ ಸಮಿತಿಯಲ್ಲಿ 15 ಸದಸ್ಯರ ಹೆಸರುಗಳನ್ನು ಪ್ರಕಟಿಸಲಾಗಿದೆ.

Bharatiya Janata Party  Major changes in parliamentary board  Former CM Yediyurappa news  ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ವದ ಬದಲಾವಣೆ  ಭಾರತೀಯ ಜನತಾ ಪಕ್ಷದ ಸಂಸದೀಯ ಮಂಡಳಿ  ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ  ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್  ಭಾರತೀಯ ಜನತಾ ಪಕ್ಷದ ಕೇಂದ್ರ ಚುನಾವಣಾ ಸಮಿತಿ  ಕೇಂದ್ರ ಚುನಾವಣಾ ಸಮಿತಿ
ಬಿಜೆಪಿ ಸಂಸದೀಯ ಮಂಡಳಿ
author img

By

Published : Aug 17, 2022, 2:49 PM IST

ನವದೆಹಲಿ: ಮುಂಬರುವ ಚುನಾವಣೆಯ ದೃಷ್ಟಿಯಿಂದ ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿಯಲ್ಲಿ ಮಹತ್ವದ ಬದಲಾವಣೆಯಾಗಿದೆ. ಸಂಸದೀಯ ಮಂಡಳಿ ಹಾಗು ಚುನಾವಣಾ ಸಮಿತಿ ಎರಡಲ್ಲೂ ಬಿ ಎಸ್‌ ಯಡಿಯೂರಪ್ಪ ಸ್ಥಾನ ಪಡೆದಿರುವುದು ವಿಶೇಷವಾಗಿದೆ. ಈ ಮೂಲಕ ಪಕ್ಷದ ಕೇಂದ್ರ ನಾಯಕರಿಂದ ಬಿಎಸ್‌ವೈ ಕಡೆಗಣನೆಗೆ ಒಳಪಟ್ಟಿದ್ದಾರೆ ಎಂಬ ವಿಚಾರ ಸುಳ್ಳಾಗಿದೆ.

ಇದೇ ವೇಳೆ, ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಅವರನ್ನು ಕೇಂದ್ರೀಯ ಸಂಸದೀಯ ಮಂಡಳಿಯಿಂದ ಕೈಬಿಡಲಾಗಿದೆ. ಚುನಾವಣಾ ಸಮಿತಿಗೆ ಈ ಸಲ ಹೈಕಮಾಂಡ್‌ ದೇವೇಂದ್ರ ಫಡ್ನವೀಸ್‌ಗೆ ಮಣೆ ಹಾಕಿದೆ.

ಇನ್ನುಳಿದಂತೆ, ಸಂಸದೀಯ ಮಂಡಳಿಯಲ್ಲಿ ಸುಧಾ ಯಾದವ್, ಇಕ್ಬಾಲ್, ಸರ್ಬಾನಂದ ಸೋನೋವಾಲ್, ಕೆ ಲಕ್ಷ್ಮಣ್ ಅವರನ್ನು ಹೊಸ ಸದಸ್ಯರನ್ನಾಗಿ ನೇಮಿಸಿಕೊಳ್ಳಲಾಗಿದೆ. ಪ್ರಧಾನಿ ಮೋದಿ, ಅಮಿತ್ ಶಾ, ರಾಜನಾಥ್‌ ಸಿಂಗ್‌ ಹಾಗು ಜೆ ಪಿ ನಡ್ಡಾ ಮಂಡಳಿಯಲ್ಲಿರುವ ಪ್ರಮುಖರು.

ಸಂಸದೀಯ ಮಂಡಳಿಯ ಸದಸ್ಯರು:

  • ಜಗತ್ ಪ್ರಕಾಶ್ ನಡ್ಡಾ (ಅಧ್ಯಕ್ಷರು)
  • ನರೇಂದ್ರ ಮೋದಿ
  • ರಾಜನಾಥ್ ಸಿಂಗ್
  • ಅಮಿತ್ ಶಾ
  • ಬಿ ಎಸ್ ಯಡಿಯೂರಪ್ಪ
  • ಸರ್ಬಾನಂದ ಸೋನೋವಾಲ್
  • ಕೆ ಲಕ್ಷ್ಮಣ್
  • ಇಕ್ಬಾಲ್ ಸಿಂಗ್ ಲಾಲ್ಪುರ
  • ಸುಧಾ ಯಾದವ್
  • ಸತ್ಯನಾರಾಯಣ ಜಟಿಯಾ
  • ಬಿ.ಎಲ್.ಸಂತೋಷ್ (ಕಾರ್ಯದರ್ಶಿ)

ಕೇಂದ್ರ ಚುನಾವಣಾ ಸಮಿತಿಯ ಸದಸ್ಯರು:

  • ಜಗತ್ ಪ್ರಕಾಶ್ ನಡ್ಡಾ (ಅಧ್ಯಕ್ಷರು)
  • ನರೇಂದ್ರ ಮೋದಿ
  • ರಾಜನಾಥ್ ಸಿಂಗ್
  • ಅಮಿತ್ ಶಾ
  • ಬಿಎಸ್ ಯಡಿಯೂರಪ್ಪ
  • ಸರ್ಬಾನಂದ ಸೋನೋವಾಲ್
  • ಕೆ ಲಕ್ಷ್ಮಣ್
  • ಇಕ್ಬಾಲ್ ಸಿಂಗ್ ಲಾಲ್ಪುರ
  • ಸುಧಾ ಯಾದವ್
  • ಸತ್ಯನಾರಾಯಣ ಜಾತಿಯ
  • ಭೂಪೇಂದ್ರ ಯಾದವ್
  • ದೇವೇಂದ್ರ ಫಡ್ನವೀಸ್
  • ಬಿ.ಎಲ್.ಸಂತೋಷ್ (ಕಾರ್ಯದರ್ಶಿ)
  • ವಿ ಶ್ರೀನಿವಾಸ್ (ಮಾಜಿ ಅಧಿಕಾರಿ)

ಇದನ್ನೂ ಓದಿ: ಬಿಎಸ್​ವೈ ಭೇಟಿಯಾದ ಬೊಮ್ಮಾಯಿ: ಲೋಕಾಯುಕ್ತ ಬಲವರ್ಧನೆ ಕುರಿತು ನಡೀತಾ ಚರ್ಚೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.